ನ. 24ರಂದು ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಅಧಿಕಾರ ಸ್ವೀಕಾರ

ನವದೆಹಲಿ: ಸುಪ್ರೀಂ ಕೋರ್ಟ್‌ನ (Supreme Court) 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್ (Justice Surya Kant) ನೇಮಕಗೊಂಡಿದ್ದು, ನವೆಂಬರ್ 24ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಿಜೆಐ ಭೂಷಣ್ ಆರ್. ಗವಾಯಿ ಅವರ ಅಧಿಕಾರಾವಧಿ ನವೆಂಬರ್ 23ರಂದು ಅಂತ್ಯಗೊಳ್ಳಲಿದೆ. ಹೀಗಾಗಿ, ಸಿಜೆ ಹುದ್ದೆಗೆ ಸೂರ್ಯಕಾಂತ್ ಹೆಸರನ್ನು ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ (Central Government) ಶಿಫಾರಸು ಮಾಡಿದ್ರು. ಇದೀಗ ಕೇಂದ್ರ ಕಾನೂನು ಸಚಿವಾಲಯ ಬಿ.ಆರ್ ಗವಾಯಿ ಶಿಫಾರಸನ್ನು ಪರಿಗಣಿಸಿದೆ. ನವೆಂಬರ್ 24ರಂದು ನ್ಯಾ. ಸೂರ್ಯಕಾಂತ್ ಸಿಜೆ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಗವಾಯಿ ಅವರಿಗೂ ಮುನ್ನ ಸಂಜೀವ್ ಖನ್ನಾ, ಡಿ.ವೈ ಚಂದ್ರಚೂಡ್, ಉದಯ್ ಉಮೇಶ್ ಲಲಿತ್, ಎನ್.ವಿ ರಮಣ ಸಿಜೆಗಳಾಗಿ ಕರ್ವವ್ಯ ನಿರ್ವಹಿಸಿದ್ದರು.