ಕೋಲಾರ: ಪೊಲೀಸ್ ಠಾಣೆ ಸಮೀಪವೇ SBI ATM ದರೋಡೆ, ₹27 ಲಕ್ಷ ಕಳ್ಳತನ!

ಕೋಲಾರ: ಕೋಲಾರ ನಗರದ ಎಸ್ಬಿಐನಲ್ಲಿ ದರೋಡೆಯಾಗಿದೆ. ಕೋಲಾರ ನಗರದ ಗಲ್ ಪೇಟೆ ಪೋಲೀಸ್ ಠಾಣೆ ಸಮೀಪದ ಸಹಕಾರ ನಗರದಲ್ಲಿರುವ ಎಸ್ಬಿಐ ಎಟಿಎಂನಲ್ಲಿ ಕಳ್ಳತನವಾಗಿದ್ದು, ಎಟಿಎಂ ಮಷಿನ್ ನಲ್ಲಿದ್ದ ಸುಮಾರು 27 ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆ.
ಕಳ್ಳತನದ ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್ ಸೇರಿದಂತೆ ಬೆರಳಚ್ವು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.