ಯುಎಇಯಲ್ಲಿ ಕೇರಳ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳಕ್ಕೆ ಪತಿ ವಿರುದ್ಧ ಕೊಲೆ ಆರೋಪ

ನವದೆಹಲಿ: ಯುಎಇಯಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ಕೊಲ್ಲಂ ಜಿಲ್ಲೆಯವರಾದ ಅತುಲ್ಯ ಕಳೆದ ಒಂದು ವರ್ಷದಿಂದ ಯುಎಇಯಲ್ಲಿ ವಾಸಿಸುತ್ತಿದ್ದಾರೆ. ಅವರು ಹೊಸ ಉದ್ಯೋಗವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಆದರೆ, ಶನಿವಾರ ಬೆಳಿಗ್ಗೆ ಅವರು ಸಾವನ್ನಪ್ಪಿದ್ದಾರೆ. ಅತುಲ್ಯ ಅವರ ಪತಿ ಸತೀಶ್ ಶಂಕರ್ ಸಹ ಯುಎಇಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತನ್ನ ಪತ್ನಿಯನ್ನು ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಾನು ನನ್ನ ಪತ್ನಿಯನ್ನು ಹೊಡೆದಿರುವುದು ನಿಜ ಎಂದು ಸತೀಶ್ ಹೇಳಿದ್ದಾರೆ. “ನಾನು ಕುಡಿದಾಗ ಆಕೆಗೆ ಹೊಡೆದಿದ್ದೆ. ಆದರೆ, ನಾನು ಪ್ರತಿದಿನ ಹೊಡೆಯುತ್ತಿರಲಿಲ್ಲ. ಆಕೆ ಕೇವಲ ನನ್ನವಳು ಮಾತ್ರ. ಹಾಗಾಗಿ, ಪ್ರೀತಿಯಿಂದ ಅವಳಿಗೆ ಹೊಡೆಯುತ್ತಿದ್ದೆ ” ಎಂದು ಅವರು ಹೇಳಿದ್ದಾರೆ.

ಸತೀಶ್ ಅವರ ಪತ್ನಿ ತಮ್ಮನ್ನು ದೈಹಿಕವಾಗಿ ನಿಂದಿಸುತ್ತಿದ್ದರು ಎಂದು ಆರೋಪಿಸಿದ್ದರು. ಅತುಲ್ಯ ಅವರನ್ನು ಆಕೆಯ ಗಂಡನ ಕುಟುಂಬ ಸತೀಶ್ ಅವರನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹಿಂಸಿಸುತ್ತಿದ್ದರು ಎಂದು ಆರೋಪಿಸಿದೆ. ಈ ಮಧ್ಯೆ, ದುಬೈನಲ್ಲಿ ಖಾಸಗಿ ಸಂಸ್ಥೆಯಲ್ಲಿ ಸೈಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸತೀಶ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಅತುಲ್ಯ ಅವರ ಕುಟುಂಬವು ಆರೋಪಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಕೇರಳದ ಕೊಲ್ಲಂನ 29 ವರ್ಷದ ಮಹಿಳೆ ಶನಿವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.
ಅತುಲ್ಯ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕೊಲ್ಲಂನಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಎಫ್ಐಆರ್ನಲ್ಲಿ ಅತುಲ್ಯ ಅವರೊಂದಿಗಿನ ವಿವಾಹದ ಸಮಯದಲ್ಲಿ ಸತೀಶ್ ಅವರಿಗೆ ಬೈಕ್ ಮತ್ತು ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.
2014ರಲ್ಲಿ ಕೊಲ್ಲಂ ನಿವಾಸಿ ಸತೀಶ್ ಅವರನ್ನು ವಿವಾಹವಾದ ಅತುಲ್ಯ ಶೇಖರ್ ಶಾರ್ಜಾದಲ್ಲಿರುವ ತನ್ನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜುಲೈ 18 ಮತ್ತು ಜುಲೈ 19ರ ನಡುವೆ ಸತೀಶ್ ನನ್ನ ಮಗಳ ಉಸಿರುಗಟ್ಟಿಸಿ, ಹೊಟ್ಟೆಗೆ ಒದ್ದು, ತಟ್ಟೆಯಿಂದ ತಲೆಗೆ ಹೊಡೆದರಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ವಿವಾಹವಾದಾಗಿನಿಂದ ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸತೀಶ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
