Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಲಬುರಗಿ: ಶಾಲಾ ಶಿಕ್ಷಕಿ ಜ್ಯೋತಿ ಹಿರೇಮಠ ಭೀಕರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಹಣದ ವಿಚಾರಕ್ಕೆ ಪರಿಚಯಸ್ಥನಿಂದಲೇ ಹ*ತ್ಯೆ

Spread the love

ಕಲಬುರಗಿ: ಕಮಲಾಪುರ ತಾಲೂಕಿನ ಕಲ್ಲೂಡ ಗ್ರಾಮದ ಬಳಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಕೊಲೆಯಾದ ಮಹಿಳೆ ಶಾಲಾ ಶಿಕ್ಷಕಿ (Teacher) ಜ್ಯೋತಿ ಕಪಾಳೆ ಹಿರೇಮಠ(57) ಎಂಬುದು ಗೊತ್ತಾಗಿದ್ದು, ಕೊಟ್ಟ ಹಣ (Money) ವಾಪಸ್ ಕೇಳಿದ್ದಕ್ಕೆ ಪರಿಚಯಸ್ಥ ವ್ಯಕ್ತಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಶಿಕ್ಷಕಿಯ ಮೃತ ದೇಹವನ್ನು ಸುಟ್ಟು ಹಾಕಿರೋದು ಹೊತ್ತಾಗಿದೆ. ಪ್ರಕರಣ ಸಂಬಂಧ ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಜ್ಯೋತಿ ಕಪಾಳೆ ಹಿರೇಮಠ ಕೆಲಸ ಮಾಡುತ್ತಿದ್ದರು. ಹೀಗಾಗಿ ಬೀದರ್‌ನಲ್ಲಿಯೇ ಮನೆ ಮಾಡಿಕೊಂಡು ಶಾಲೆಗೆ ಹೋಗಿ ಬರುತ್ತಿದ್ದರು. ಆದರೆ ವಾರಕೊಮ್ಮೆ ಕಲಬುರಗಿಗೆ ಬಂದು ವಾಪಸ್ ತೆರಳುವ ಅಭ್ಯಾಸ ಅವರಿಗೆ ಇತ್ತು. ಹೀಗೆ ಬಂದವರು ಕಲಬುರಗಿಯಿಂದ ಬೀದರ್ಗೆಗೆ ತೆರಳುವಾಗ ಆರೋಪಿ ಕೊಲೆಗೈದಿದ್ದಾನೆ. ಶಿಕ್ಷಕಿ ಜ್ಯೋತಿಗೆ ಪರಿಚಯಸ್ಥನಾಗಿದ್ದ ಆರೋಪಿ, ಅವರಿಂದ 14 ಲಕ್ಷ ಹಣ ಪಡೆದಿದ್ದ ಕೊಟ್ಟ ಈ ಹಣವನ್ನು ಜ್ಯೋತಿ ವಾಪಸ್ ಕೇಳಿರುವುದೇ ಕೊಲೆಗೆ ಕಾರಣವಾಗಿದೆ.


ಕಮಲಾಪುರ ತಾಲೂಕಿನ ಕಲ್ಕೂಡ ಗ್ರಾಮದಲ್ಲಿ ಮಹಿಳೆಯೋರ್ವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ ಹಿನ್ನೆಲೆ ಬೇರೆಡೆ ಕೊಲೆ ಮಾಡಿ ಶವ ತಂದು ಹಾಕಿರುವ ಶಂಕೆ ವ್ಯಕ್ತವಾಗಿತ್ತು. ಇಡೀ ದೇಹ ಸುಟ್ಟು ಕೇವಲ ಕಾಲು ಮಾತ್ರ ಉಳಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಈ ಹಿನ್ನೆಲೆ ಸ್ಥಳಕ್ಕೆ ಎಸ್ಪಿ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಘಟನೆ ಸಂಬಂಧ ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ತನಿಖೆಗಿಳಿದಾಗ ಕೊಲೆ ಹಿಂದಿನ ಸತ್ಯ ಬಯಲಾಗಿದೆ. ಸದ್ಯ ಆರೋಪಿ ಆನಂದ್‌ನನ್ನು ಪೊಲೀಸರು ಬಂಧಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *