Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹುಬ್ಬಳ್ಳಿಯಲ್ಲಿ ಜೆಸಿಬಿ ಘರ್ಜನೆ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಉದಯನಗರದಲ್ಲಿ 47 ಅಕ್ರಮ ಮನೆಗಳ ತೆರವು!

Spread the love

ಹುಬ್ಬಳ್ಳಿ: ನಗರದಲ್ಲಿ ಜೆಸಿಬಿಗಳ (JCB) ಘರ್ಜನೆಯಾಗಿದ್ದು, ಸುಪ್ರೀಂಕೋರ್ಟ್ (Supreme Court) ಆದೇಶ ಹಿನ್ನೆಲೆ ಅಕ್ರಮವಾಗಿ ಕಟ್ಟಿದ್ದ 47 ಮನೆಗಳನ್ನು (House) ತೆರವು ಮಾಡಲಾಗಿದೆ. ಮೂಲ ದಾಖಲಾತಿ ನೋಡದೆ ಮೋಸ ಹೋಗಿ, ಮನೆ ಮನೆ ಕಟ್ಟಿಕೊಂಡವರು ಬದುಕು ಬೀದಿಗೆ ಬಂದಿದೆ.

ಹುಬ್ಬಳ್ಳಿ ನಗರದ ಉದಯನಗರದಲ್ಲಿ (Udayanagar) ಮನೆಗಳ ತೆರವು ಕಾರ್ಯ ನಡೆದಿದೆ. ಮೂಲತಃ ರಾಮರಾವ್ ಸಬನಿಸ್ ಎನ್ನುವವರಿಗೆ ಸೇರಿದ್ದ ನಿವಾಸಿಗಳನ್ನು ಸಿಕಂದರ್ ಎನ್ನುವ ವ್ಯಕ್ತಿ ತನ್ನ ಭೂಮಿ ಅಂತ ಸುಳ್ಳು ಹೇಳಿ ಜನರಿಗೆ ಮಾರಾಟ ಮಾಡಿದ್ದ. ಕಡಿಮೆ ಬೆಲೆಗೆ ನಿವೇಶನ ಪಡೆದವರು ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರು. ಹೀಗಾಗಿ ಜಾಗ ತೆರವು ಮಾಡುವಂತೆ ನಿವೇಶನದ ಮೂಲ ಮಾಲೀಕ ರಾಮರಾವ್ ಸಬನಿಸ್ ನಿವಾಸಿಗಳಿಗೆ ಹೇಳಿದ್ದ. ಇದಕ್ಕೆ ನಿವಾಸಿಗಳು ಒಪ್ಪಿರಲಿಲ್ಲ. ಹೀಗಾಗಿ ರಾಮರಾವ್ ಕೋರ್ಟ್ ಮೆಟ್ಟಿಲು ಹತ್ತಿದ್ದ. 

ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಮರಾವ್ ಪರ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ಮನೆಗಳ ತೆರವು ಕಾರ್ಯ ನಡೆದಿದೆ


Spread the love
Share:

administrator

Leave a Reply

Your email address will not be published. Required fields are marked *