Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಮಲ್ ಹಾಸನ್‌ಗೆ ಕನ್ನಡ ವಿರೋಧಿ ಹೇಳಿಕೆಗಳ ಬಿಸಿ: ‘ನಾಯಗನ್’ ಸಿನಿಮಾದ ಮರು ಬಿಡುಗಡೆಗೆ ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರರಿಂದ ವಿರೋಧ

Spread the love

ಮಿಳು ನಟ ಕಮಲ್ ಹಾಸನ್ (Kamal Haasan) ಈ ಹಿಂದೆ ಕನ್ನಡ (Kannada) ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಥಗ್ ಲೈಫ್ (Thug Life) ಸಿನಿಮಾ ಬಿಡುಗಡೆ ವೇಳೆ ಕಮಲ್ ಹಾಸನ್ ಕನ್ನಡದ ಬಗ್ಗೆ ಮಾತನಾಡಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು. `ಕನ್ನಡ ತಮಿಳು ಭಾಷೆಯಿಂದಲೇ ಹುಟ್ಟಿದೆ’ ಎಂಬ ಮಾತುಗಳು ತೀರ್ವ ವಿರೋಧವನ್ನೇ ಎಬ್ಬಿಸಿದ್ದವು. ಈ ಕಾರಣಕ್ಕೆ ಕಮಲ್ ಹಾಸನ್ ನಟನೆಯ `ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ `ಥಗ್ ಲೈಫ್’ ಸಿನಿಮಾ ಫ್ಲಾಪ್ ಆಯ್ತು.

ಇದೀಗ ಕಮಲ್ ಹಾಸನ್ ನಟನೆಯ ಹಳೆಯ ಸಿನಿಮಾ ಒಂದು ರಿ-ರಿಲೀಸ್ ಆಗುತ್ತಿದ್ದು, ಆ ಸಿನಿಮಾಕ್ಕೂ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ನಟನೆಯ ನಾಯಗನ್ (Nayakan) ಸಿನಿಮಾ ಇಂದು (ನ.7) ಭಾರತದ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಸಿನಿಮಾದ ಮರು ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ. ನ.7 ರಂದು ಕಮಲ್ ಹಾಸನ್ ಹುಟ್ಟುಹಬ್ಬವಿದ್ದು, ಇದೇ ದಿನ `ನಾಯಗನ್’ ಸಿನಿಮಾ ಚೆನ್ನೈ, ಹೈದರಾಬಾದ್ ಸೇರಿದಂತೆ ಇನ್ನೂ ಹಲವು ನಗರಗಳಲ್ಲಿ ಮರು ಬಿಡುಗಡೆ ಆಗಿದೆ. ಆದರೆ ಕರ್ನಾಟಕದಲ್ಲಿ ಬಿಡುಗಡೆ ಆಗಬಾರದೆಂದು ಸಾರಾ ಗೋವಿಂದು ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

ಅಂದಹಾಗೆ ಬೆಂಗಳೂರು ನಗರದ ಒರಾಯನ್ ಮಾಲ್‌ನಲ್ಲಿ ಸಿನಿಮಾದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆ ಕನ್ನಡಪರ ಹೋರಾಟಗಾರರು ಒರಾಯನ್ ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದು, ಸಿನಿಮಾ ಬಿಡುಗಡೆಯನ್ನು ತಡೆದಿದ್ದಾರೆ. ಸಾರಾ ಗೋವಿಂದು, ಕರವೇ ಶಿವರಾಮೇ ಗೌಡ ಇನ್ನೂ ಹಲವರು ಒರಾಯನ್ ಮಾಲ್‌ನ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ಚಿತ್ರಮಂದಿರಗಳು ಹಾಗೂ ಮಾಲ್‌ನವರು `ನಾಯಗನ್’ ಸಿನಿಮಾ ಬಿಡುಗಡೆ ಮಾಡಿಲ್ಲ. ಇದನ್ನ ನಾವು ಅಭಿನಂದಿಸುತ್ತೇವೆ ಎಂದಿದ್ದಾರೆ ಹೋರಾಟಗಾರರು.

`ಸಮಸ್ತ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಕಮಲ್ ಹಾಸನ್ ನೀಡಿದ್ದಾರೆ. ನಾವು ಇದನ್ನು ಸಹಿಸುವುದಿಲ್ಲ. ಕಮಲ್ ಹಾಸನ್ ಕ್ಷಮೆ ಕೇಳುವವರೆಗೆ ಸಿನಿಮಾ ರಿಲೀಸ್ ಆಗೋಕೆ ನಾವು ಬಿಡುವುದಿಲ್ಲ. ಎಂದಿದ್ದಾರೆ ಹೋರಾಟಗಾರರು. ಇ ಹಿಂದೆಯೂ ಥಗ್ ಲೈಫ್ ಚಿತ್ರ ಬಿಡುಗಡೆ ವೇಳೆ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ಮಾಡಿ ಕನ್ನಡ ಸಂಘಟಟನೆಗಳು ಎಚ್ಚರಿಕೆಯನ್ನ ನೀಡಿದ್ದವು.


Spread the love
Share:

administrator

Leave a Reply

Your email address will not be published. Required fields are marked *