Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರ್ನಾಟಕದಲ್ಲಿ 10 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ 4,264 ಸರ್ಕಾರಿ ಶಾಲೆಗಳು-ಇಳಿಕೆಗೆ ಕಾರಣವೇನು?

Spread the love

ಕರ್ನಾಟಕ ರಾಜ್ಯದಲ್ಲಿ 10 ವಿದ್ಯಾರ್ಥಿಗಳಿಗಿಂತ ಕಡಿಮೆ ದಾಖಲಾತಿ ಇರುವ 4,264 ಶಾಲೆಗಳಿವೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ 2,619 ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣವನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಮೇ ತಿಂಗಳಲ್ಲಿ ವಿಶೇಷ ಅಭಿಯಾನ ನಡೆಲಾಗುವುದು ಎಂದೂ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಒಟ್ಟು ಶಾಲೆಗಳ ಶೇ.20 ರಷ್ಟು ಶಾಲೆಗಳಲ್ಲಿ ದಾಖಲಾತಿ (4,264 ಶಾಲೆಗಳು) 10 ವಿದ್ಯಾರ್ಥಿಗಳಿಗಿಂತ ಕಡಿಮೆ ಇದೆ. 10 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಒಂದು ಪ್ರೌಢಶಾಲೆಯೂ ಇದೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್‌ ನ ಎನ್.‌ ಎ. ಹ್ಯಾರಿಸ್‌ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕರ್ನಾಟಕದಲ್ಲಿ 49,679 ಸರ್ಕಾರಿ ಶಾಲೆಗಳಿವೆ. ಇದರಲ್ಲಿ 21,045 ಶಾಲೆಗಳು ಪ್ರಾಥಮಿಕ ( 1-5ನೇ ತರಗತಿ) ಮತ್ತು 1 ರಿಂದ 8ನೇ ತರಗತಿವರೆಗಿನ 22,086 ಉನ್ನತ ಪ್ರಾಥಮಿಕ ಶಾಲೆಗಳು ಮತ್ತು 5,051 ಪ್ರೌಢಶಾಲೆಗಳಿವೆ. ದಾಖಲಾತಿ ಕಡಿಎಮ ಎಂಬ ಕಾರಣಕ್ಕೆ ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ. ಆದರೆ ಶೂನ್ಯ ದಾಖಲಾತಿಯಾದರೆ ಮಾತ್ರ ತಾತ್ಕಾಲಿಕವಾಗಿ ಶಾಲೆಯನ್ನು ಮುಚ್ಚಲಾಗುತ್ತದೆ. ಭವಿಷ್ಯದಲ್ಲಿ ಮಕ್ಕಳ ದಾಖಲಾತಿಯಾದರೆ ಆ ಶಾಲೆಯನ್ನು ಪುನಾರಂಭಿಸಲಾಗುತ್ತದೆ. ಸಮೀಪದ ಶಾಲೆಗಳೊಂದಿಗೂ ವಿಲೀನ ಮಾಡುವುದಿಲ್ಲ. ಬದಲಾಗಿ ಭವಿಷ್ಯದ ವಿದ್ಯಾರ್ಥಿಗಳಿಗೆ ಶಾಲೆ ತೆರೆದಿರುತ್ತದೆ ಎಂದೂ ತಿಳಿಸಿದ್ದಾರೆ.

ವಿವಿಧ ಯೋಜನೆ ಜಾರಿ ಮೇ ತಿಂಗಳಲ್ಲಿ ಮಕ್ಕಳ ದಾಖಲಾತಿಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಜೂನ್‌ ತಿಂಗಳಲ್ಲಿ ಎಂದಿನಂತೆ ಸಾಮಾನ್ಯ ಅಭಿಯಾನ ನಡೆಯುತ್ತಿದೆ. ಮನೆ ಮನೆ ಭೇಟಿ, ಕರಪತ್ರ ಹಂಚಿಕೆ, ಜಾಥಾ ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ, ಶೂ, ಸಾಕ್ಸ್‌ ಪೂರೈಕೆ ಮಾಡಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಊಟ, ಮೊಟ್ಟೆ ಅಥವಾ ಬಾಳೆಹಣ್ಣು ನೀಡಲಾಗುತ್ತದೆ ಎಂದರು.

ಸಮೀಪದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಹೋಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಾರಿಗೆ ಭತ್ಯೆ ನೀಡಲಾಗುತ್ತದೆ. 10 ತಿಂಗಳಿಗೆ ರೂ. 2,000 ಮತ್ತು ಕೆಲವು ಪ್ರಕರಣಗಳಲ್ಲಿ ರೂ. 6,000 ನೀಡಲಾಗುತ್ತದೆ. ಜತೆಗೆ ಹೆಣ್ಣು ಮಕ್ಕಳಿಗೆ ಮತ್ತು ವಿಶೇಷ ಮಕ್ಕಳಿಗಾಗಿ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಶಾಲಾ (ಕೆಜಿಬಿವಿ) ಶಾಲೆಗಳು, ಕೆಜಿಬಿವಿ ವಸತಿ ನಿಲಯಗಳು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ನಡೆಸಲಾಗುತ್ತಿದೆ ಎಂದೂ ವಿವರಿಸಿದ್ದಾರೆ.

2,619 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣವನ್ನು ಆರಂಭಿಸಲಾಗುತ್ತಿದೆ. 4,196 ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗುತ್ತಿದೆ. ದಾಖಲಾತಿಯನ್ನು ಹೆಚ್ಚಿಸಲು 600 ಶಾಲೆಗಳಲ್ಲಿ ಹಿರಿಯ ಗ್ರಾಮರ್‌ ಶಾಲೆಗಳಲ್ಲಿ ಇಂಗೀಷ್‌ ಮೀಡಿಯಂ ಶಿಕ್ಷಣ ಆರಂಭಿಸಲಾಗುತ್ತದೆ ಎಂದೂ ಸದನಕ್ಕೆ ತಿಳಿಸಿದ್ದಾರೆ.

ಕಾರಣವಾದರೂ ಏನು ಜನನ ದರ ಕಡಿಮೆ ಇರುವುದು, ಕೆಲವು ಪ್ರಾಂತಗಳಲ್ಲಿ ವಲಸೆ ಹೆಚ್ಚಿರುವುದು, ಖಾಸಗಿ ಶಾಲೆಗಳಿಗೆ ಆದ್ಯತೆ ಮತ್ತು ಸಾಮಾಜಿಕ ಆರ್ಥಿಕ ಕಾರಣಗಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ.

ಜನನ ದರ ಕಡಿಮೆ ಇರುವುದು ಅನೇಕ ಭಾಗಗಳಲ್ಲಿ ದಾಖಲಾತಿ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ. ಗ್ರಾಮೀಣ ಪ್ರಧೇಶಗಳ ನಿವಾಸಿಗಳು ಉದ್ಯೋಗ ಅರಸಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದೂ ಕಾರಣವಾಗಿದೆ. ಮೇಲಾಗಿ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳು ಪೈಪೋಟಿ ನೀಡುತ್ತಿರುವುದು ಹೆಚ್ಚುತ್ತಿದೆ. ಶಿಕ್ಷಣದ ಮಹತ್ವದ ಅರಿವಿನ ಕೊರತೆಯಿಂದಾಗಿಯೂ ಅನೇಕ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿರುವುದು ಕಾರಣವಾಗಿದೆ. ಸಾಕ್ಷರತೆ ಕೊರತೆಯಿಂದಾಗಿ ಪೋಷಕರು ಮಕ್ಕಳನ್ನು ಕೃಷಿ ಮತ್ತಿತರ ಕೆಲಸಗಳಿಗೆ ಕಳುಹಿಸುತ್ತಿರುವುದು ದಾಖಲಾತಿ ಮತ್ತು ಹಾಜರಾತಿ ಕಡಿಮೆಯಾಗಲು ಕಾರಣವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *