Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಿಮ್ ಜಾಂಗ್ ಉನ್ ಅಧಿಪತ್ಯ: ಶೇ. 99.93 ಮತಗಳೊಂದಿಗೆ ಮತ್ತೆ ಅಧಿಕಾರಕ್ಕೆ

Spread the love

ಪ್ಯೊಂಗ್ಯಾಂಗ್: 2026 ರ ಉತ್ತರ ಕೊರಿಯಾ (North Korea) ಚುನಾವಣೆಯಲ್ಲಿ ಕಿಮ್ ಜಾಂಗ್ ಉನ್ (Kim Jong Un) 99.93% ಮತಗಳನ್ನು ಪಡೆದು ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

15 ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು ಮಾರ್ಚ್ 15 ರಂದು ಮತದಾನ ನಡೆಯಿತು. ಕಿಮ್ ಜಾಂಗ್ ಉನ್ ಅವರ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಮತ್ತು ಅದರ ಮಿತ್ರಪಕ್ಷಗಳು 99.97% ಮತಗಳನ್ನು ಗಳಿಸಿ ಎಲ್ಲಾ ಸ್ಥಾನಗಳನ್ನು ಗೆದ್ದಿವೆ.
ನೋಂದಾಯಿತ ಮತದಾರರಲ್ಲಿ 99.99% ರಷ್ಟು ಜನರು ಭಾಗವಹಿಸಿದ್ದರು. ಕೇವಲ 0.0037% ಜನರು ವಿದೇಶದಲ್ಲಿ ಅಥವಾ ಸಮುದ್ರದಲ್ಲಿ ಕೆಲಸ ಮಾಡುವುದರಿಂದ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಕೇವಲ 0.00003% ಜನರು ಮಾತ್ರ ಮತದಾನದಿಂದ ಹೊರಗುಳಿದಿದ್ದರು. ಮತ ಚಲಾಯಿಸಿದವರಲ್ಲಿ, 99.93% ಜನರು ಅಭ್ಯರ್ಥಿಗಳನ್ನು ಬೆಂಬಲಿಸಿದರು. ಆದರೆ 0.07% ಜನರು ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

ಡಿಪಿಆರ್‌ಕೆ ಚುನಾವಣಾ ಕಾನೂನುಗಳ ಅಡಿಯಲ್ಲಿ, ಕಾರ್ಮಿಕರು, ರೈತರು, ಬುದ್ಧಿಜೀವಿಗಳು, ಸೇವಾ ಸಿಬ್ಬಂದಿ ಮತ್ತು ಅಧಿಕಾರಿಗಳು ಸೇರಿದಂತೆ 687 ಪ್ರತಿನಿಧಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಲಾಯಿತು. ಪ್ರತಿ ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿಯನ್ನು ಮಾತ್ರ ಪಟ್ಟಿ ಮಾಡಲಾಗಿರುವುದರಿಂದ, ಹೊರಗಿನ ವೀಕ್ಷಕರು ಈ ಪ್ರಕ್ರಿಯೆಯನ್ನು “ಪ್ರದರ್ಶನ ಚುನಾವಣೆ” ಎಂದು ಬಣ್ಣಿಸಿದ್ದಾರೆ. 1957 ರ ನಂತರ ಸುಪ್ರೀಂ ಪೀಪಲ್ಸ್ ಅಸೆಂಬ್ಲಿ ಚುನಾವಣೆಯಲ್ಲಿ ಮೊದಲ ಬಾರಿಗೆ ವಿರೋಧ ಮತಗಳನ್ನು ರಾಜ್ಯ ಮಾಧ್ಯಮ ಒಪ್ಪಿಕೊಂಡಿದೆ.
ಆಯ್ಕೆಯಾದವರಲ್ಲಿ ಕಿಮ್ ಯೋ ಜಾಂಗ್ ಕೂಡ ಇದ್ದರು. ಅವರು ಕಿಮ್ ಜಾಂಗ್ ಉನ್ ಅವರ ಸಹೋದರಿ, ಕಲ್ಲಿಮ್ಗಿಲ್ ಕ್ಷೇತ್ರ ಸಂಖ್ಯೆ 5 ರಲ್ಲಿ ಗೆದ್ದರು.‌ ಉತ್ತರ ಕೊರಿಯಾದಲ್ಲಿ ಇಂತಹ ಅಗಾಧ ಗೆಲುವುಗಳು ಸಾಮಾನ್ಯವಾದರೂ, 0.07% ಭಿನ್ನಮತದ ಮತಗಳು ಸೋಷಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿವೆ.
ಸೋತ 0.07% ಜನರಿಗೆ ಮೌನದ ಕ್ಷಣ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ‘ಕಿಮ್ ಅವರ ಚಿತ್ರದ ಜೊತೆಗೆ ಆ 0.07% ಮತ ಪಡೆದಿರುವವರ ಫೋಟೊವನ್ನೂ ಸೇರಿಸಿ’ ಎಂದು ವ್ಯಂಗ್ಯಾತ್ಮಕ ಕಾಮೆಂಟ್‌ ಹಾಕಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *