ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸು- ಅಪಾಯದಿಂದ ಪಾರು

ಕಾಸರಗೋಡು: ಶಾಲಾ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದ ಘಟನೆ ಸೋಮವಾದ ಬೆಳಿಗ್ಗೆ ಚಿತ್ತಾರಿಯಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.

ರಸ್ತೆಯಿಂದ ಜಾರಿದ ಬಸ್ಸು ತೆಂಗಿಗೆ ತಾಗಿ ನಿಂತಿದ್ದು, ಇದರಿಂದ ಅಪಾಯ ತಪ್ಪಿದೆ ಎನ್ನಬಹುದು. ಬಸ್ಸಿನಲ್ಲಿ 12 ರಷ್ಟು ವಿದ್ಯಾರ್ಥಿಗಳಿದ್ದರು. ಬೆಳಿಗ್ಗೆ ಸೌತ್ ಚಿತ್ತಾರಿಯ ಸಮೀಪ ಕೋಟಿಕುಳಂ ಶಾಲೆಯ ವಿದ್ಯಾರ್ಥಿಗಳು ಕರೆದೊಯ್ಯುತ್ತಿದ್ದ ಬಸ್ಸು ಈ ಅಪಘಾತಕ್ಕಿಡಾಗಿದೆ.ವಿದ್ಯಾರ್ಥಿಗಳನ್ನು ರಕ್ಷಿಸಿ ಬೇರೆ ವಾಹನದಲ್ಲಿ ಶಾಲೆಗೆ ಕರೆದೊಯ್ಯಲಾಯಿತು. ಬಳಿಕ ಕ್ರೇನ್ ಬಳಸಿ ಬಸ್ಸನ್ನು ಮೇಲಕ್ಕೆತ್ತಲಾಯಿತು.
