₹1000 ಸಾಲದ ವಿಚಾರಕ್ಕೆ ಯುವಕರ ನಡುವೆ ಚಾಕು ಇರಿತ, ಇಬ್ಬರಿಗೆ ಗಾಯ!

ನೆಲಮಂಗಲ: ಯುವತಿಗೆ 2,000 ರೂ. ಸಾಲ ನೀಡಿದ ಸುದೀಪ್ (22) ಮತ್ತು ಚೇತನ್ (23) ಎಂಬ ಯುವಕರ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಚಾಕು ಇರಿತದಿಂದ ಗಾಯಗೊಂಡಿದ್ದಾರೆ. ಈ ಘಟನೆ, 9 ಜುಲೈ 2023 ರಂದು ಸಂಜೆ, ಜ್ಯೂಸ್ ಸೆಂಟರ್‌ನಲ್ಲಿ ಸಂಭವಿಸಿದ್ದು, ಇದೀಗ ಬೆಳಕಿಗೆ ಬಂದಿದೆ.

ಸುದೀಪ್, ಯುವತಿಗೆ ಕೊಟ್ಟ ಸಾಲವನ್ನು ವಾಪಸ್ ಕೇಳುತ್ತಿದ್ದಾಗ, ಯುವತಿಯ ಪರವಾಗಿ ನಾಲ್ಕು ಯುವಕರು ಗಲಾಟೆ ಮಾಡಿದ್ದಾರೆ. ಸುದೀಪ್ ಮತ್ತು ಚೇತನ್ ಮಧ್ಯೆ ಪ್ರವೇಶಿಸಿದಾಗ, ಚೇತನ್ ಅವರನ್ನು ಚಾಕು ಇರಿದು ಗಾಯಗೊಳಿಸಲಾಯಿತು. ಗಾಯಗೊಂಡ ಇಬ್ಬರನ್ನು ನೆಲಮಂಗಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಅವರ ಜೀವಕ್ಕೆ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಈ ಮೊದಲು ಈಕೆ ಒಂದು ಸಾವಿರ ಹಣವನ್ನು ವಾಪಸ್ ನೀಡಿದ್ದಳು.ಉಳಿದ ಒಂದು ಸಾವಿರಕ್ಕಾಗಿ ಈ ಘಟನೆ ನಡೆದಿದೆ.
