ಪಾರ್ಕಿಂಗ್ನ ಹೆಸರಿನಲ್ಲಿ ಜಾಲಿರೈಡ್: ಮಹಿಳೆಯ ₹1.4 ಕೋಟಿ ಬೆಂಜ್ ಕಾರಿಗೆ ವ್ಯಾಲೆಟ್ ಚಾಲಕರಿಂದ ಹಾನಿ

ಬೆಂಗಳೂರು:ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಬಾರ್ಬಿಕ್ಯೂಗೆ ಹೋಗಿದ್ದ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇದು ಮಾತ್ರವಲ್ಲದೇ ನ್ಯಾಯ ಕೇಳಲು ಹೋದರೆ ಪೊಲೀಸರಿಂದ, ನಗರದ ಆಡಳಿತ ವೈಫಲ್ಯ ಭ್ರಷ್ಟಾಚಾರದಿಂದ ಸಂಕಷ್ಟ ಅನುಭವಿಸುವಂತಾಗಿದೆ.

ಕೊನೆಗೆ ಆ ಮಹಿಳೆಗೆ ದಾರಿ ಕಾಣದಾಗಿದೆ. ಈ ಕುರಿತು ಫೋಟೋ, ವಿವರಣೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
‘ಬೆಂಗಳೂರಿನಲ್ಲಿ 20 ನಿಮಿಷಗಳ ಆಹಾರ ವೆಚ್ಚ ರೂ. 20 ಲಕ್ಷ ನಷ್ಟ’ ಶಿರ್ಷಿಕೆಯಡಿ ಕರ್ನಾಟಕ ಪೋರ್ಟ್ಫೋಲಿಯೋ ಬೆಂಜ್ ಕಾರಿನ ಫೋಟೋ ಹಂಚಿಕೊಂಡಿದೆ. ನಗರದ ಮಾತ್ತರಹಳ್ಳಿಯ ದಿ ಬಿಗ್ ಬಾರ್ಬೆಕ್ಯೂನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಈ ಬಾರ್ಬಿಕ್ಯೂಗೆ ಬಂದ ಮಹಿಳೆಯು ತನ್ನ ₹1.4 ಕೋಟಿ ರೂಪಾಯಿ ಮೌಲ್ಯದ ಕಾರನ್ನು ಪಾರ್ಕಿಂಗ್ ವ್ಯಾಲೆಟ್ ಚಾಲಕರಿಗೆ ನೀಡಿದ್ದಾರೆ.
ಆದರೆ ಅವರ ಕಾರು ಪಾರ್ಕಿಂಗ್ ಜಾಗದಲ್ಲಿ ನುಜ್ಜು ಗುಜ್ಜು ರೀತಿಯಲ್ಲಿ ಹಾನಿಗೀಡಾದ ಸ್ಥಿತಿಯಲ್ಲಿ ಕಂಡು ಆ ಮಹಿಳೆ ದಗ್ಭ್ರಮೆಗೊಂಡಿದ್ದಾರೆ. ಮರ್ಸಿಡಿಸ್-ಬೆನ್ಜ್ ಕಾರಿಗೆ ಸಾಕಷ್ಟು ಹಾನಿಗೀಡಾಗಿದೆ. ವ್ಯಾಲೆಟ್ ಚಾಲಕ ಕಾರನ್ನು ಪಾರ್ಕಿಂಗ್ ಮಾಡುವ ಬದಲು ಜಾಲಿರೈಡ್ಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಕಾರನ್ನು ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಮುಂದಿನ ಬಾನೆಟ್ ಸೇರಿ ಕಾರು ಹಾನಿಗೀಡಾಗಿದೆ.
ಹಾನಿ ಮಾಡಿದ ಚಾಲಕ ಸ್ಥಳದಿಂದ ಪರಾರಿ..
ಸುಮಾರು 20 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಾರಿನಲ್ಲಿ ಚಾಲಕರಿಲ್ಲದೇ ಓಡಿ ಹೋಗಿದ್ದಾರೆ. ರೀಲ್ಸ್ ಮಾಡಲು ಹೋಗಿ ಹೀಗೆ ಕಾರಿಗೆ ಹಾನಿ ಮಾಡಿದ್ದಾರೆ ಅಂತಲೂ ಹೇಳಿದ್ದಾರೆ. ಆದರೆ ಈ ಹಾನಿ ಜವಾಬ್ದಾರಿಯನ್ನು ಬಾರ್ಬಿಕ್ಯೂ ರೆಸ್ಟೋರೆಂಟ್ ಹೊರದೇ ತಪ್ಪಿಸಿಕೊಳ್ಳಲು ಯತ್ನಿಸಿದೆ. ಪಾಕಿಂಗ್ ಮಾಡಲು ಹೋದ ಚಾಲಕ ನಕಲಿ ವಿವರ ನೀಡಿದೆ. ಮಹಿಳೆ ಯಾಮಾರಿಸಲು ಮುಂದಾಗಿದೆ.
