Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಐಟಿ ಉದ್ಯೋಗ ಕಳಕಳಿಯಿಂದ ಬೆಂಗಳೂರಿನ ರಿಯಲ್ ಎಸ್ಟೇಟ್ ಮೇಲೆ ಬಿಸಿ ಹೆಜ್ಜೆ

Spread the love

ಇತ್ತೀಚಿಗೆ ಉದ್ಯೋಗದ ವಜಾಗಳು ಐಟಿ ವಲಯದಲ್ಲಿ ನಡುಕವನ್ನು ಶುರುಮಾಡಿದೆ. ಹೌದು,ಟಿಸಿಎಸ್ ಇತ್ತೀಚೆಗೆ ಶೇ. 2 ರಷ್ಟು ಜನರನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿದೆ. ಈ ಸುದ್ದಿ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀಳುತ್ತಾ ಅನ್ನೋ ಕಳವಳ ಶುರುವಾಗಿದೆ. ತಜ್ಞರ ಪ್ರಕಾರ ಬೆಂಗಳೂರಿನಂತಹ ತಂತ್ರಜ್ಞಾನ ಆಧಾರಿತ ಕೇಂದ್ರಗಳಲ್ಲಿ ಇದು ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಎಚ್ಚರಿಕೆಯನ್ನು ಸೂಚಿಸಿದ್ದಾರೆ.

ಇದು ಇನ್ನೂ ಆರಂಭ ಅಷ್ಟೇ. ಒಂದು ದೊಡ್ಡ ಕಂಪನಿ ಈ ರೀತಿ ಮಾಡಿದ್ರೆ, ಉಳಿದ ಕಂಪನಿಗಳು ಕೂಡ ಇದೇ ದಾರಿ ಹಿಡಿಯಬಹುದು.ಕೆಲಸ ಕಳೆದುಕೊಂಡವರಲ್ಲಿ ಹೆಚ್ಚಿನವರು 30 ರಿಂದ 40 ವಯಸ್ಸಿನವರು, ಅವರು ಮನೆ ಸಾಲದಂತಹ ಖರ್ಚುಗಳನ್ನು ಹೊಂದಿರುತ್ತಾರೆ. ಕೆಲಸದ ಬಗ್ಗೆ ಭಯ ಹೆಚ್ಚಾದ್ರೆ, ಸಾಲದ ಇಎಂಐ ಕಟ್ಟೋದು ಕಷ್ಟ ಆಗಬಹದಾದಂತಹ ಸ್ಥಿತಿ ಬರಬಹುದು ಎಂದು ತಜ್ಞರು ಹೇಳಿದ್ದಾರೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) 2026 ರ ಹಣಕಾಸು ವರ್ಷದಲ್ಲಿ ಶೇ. 2 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಹೇಳಿದೆ.ಆದರೆ ಈ ಕಂಪನಿಯಲ್ಲಿ ಸುಮಾರು 12,000ಕ್ಕೂ ಹೆಚ್ಚು ಜನ ಕೆಲಸ ಕಳೆದುಕೊಳ್ಳುತ್ತಾರೆ. ಅದರಲ್ಲೂ ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಅಂತಾನೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಬೆಂಗಳೂರಿನ ವೈಟ್‌ಫೀಲ್ಡ್, ಬೆಳ್ಳಂದೂರು ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಐಟಿ ಕೇಂದ್ರಗಳಲ್ಲಿ ಬಾಡಿಗೆ ದರಗಳು ಗಗನಕ್ಕೆ ಏರಿಕೆಯಾಗಿದೆ. ಈಗ ಕೆಲಸದಿಂದ ವಜಾ ಮಾಡುತ್ತಿರುವುದರಿಂದ ಬಾಡಿಗೆ ಮತ್ತು ಆಸ್ತಿ ಬೆಲೆಯಲ್ಲಿ ಇಳಿಕೆ ಆಗಬಹುದು ಅಂತ ತಜ್ಞರು ಹೇಳಿದ್ದಾರೆ.

ರೆಡ್ಡಿಟ್‌ನಲ್ಲಿ ನಡೆದ ಚರ್ಚೆಯಲ್ಲಿ, ವೈಟ್‌ಫೀಲ್ಡ್‌ನಲ್ಲಿ 40,000 ರೂಪಾಯಿಗಿಂತ ಕಡಿಮೆ ಬಾಡಿಗೆಗೆ 2BHK ಅಪಾರ್ಟ್‌ಮೆಂಟ್ ಸಿಗುತ್ತಿರುವುದನ್ನ ಗಮನಿಸಿದ್ದಾರೆ. ಇದು ಕೆಲವು ತಿಂಗಳ ಹಿಂದೆ ಊಹಿಸಲೂ ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಹನು ರೆಡ್ಡಿ ರಿಯಾಲ್ಟಿಯ ಉಪಾಧ್ಯಕ್ಷ ಕಿರಣ್ ಕುಮಾರ್ ಅವರು ಹೇಳಿರುವ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಬಾಡಿಗೆ ಮತ್ತು ಮನೆ ಖರೀದಿ ಮಾಡಲು ಐಟಿ ವಲಯವೇ ಮುಖ್ಯವಾಗುತ್ತದೆ. ಕೆಲಸ ಕಡಿಮೆ ಆದ್ರೆ, ಮನೆಗಳ ಬೇಡಿಕೆಗಳ ಮೇಲೆ ಪರಿಣಾಮ ಸಹ ಬೀರುತ್ತದೆ. ಅದರಲ್ಲೂ ಮಧ್ಯಮ ಮತ್ತು ದುಬಾರಿ ಮನೆಗಳ ಮೇಲೆ ಇದು ಜಾಸ್ತಿ ಇರುತ್ತೆ.

ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಐಟಿ ಕಂಪನಿಗಳು ಉದ್ಯೋಗಿಗಳನ್ನು ಕಡಿಮೆ ಮಾಡುವ ಯೋಚನೆ ಮಾಡ್ತಿದ್ದಾವೆ. ಇದು ರಿಯಲ್ ಎಸ್ಟೇಟ್ ಬೆಲೆಗಳಲ್ಲಿ ಇಳಿಕೆ ಅಥವಾ ದೀರ್ಘಕಾಲದವರೆಗೆ ಪರಿಣಾಮವನ್ನು ಬೀರಬಹುದು.

ಮನೆ ಮೇಲೆ ಸಾಲದ ಹೊರೆ ಹೆಚ್ಚಾದ್ರೆ, ರಿಯಲ್ ಎಸ್ಟೇಟ್ ವ್ಯವಹಾರಗಳು ನಿಧಾನವಾಗಬಹುದು ಅಂತ ತಜ್ಞರು ಎಂದು ಹೇಳಬಹುದು. ಕಳೆದ ಕೆಲವು ವರ್ಷಗಳಲ್ಲಿ, ಐಟಿ ವಲಯದ ದೊಡ್ಡ ಅಧಿಕಾರಿಗಳು ದುಬಾರಿ ಆಸ್ತಿಗಳನ್ನ ಖರೀದಿಸಿದ್ದಾರೆ. ಈಗ ಅದೇ ವಲಯದಲ್ಲಿ ಕೆಲಸ ಕಡಿತ ಆಗ್ತಿರೋದ್ರಿಂದ ರಿಯಲ್ ಎಸ್ಟೇಟ್ ವ್ಯವಹಾರಗಳು ನಿಧಾನವಾಹಬಹುದು.

ಬೆಂಗಳೂರು, ಪುಣೆ ಮತ್ತು ಚೆನ್ನೈನಂತಹ ನಗರಗಳಲ್ಲಿ ಐಟಿ ವಲಯವೇ ಮನೆ ಖರೀದಿದಾರರ ಬೆನ್ನೆಲುಬಾಗಿದೆ. ಈಗಿನ ಪರಿಸ್ಥಿತಿ ನೋಡಿದ್ರೆ, ಕೆಲಸ ಕಡಿತ ಹೀಗೆಯೇ ಮುಂದುವರೆದರೆ ಬೆಲೆಯಲ್ಲಿ ಇಳಿಕೆ ಆಗಬಹುದು ಎಂದು ಹೇಳಿದ್ದಾರೆ.

ಈ ಪರಿಸ್ಥಿತಿ ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳನ್ನ ಎಚ್ಚರವಾಗಿದ್ದಾರೆ. ಈ ಹಿಂದೆ ಐಟಿ ಉದ್ಯೋಗಿಗಳಿಗೆ ಸಾಲ ಕೊಡುವುದು ಸುರಕ್ಷಿತ ಅಂತ ಪರಿಗಣಿಸಲಾಗಿತ್ತು. ಆದ್ರೆ ಈಗ ಅದು ಅಪಾಯಕಾರಿ ಎಂದು ಹೇಳಬಹುದು. ಇದು ಗೃಹ ಸಾಲದ ಮಾರುಕಟ್ಟೆಯನ್ನು ನಿಧಾನಗೊಳಿಸಬಹುದು. ಇದು ಆಸ್ತಿ ಮಾರುಕಟ್ಟೆಗೆ ಹೊಸ ಖರೀದಿದಾರರು ಮತ್ತು ಹಣಕಾಸಿನ ನೆರವನ್ನು ತಡೆಯಬಹುದು ಎಂದು ರೆಡ್ಡಿ ಸಾಮಾಜಿಕ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ತಂತ್ರಜ್ಞಾನ ಉದ್ಯಮದೊಂದಿಗೆ ನಿಕಟ ಸಂಬಂಧ ಹೊಂದಿದೆ. ವೆಸ್ಟಿಯನ್ ಸಂಶೋಧನೆಯ ಪ್ರಕಾರ, 2024ರಲ್ಲಿ ನಗರದಲ್ಲಿನ ವಾಣಿಜ್ಯ ರಿಯಲ್ ಎಸ್ಟೇಟ್ ಗುತ್ತಿಗೆಯಲ್ಲಿ ಐಟಿ ವಲಯದ ಕೊಡುಗೆ ಶೇ. 40ರಷ್ಟಿದೆ. ಜಾಗತಿಕ ತಂತ್ರಜ್ಞಾನ ಕಂಪನಿಗಳು ಉದ್ಯೋಗ ಕಡಿತ ಮತ್ತು ನೇಮಕಾತಿ ನಿಧಾನಗೊಳಿಸುತ್ತಿರುವುದರಿಂದ ಮನೆ ಖರೀದಿ ಮತ್ತು ಬಾಡಿಗೆ ಬೇಡಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಇದೆ.

ಬೆಂಗಳೂರಿನಲ್ಲಿರುವ ಬಲವಾದ ತಾಂತ್ರಿಕ ನೆಲೆ ರಿಯಲ್ ಎಸ್ಟೇಟ್ ವಲಯಕ್ಕೆ ಸಹಾಯ ಮಾಡಿದೆ. ಆದರೆ, ಐಟಿ ಉದ್ಯೋಗ ಮಾರುಕಟ್ಟೆಯಲ್ಲಿ ಏನಾಗುತ್ತೋ ಅನ್ನೋ ಭಯ ಹೆಚ್ಚಾದಂತೆ ಸಮಸ್ಯೆಗಳು ಕಾಣಿಸಿಕೊಳ್ಳಲು ಸಹಾಯವಾಗುತ್ತದೆ.

ತಾಂತ್ರಿಕ ವಜಾಗಳು ಮತ್ತು ಉದ್ಯೋಗ ಮಾರುಕಟ್ಟೆಯ ಅನಿಶ್ಚಿತತೆಯ ಬಗ್ಗೆ ಚಿಂತೆ ಇದ್ದರೂ, ಬೆಂಗಳೂರಿನ ವಸತಿ ಮಾರುಕಟ್ಟೆಯ ಮೇಲಿನ ಪರಿಣಾಮ ತಾತ್ಕಾಲಿಕವಾಗಿರಬಹುದು ಎಂದು ಕೆಲವರು ಹೇಳಿದ್ದಾರೆ.

ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಬ್ಲೂಬ್ರೋಕರ್‌ನ ಸಂಸ್ಥಾಪಕ ಮಂಜೇಶ್ ರಾವ್ ಅವರ ಹೇಳಿರುವ ಮಾಹಿತಿಯನ್ನು ಹೇಳಿದ್ದಾರೆ. ಜಾಗತಿಕ ಆರ್ಥಿಕ ಬದಲಾವಣೆಗಳು, ನೇಮಕಾತಿ ನಿಲ್ಲಿಸೋದು ಮತ್ತು ತಂತ್ರಜ್ಞಾನ ವಲಯದಲ್ಲಿ ಕೆಲಸ ಕಡಿತದಿಂದಾಗಿ ಇದೇ ರೀತಿಯ ನಿಧಾನಗತಿಯನ್ನು ಅನುಭವಿಸಿದ್ದೇವೆ. ಪ್ರತಿ ಬಾರಿಯೂ ಮನೆ ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತೆ. ಆದರೆ ನಂಬಿಕೆ ಬಂದ ನಂತರ ಮಾರುಕಟ್ಟೆ ಮತ್ತೆ ಮೊದಲಿನಂತೆ ಆಗುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಗಳು ಬರದಂತೆ ಹೆಚ್ಚಾಗುತ್ತದೆ. ಯುವಕರು ಮತ್ತು ಕುಟುಂಬಗಳಿಂದ ದೀರ್ಘಕಾಲದ ಬೇಡಿಕೆ ಇರುವುದರಿಂದ ಮಾರುಕಟ್ಟೆ ಮತ್ತೆ ಮೇಲೆ ಪರಿಣಾಮವನ್ನು ಬೀರುತ್ತದೆ. ಖರೀದಿದಾರರು ಸಮಯದಲ್ಲಿ ನಿರ್ಧಾರಗಳನ್ನು ಮುಂದೂಡಬಹುದು. ಆದರೆ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹೊರಗುಳಿಯುವುದಿಲ್ಲ. ನೇಮಕಾತಿ ಹೆಚ್ಚಾದ ನಂತರ ಮತ್ತು ಉದ್ಯೋಗ ಸ್ಥಿರತೆ ಸುಧಾರಿಸಿದ ನಂತರ ಬಾಡಿಗೆ ಮತ್ತು ಖರೀದಿಯಲ್ಲಿ ಆಸಕ್ತಿ ಹೆಚ್ಚಾಗುತ್ತೆ.

ಸದ್ಯದ ಪರಸ್ಥಿತಿಯಲ್ಲಿ ಮುಂದೂಡಿಕೆಯನ್ನು ಮಾಡಬಹುದು


Spread the love
Share:

administrator

Leave a Reply

Your email address will not be published. Required fields are marked *