ನಿಮ್ಮ ಪಾಸ್ವರ್ಡ್ ಸುರಕ್ಷಿತವೇ? ಅತ್ಯಂತ ದುರ್ಬಲ ಪಾಸ್ವರ್ಡ್ಗಳ ಪಟ್ಟಿ ಬಿಡುಗಡೆ

ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸೈಬರ್ ಅಪರಾಧ ನಿಗ್ರಹ ಪಡೆ ಜನರಲ್ಲಿ ಜಾಗ್ರತಿ ಮೂಡಿಸಲು ನಿರಂತರವಾಗಿ ಯತ್ನಿಸುತ್ತಲೇ ಇದೆ. ಇದೆ ವೇಳೆ ನೋರ್ಡ್ ಪಾಸ್ 2024 ಎಂಬ ಸಂಸ್ಥೆಯೊಂದು ಅತ್ಯಂತ ದುರ್ಬಲ ಪಾಸ್ವರ್ಡ್ ಗಳ ಪಟ್ಟಿಯನ್ನು ಬಿಡುಗಡೆಮಾಡಿದೆ.
ಈ ಪಾಸ್ ವರ್ಡ್ಗಳನ್ನು ಹ್ಯಾಕರ್ಗಳು ಒಂದೇ ನಿಮಿಷದಲ್ಲಿ ಪತ್ತೆಹಚ್ಚಬಹುದು ಎಂದು ವರದಿ ಹೇಳಿದೆ.
123456, 123456789, Passwoŗ̧̧d ಮತ್ತು qwerty 123 ದುರ್ಬಲ ಪಾಸ್ವರ್ಡ್ ಗಳ ಪೈಕಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು qwerty12̧3 qwerty 1̧ 111111̧ secrȩt Password ̧1 ಮತ್ತು Iloveyou ಪಡೆದುಕೊಂಡಿದೆ.
drago̧n, Monkey, 123123123, 123321, qwertyuiop, Password 0 ಮತ್ತು 000000 ದುರ್ಬಲ ಪಾಸ್ ವರ್ಡ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.