Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಯುಶಕ್ತಿ ವಿಸ್ತರಣೆಗೆ ಪ್ರಥಮ ಸ್ಥಾನ: ಕರ್ನಾಟಕಕ್ಕೆ ಕೇಂದ್ರ ಪ್ರಶಸ್ತಿ

Spread the love

ಬೆಂಗಳೂರು: ಕಳೆದ ಹಣಕಾಸು ವರ್ಷದಲ್ಲಿ ಅತಿಹೆಚ್ಚು ವಾಯುಶಕ್ತಿ ಸಾಮರ್ಥ್ಯ ಹೆಚ್ಚಿಸಿದ ಕಾರಣಕ್ಕೆ ಕೇಂದ್ರದಿಂದ ಕರ್ನಾಟಕಕ್ಕೆ ಪ್ರಶಸ್ತಿ ನೀಡಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ 1,331.48 ಮೆಗಾವ್ಯಾಟ್ ವಿಂಡ್ ಪವರ್ ಕೆಪಾಸಿಟಿ ಸೇರ್ಪಡೆಯಾಗಿದೆ. ಇತರೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕಳೆದ ವರ್ಷ ಅತಿಹೆಚ್ಚು ವಿಂಡ್ ಪವರ್ ತಯಾರಿಕೆ ಸಾಮರ್ಥ್ಯ ವೃದ್ಧಿಯಾಗಿದೆ. ತಮಿಳುನಾಡು, ಗುಜರಾತ್ ರಾಜ್ಯಗಳ ಪೈಪೋಟಿಯನ್ನು ಹಿಂದಿಕ್ಕಿದೆ.

2024-25ರಲ್ಲಿ ಕರ್ನಾಟಕದಲ್ಲಿ 1,331.48 ಮೆಗಾವ್ಯಾಟ್ ವಾಯುಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ತಮಿಳುನಾಡು 1,136.37 ಮೆ.ವ್ಯಾ. ಮತ್ತು ಗುಜರಾತ್ 954.76 ಮೆ.ವ್ಯಾ. ವಿಂಡ್ ಪವರ್ ಸಾಮರ್ಥ್ಯ ಹೆಚ್ಚಳ ಆಗಿದೆ.

ಬೆಂಗಳೂರಿನಲ್ಲಿ ನಿನ್ನೆ ಭಾನುವಾರ ನಡೆದ ಜಾಗತಿಕ ವಾಯು ದಿನ ಆಚರಣೆ ವೇಳೆ ಕೇಂದ್ರ ನವೀಕರಣ ಇಂಧನ ಸಚಿವ ಪ್ರಲ್ಹಾದ್ ಜೋಷಿ ಅವರು ಕರ್ನಾಟಕದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕರ್ನಾಟಕದಲ್ಲಿರುವ ಸ್ಥಾಪಿತ ವಾಯುಶಕ್ತಿ ಸಾಮರ್ಥ್ಯ 7,351 ಮೆಗಾವ್ಯಾಟ್

ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ 1,331 ಮೆಗಾ ವ್ಯಾಟ್​​ನಷ್ಟು ವಾಯು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗಿರುವುದು ಗಮನಾರ್ಹ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ವಾಯು ವಿದ್ಯುತ್ ಸಾಮರ್ಥ್ಯ 7,351 ಮೆಗಾವ್ಯಾಟ್​​ಗೆ ಏರಿದೆ. ಅಂದರೆ 7.35 ಗಿಗಾವ್ಯಾಟ್ ವಿಂಡ್ ಎನರ್ಜಿ ಕೆಪಾಸಿಟಿ ನಿರ್ಮಾಣ ಆಗಿದೆ.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಿವಿಧ ವಿಂಡ್ ಪವರ್ ಪ್ರಾಜೆಕ್ಟ್​​ಗಳು ಶುರುವಾಗಲಿವೆ. ಅದಕ್ಕೆ ಪೂರಕವಾದ ಸಬ್​ಸ್ಟೇಷನ್ಸ್, ಕಾರಿಡಾರ್ ಹಾಗೂ ನವೀಕರಣ ವಿದ್ಯುತ್ ಮೀಸಲು ವಲಯ ಇತ್ಯಾದಿ ಇನ್​ಫ್ರಾಸ್ಟ್ರಕ್ಚರ್ ಅನ್ನೂ ಬಲಪಡಿಸಲಾಗುತ್ತಿದೆ. ಈ ವಿವಿಧ ವಾಯುಶಕ್ತಿ ಯೋಜನೆಗಳಿಂದ 17 ಗಿಗಾವ್ಯಾಟ್​​ನಷ್ಟು ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ. ಇವು ಜಾರಿಯಾದರೆ ರಾಜ್ಯದಲ್ಲಿ 25 ಗಿ.ವ್ಯಾ. ವಿಂಡ್ ಪವರ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೃಷ್ಟಿಯಾಗಬಹುದು.

2030ಕ್ಕೆ 100 ಗಿಗಾ ವ್ಯಾಟ್ ವಿಂಡ್ ಎನರ್ಜಿ ಗುರಿ ಭಾರತಕ್ಕೆ

ಕೇಂದ್ರ ಸರ್ಕಾರವು 2030ರೊಳಗೆ 500 ಗಿಗಾವ್ಯಾಟ್​​ನಷ್ಟು ಮರುಬಳಕೆ ಇಂಧನ ಅಥವಾ ರಿನಿವಬಲ್ ಎನರ್ಜಿ ಸಾಧನೆಯ ಗುರಿ ನಿಗದಿ ಮಾಡಿದೆ. ಇದರಲ್ಲಿ 100 ಗಿ.ವ್ಯಾ. ವಿಂಡ್ ಎನರ್ಜಿ ಗುರಿ ಇದೆ. ಈ ವಾಯುಶಕ್ತಿಯ ಗುರಿ ಈಡೇರಿಕೆಗೆ ಕರ್ನಾಟಕದ ಕೊಡುಗೆ ಗಮನಾರ್ಹವಾಗಲಿದೆ.


Spread the love
Share:

administrator

Leave a Reply

Your email address will not be published. Required fields are marked *