Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರ್ನಾಟಕಕ್ಕೆ ಮದ್ಯ ಮಾರಾಟದಿಂದ ಆದಾಯ ಕುಸಿತ: ಆಂಧ್ರದ ನೀತಿ ಮತ್ತು ಬೆಲೆ ಏರಿಕೆ ಕಾರಣ

Spread the love

ಕರ್ನಾಟಕದಲ್ಲಿ ಮದ್ಯದ ಬೆಲೆ ನಿರಂತರವಾಗಿ ಏರಿಕೆ ಆಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಮದ್ಯದ ಬೆಲೆ ಏರಿಕೆ ಆಗಿದೆ. ಇದೀಗ ಮದ್ಯದ ಆದಾಯವೂ ಸರ್ಕಾರಕ್ಕೆ ಕುಸಿತ ಕಂಡಿದೆ. ಈಗಾಗಲೇ ನಿರಂತರವಾಗಿ ಮದ್ಯದ ಬೆಲೆ ಏರಿಕೆ ಆಗಿರುವುದರಿಂದ ಬೆಂಗಳೂರು ಸೇರಿ ವಿವಿಧ ಭಾಗದಲ್ಲಿ ಮದ್ಯ ಮಾರಾಟವು ಭರ್ಜರಿ ಕುಸಿತ ಕಂಡಿದೆ.

ಮದ್ಯದ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಿರುವುದರಿಂದ ಮದ್ಯ ಪ್ರಿಯರು ಮದ್ಯ ಖರೀದಿ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮದ್ಯದಿಂದ ಬರುತ್ತಿದ್ದ ಆದಾಯ ಕುಸಿತ ಆಗಿದೆ. ಇದೀಗ ಆಂಧ್ರ ಪ್ರದೇಶದ ಸರ್ಕಾರದ ನಿರ್ಧಾರದಿಂದಲೂ ಲಾಸ್ ಆಗುತ್ತಿದೆ.

ರಾಜ್ಯದಲ್ಲಿ ಮದ್ಯ ಪ್ರಿಯರಿಗೆ ನಿರಂತರವಾಗಿ ಶಾಕ್ ಕೊಡುತ್ತಿದ್ದ ಸರ್ಕಾರಕ್ಕೆ ಇದೀಗ ಆಂಧ್ರಪ್ರದೇಶದಿಂದಲೂ ಶಾಕ್ ಎದುರಾಗಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ಮದ್ಯ ಮಾರಾಟ ಹಾಗೂ ಅಬಕಾರಿ ಇಲಾಖೆಯಲ್ಲಿ ಹಲವು ಪ್ರಮುಖ ಬದಲಾವಣೆಗಳು ಆಗಿವೆ. ಅದರಲ್ಲಿ ಮದ್ಯ ಬೆಲೆ ಏರಿಕೆ, ರೆಸ್ಟೋರೆಂಟ್ ಮತ್ತು ಪಬ್ ಹಾಗೂ ಬಾರ್‌ಗಳ ಲೈಸೆನ್ಸ್‌ ಶುಲ್ಕವನ್ನೂ ಹೆಚ್ಚಳ ಮಾಡಲಾಗಿದೆ. ಇದೆಲ್ಲವೂ ಪರೋಕ್ಷವಾಗಿ ಮದ್ಯ ಪ್ರಿಯರ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಎಲ್ಲಾ ಸೇವೆಗಳ ಬೆಲೆಯೂ ಏರಿಕೆಯಾಗಿದ್ದು ಕೆಲವು ಮದ್ಯ ಪ್ರಿಯರು ಮದ್ಯ ಖರೀದಿಯನ್ನು ಕಡಿಮೆ ಮಾಡಿದ್ದಾರೆ. ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಕರ್ನಾಟಕಕ್ಕೆ ಬರುತ್ತಿದ್ದ ಲಾಭವೂ ಈಗ ಕುಸಿತ ಕಂಡಿದೆ.

ಆಸ್ತಿ ಹೊರತುಪಡಿಸಿದರೆ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ಬರುವ ಮತ್ತೊಂದು ಕ್ಷೇತ್ರ ಅಬಕಾರಿ ಇಲಾಖೆ ಸೇರಿದೆ. ಅಬಕಾರಿಯಿಂದ ರಾಜ್ಯ ಸರ್ಕಾರವು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿದೆ. ಈ ನಡುವೆ ಆಂಧ್ರಪ್ರದೇಶದ ಮದ್ಯ ಪ್ರಿಯರಿಂದ ಕರ್ನಾಟಕಕ್ಕೆ ಬರುತ್ತಿದ್ದ ಆದಾಯವೂ ಭಾರೀ ಕುಸಿತ ಕಂಡಿದೆ. ಆಂಧ್ರ ಪ್ರದೇಶದ ಹೊಸ ಅಬಕಾರಿ ನೀತಿಯು ಕರ್ನಾಟಕ ಸರ್ಕಾರಕ್ಕೆ ಲಾಸ್ ಸೃಷ್ಟಿ ಮಾಡಿದೆ.

ಕರ್ನಾಟಕದ ಗಡಿ ಪ್ರದೇಶಗಳಲ್ಲಿರುವ ಬಾರ್, ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಂಧ್ರ ಮದ್ಯ ಪ್ರಿಯರು ಬರುತ್ತಿದ್ದರು. ಆದರೆ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹೊಸ ಅಬಕಾರಿ ನೀತಿಯಿಂದ ಅಲ್ಲೇ ಕಡಿಮೆ ಬೆಲೆಗೆ ಮದ್ಯ ಸಿಗುತ್ತಿದೆ. ಕರ್ನಾಟಕದ ಪ್ರಮುಖ ಮದ್ಯ ಬ್ರ್ಯಾಂಡ್‌ಗಳು ಸಹ ಅಲ್ಲಿ ಸಿಗುತ್ತವೆ.

ಮದ್ಯ ಖರೀದಿಗೆ ಆಂಧ್ರ ಪ್ರದೇಶದಿಂದ ಕರ್ನಾಟಕದ ವಿವಿಧ ಗಡಿ ಪ್ರದೇಶಗಳಿಗೆ ಬರುತ್ತಿದ್ದ ಮದ್ಯ ಪ್ರಿಯರ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಆಂಧ್ರದಲ್ಲೇ ಕಡಿಮೆ ಬೆಲೆಗೆ ಹಾಗೂ ಒಳ್ಳೆಯ ಬ್ರ್ಯಾಂಡ್‌ನ ಮದ್ಯ ಸಿಗುತ್ತಿರುವುದರಿಂದ ಜನ ಅಲ್ಲಿಂದ ಇಲ್ಲಿಗೆ ಬರುವುದು ಕಡಿಮೆಯಾಗಿದೆ. ಕೋಲಾರ ಸೇರಿದಂತೆ ವಿವಿಧ ಗಡಿಭಾಗದ ಜಿಲ್ಲೆಗಳಿಗೆ ಆಂಧ್ರ ಪ್ರದೇಶದಿಂದ ಮದ್ಯ ಪ್ರಿಯರು ಮದ್ಯ ಖರೀದಿ ಮಾಡುವುದಕ್ಕೆ ಬರುತ್ತಿದ್ದರು. ಆದರೆ ಈಗ ಇಳಿಕೆಯಾಗಿದ್ದು, ಇದರಿಂದ ಕೋಲಾರದಲ್ಲಿ ಮದ್ಯ ಮಾರಾಟ ಪ್ರಮಾಣವು ಶೇ 4.32 ರಷ್ಟು ಕುಸಿತವಾಗಿದೆ. ಇದರಿಂದ ರಾಜ್ಯ ಸರ್ಕಾರದ ಆದಾಯ ಇಳಿಕೆಯಾಗಿದೆ ಎಂದು ಹೇಳಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *