ಕಾರ್ಕಳ ಯುವಕ ಸೈಯದ್ POCSO ಕಾಯ್ದೆಯಡಿ ಬಂಧನ: ಹಲ್ಲೆ ಮಾಡಿದವರಿಗೆ ಸಹ ಎಫ್‌ಐಆರ್

ಬೆಳ್ತಂಗಡಿ: ಬೆಳ್ತಂಗಡಿಯ ಖಾಸಗಿ ಕಾಲೇಜು ಒಂದರಲ್ಲಿ ಪದವಿ ವಿದ್ಯಾರ್ಥಿ ಮತ್ತು ಕಬಡ್ಡಿ ಆಟಗಾರನೂ ಆಗಿರುವ ಕಾರ್ಕಳ ಮೂಲದ ಸೈಯದ್ ಎಂಬ ಯುವಕ ಬೆಳ್ತಂಗಡಿಯಲ್ಲಿ ಅರೆಸ್ಟ್ ಆಗಿದ್ದಾನೆ.

ಕಾರ್ಕಳ ನಿವಾಸಿ ಸೈಯ್ಯದ್ (24) ಬಂಧಿತ ಆರೋಪಿ. ಈತ ಬೆಳ್ತಂಗಡಿಯ ಖಾಸಗಿ ಕಾಲೇಜಿನ 17ರ ಹರಯದ ವಿದ್ಯಾರ್ಥಿನಿಗೆ ಕೆಲವು ದಿನಗಳಿಂದ ನಿರಂತರ ಮೆಸೇಜ್ ಮಾಡುತ್ತಾ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಏ.26 ರಂದು ಉಜಿರೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಥಳಿಸಿದ್ದಾರೆ. ಈ ವೇಳೆ ಸೈಯದ್ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋಗಳು ಪತ್ತೆಯಾಗಿವೆ. ಸದ್ಯ ಬೆಳ್ತಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಿದ್ದಾರೆ.
ಹಲವರ ವಿರುದ್ದ ಪ್ರಕರಣ ದಾಖಲು: ಇತ್ತ ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೈಯದ್ ಕೂಡ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಹೀಗಾಗಿ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಉಜಿರೆಯ ಮನೋಜ್ ಮತ್ತು ಪ್ರಜ್ವಲ್ ಗೌಡ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.