ಕೇರಳ: ವಿದ್ಯಾರ್ಥಿಗಳನ್ನು ಡ್ರಗ್ ಜಾಲದೊಳಗೆ ಸಿಲುಕಿಸುವ ಮಾಫಿಯಾ ಹೊಸ ತಂತ್ರದೊಂದಿಗೆ ಕೇರಳದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ದಂಧೆಯ ಹೆಸರು ‘ಸ್ವೀಟ್ ಡ್ರಗ್’.

ಕೇರಳ : ವಿದ್ಯಾರ್ಥಿಗಳನ್ನು ಡ್ರಗ್ ಜಾಲದೊಳಗೆ ಸಿಲುಕಿಸುವ ಮಾಫಿಯಾ ಹೊಸ ತಂತ್ರದೊಂದಿಗೆ ಕೇರಳದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ದಂಧೆಯ ಹೆಸರು ‘ಸ್ವೀಟ್ ಡ್ರಗ್’.
ಇಂತಹ ‘ಗಾಂಜಾ ಸ್ವೀಟ್’ಗಳನ್ನು ಕೋಯಿಕ್ಕೋಡ್ನ ಪೆಟ್ಟಮ್ಮಲ್ನ ಅಂಗಡಿಯಿಂದ ಅಬಕಾರಿ ಇಲಾಖೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಅಬಕಾರಿ ಇಲಾಖೆ ಅಧಿಕಾರಿಗಳು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಉತ್ತರ ಪ್ರದೇಶದ ಆಕಾಶ್ ಎಂದು ಗುರುತಿಸಲಾಗಿದೆ. ಗಾಂಜಾ ಮಿಶ್ರಿತ 31 ಗಾಂಜಾ ಸ್ವೀಟ್ಗಳನ್ನು ಈತನಿಂದ ಜಪ್ತಿ ಮಾಡಲಾಗಿದೆ. ಪ್ರತೀ ಗಾಂಜಾ ಸ್ವೀಟ್ 96 ಗ್ರಾಂ ಇದ್ದು, ಒಂದಕ್ಕೆ 30ರಿಂದ 50 ರೂ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಯಾವುದೇ ಅನುಮಾನ ಮೂಡದಂತೆ ಶಾಲೆ ಮತ್ತು ಕಾಲೇಜಿನ ಹತ್ತಿರದ ಸಣ್ಣ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಸ್ವೀಟ್ನೊಳಗೆ ಗಾಂಜಾ ಮಿಶ್ರಣ ಮಾಡಿದ ಕಾರಣಕ್ಕೆ ಇದು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿತ್ತು. ಹಾಗೆಯೇ ಇತರರೂ ಕೂಡ ಇದರ ಆಕರ್ಷಣೆಗೊಳಗಾಗುತ್ತಿದ್ದರು. ಉತ್ತರಾಖಂಡ್ನಿಂದ ಈ ಸಿಹಿಯನ್ನು ಕೇರಳಕ್ಕೆ ತರಿಸಲಾಗಿದೆ. ಸಗಟಿನಲ್ಲಿ ಕೇರಳಕ್ಕೆ ತರಿಸಿ, ಅನೇಕ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.