Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಿಯೋ ಸರ್ಪ್ರೈಸ್! 84 ಮತ್ತು 336 ದಿನಗಳ ಕಾಲವಧಿಯ ಎರಡು ಹೊಸ ಪ್ಲಾನ್ ಬಿಡುಗಡೆ

Spread the love

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಜಿಯೋ ಮತ್ತೆ ತನ್ನ ಬಳಕೆದಾರರಿಗಾಗಿ ಎರಡು ಅತ್ಯಾಕರ್ಷಕವಾದ ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಯಾವುದಾ ರಿಚಾರ್ಜ್ ಪ್ಲಾನ್‌ಗಳು, ಇವುಗಳ ಪ್ರಯೋಜನಗಳೇನು ಎಂದು ತಿಳಿಯೋಣ… 

ರಿಲಯನ್ಸ್ ಜಿಯೋ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳು: 
ರಿಲಯನ್ಸ್ ಜಿಯೋ 448 ರೂ. ಮತ್ತು 1,748 ರೂ.ಗಳಿಗೆ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು 84 ಮತ್ತು 336 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. 

ಜಿಯೋ 448 ರೂ. ಪ್ರಿಪೇಯ್ಡ್ ಪ್ಲಾನ್: 
ಜಿಯೋ ಪರಿಚಯಿಸಿರುವ 448 ರೂ. ಪ್ರಿಪೇಯ್ಡ್ ಪ್ಲಾನ್ 84ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಜೊತೆಗೆ 1000 ಎಸ್ಎಂಎಸ್ ಸೇರಿದತೆ ಜಿಯೋ ಸಿನಿಮಾ ಮತ್ತು ಜಿಯೋ ಟಿವಿಗೂ ಉಚಿತ ಚಂದಾದರಿಕೆ ದೊರೆಯುತ್ತದೆ. 

ಜಿಯೋ 1,748 ರೂ. ಪ್ರಿಪೇಯ್ಡ್ ಪ್ಲಾನ್: 
ಜಿಯೋದ ಈ ಯೋಜನೆ 336 ದಿನಗಳ ವ್ಯಾಲಿಡಿಟಿ ಜೊತೆಗೆ ಬರುತ್ತದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 11 ತಿಂಗಳ ಕಾಲ ಅನಿಯಮಿತ ಕಾಲ್, 3,600 ಎಸ್ಎಂಎಸ್ ಸೌಲಭ್ಯ ಸಿಗಲಿದೆ. ಇದಲ್ಲದೆ, ಈ ಯೋಜನೆಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಗೆ ಉಚಿತ ಚಂದಾದಾರಿಕೆ ದೊರೆಯುತ್ತದೆ. 

ಗಮನಾರ್ಹವಾಗಿ, ಈ ಯೋಜನೆಗಳು ಕೇವಲ ಕರೆಗಾಗಿ ಬಳಸುವ ರಿಚಾರ್ಜ್ ಯೋಜನೆಗಳಾಗಿದ್ದು, ಡೇಟಾ ಅಗತ್ಯವಿಲ್ಲದ ಗ್ರಾಹಕರಿಗೆ ಈ ಯೋಜನೆಗಳಿಂದ ಪ್ರಯೋಜನವಾಗಲಿದೆ.  


Spread the love
Share:

administrator

Leave a Reply

Your email address will not be published. Required fields are marked *