ಕಾಪು ಹೊಸ ಮಾರಿಗುಡಿಯಲ್ಲಿ ಅಯೋಧ್ಯೆ ಶೈಲಿಯ 1.5 ಟನ್ ತೂಕದ ಬೃಹತ್ ಘಂಟೆ– ರಾಜ್ಯದ ಪ್ರಥಮ, ದೇಶದ ದ್ವಿತೀಯ ಅತಿ ದೊಡ್ಡ ಘಂಟೆ!

ಕಾಪು: ಸಮಗ್ರ ಜೀರ್ಣೋದ್ದಾರದೊಂದಿಗೆ ಕಂಗೊಳಿಸುತ್ತಿರುವ, ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಇನ್ನು ಮುಂದೆ ಅಯೋಧ್ಯೆ ಮಾದರಿಯ ಬೃಹತ್ ಘಂಟೆಯ ನಾದ ಮೊಳಗಲಿದೆ.

ಕಾಪು ಮಾರಿಯಮ್ಮ ದೇವಿಯ ಭಕ್ತರಾದ ಮುಂಬಯಿಯ ಅಲಯನ್ಸ್ ಇನ್‌ಫ್ರಾಸ್ಟ್ರಕ್ಟರ್ ಮತ್ತು ರಿಯಲೇರ್ ಪ್ರೈ. ಲಿ. ನ ಸಿಎಂಡಿ ಅರವಿಂದ್ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಸಮರ್ಪಿಸಲಿರುವ ಸುಮಾರು 1,500 ಕೆಜಿ ತೂಕದ ಬೃಹತ್ ಗಂಟೆಯು ಭಾರತದ ಎರಡನೇ ಅತೀ ದೊಡ್ಡ ಮತ್ತು ಕರ್ನಾಟಕದ ಪ್ರಥಮ ದೊಡ್ಡ ಘಂಟೆಯಾಗಿ ಗುರುತಿಸಲ್ಪಡಲಿದೆ.
1,500 ಕೆಜಿ ತೂಕ ಮತ್ತು 5 ಫೀಟ್ ಎತ್ತರದ ಸಂಪೂರ್ಣ ಕಂಚಿನಿಂದ ನಿರ್ಮಾಣಗೊಂಡಿರುವ ಈ ಘಂಟೆಯು ಆಂಧ್ರಪ್ರದೇಶದ ಬಿ.ಎಸ್.ಎಂ. ಫೌಂಡ್ರಿಸ್ ಕಾರ್ಖಾನೆಯಲ್ಲಿ ಸಿದ್ದಗೊಂಡಿದೆ. ಶುಕ್ರವಾರ ಕಾಪುವಿಗೆ ತಲುಪುವ ಬೃಹತ್ ಗಂಟೆಯು ಫೆ. 9ರಂದು ಸ್ವರ್ಣ ಗದ್ದುಗೆ, ರಜತ ರಥ ಸಹಿತ ಸ್ವರ್ಣಾಭರಣಗಳ ಪುರಪ್ರವೇಶ ಶೋಭಾಯಾತ್ರೆಯ ಜತೆಗೂಡಿ ಕಾಪು ಮಾರಿಗುಡಿಗೆ ಆಗಮಿಸಲಿದೆ.

ದೇಶದ ಅತಿ ದೊಡ್ಡ ಗಂಟೆ ಅಯೋಧ್ಯೆಯಲ್ಲಿಈವರೆಗಿನ ದಾಖಲೆಯೆಂಬಂತೆ ದೇಶದ ಅತಿ ದೊಡ್ಡದಾದ ಸುಮಾರು 2,200 ಕಿ. ಗ್ರಾಂ ತೂಕದ ಬೃಹತ್ ಘಂಟೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿದೆ.
ಮಾರಿಗುಡಿಗೆ ಸಮರ್ಪಿಸುವ ಘಂಟೆ ದೇಶದ 2ನೇ ಮತ್ತು ರಾಜ್ಯದ ಪ್ರಥಮ ಘಂಟೆಯಾಗಿ ದಾಖಲೆ ಬರೆಯಲಿದೆ.
ಮಾರಿಗುಡಿಯಲ್ಲಿ ಅಳವಡಿಸಲಾಗುವ ಬೃಹತ್ ಘಂಟೆ ಯನ್ನು ಅಷ್ಟಧಾತುವನ್ನು ಬಳಸಿ ನಿರ್ಮಿಸಲಾಗಿದೆ. ಇದು 5 ಅಡಿ ಎತ್ತರ, 4 ಅಡಿ ಅಗಲ ಹೊಂದಿದ್ದು, ಇದರ ಸದ್ದು ಕೆಲವು ಕಿಲೋ ಮೀಟರ್ ದೂರದವರೆಗೂ ಕೇಳಲಿದೆ.
