2025ರಲ್ಲಿ ಚಿನ್ನ ಹೂಡಿಕೆ ಸೂಕ್ತವೇ? ಏನು ಹೇಳುತ್ತಾರೆ ಆರ್ಥಿಕ ತಜ್ಞರು

ಚಿನ್ನವನ್ನು ಒಂದು ಭದ್ರವಾದ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ಚಿನ್ನದ ಬೆಲೆಯನ್ನು ನೋಡಿದರೆ ಬೆವರಿಳಿಯುತ್ತದೆ. ಚಿನ್ನ ಕೊಳ್ಳುವುದಕ್ಕಿಂತ ಬೆಲೆ ಕೇಳಿದರೇನೇ ಜೇಬಿಗೆ ಕತ್ತರಿ ಬಿದ್ದಂತಾಗುತ್ತದೆ. 2025ರ ಆರಂಭದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,400 ದಾಟಿರುವುದು ಆರ್ಥಿಕ ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.
ಇದರ ನಡುವೆ ಚಿನ್ನದ ಮೇಲಿನ ಹೂಡಿಕೆ ಎಷ್ಟು ಸೂಕ್ತ ಎಂಬ ಪ್ರಶ್ನೆ ಉದ್ಭವವಾಗಿದೆ. ಅದಕ್ಕೆ ಸರಿಯಾಗಿ ಈ ಬಗ್ಗೆ ಆರ್ಥಿಕ ತಜ್ಞರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು, ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಯುದ್ಧಭೀತಿಗಳು, ಕರೆನ್ಸಿಗಳ ಮೌಲ್ಯದಲ್ಲಿ ಉಂಟಾಗುತ್ತಿರುವ ಅಸ್ಥಿರತೆ, ಹಾಗೂ ಹಣದುಬ್ಬರದ ಆತಂಕದ ನಡುವೆ, ಚಿನ್ನ ತನ್ನ ಭದ್ರತೆಗೊಳ್ಳುವ ಗುಣದಿಂದ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಬೆಳಕು ಕಾಣುತ್ತಿದೆ. ಹಲವಾರು ದೇಶಗಳ ಕೇಂದ್ರ ಬ್ಯಾಂಕುಗಳು ತಮ್ಮ ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪಾಲು ಹೆಚ್ಚಿಸುತ್ತಿರುವುದು ಇದರ ಸ್ಪಷ್ಟ ಸೂಚನೆ.
ಈಗ ಚಿನ್ನದಲ್ಲಿ ಹೆಚ್ಚು ಹೂಡಿಕೆ ಮಾಡೋದು ಉತ್ತಮವೇ?
ಪೇಟ್ರಿಯಾಟ್ ಗೋಲ್ಡ್ ಗ್ರೂಪ್‌ನ CEO ಜಾಕ್ ಹ್ಯಾನಿಯವರ ಅಭಿಪ್ರಾಯದಲ್ಲಿ, ಇಂದಿನ ಸಂಕುಚಿತ ಆರ್ಥಿಕ ಪರಿಸ್ಥಿತಿಯಲ್ಲಿ ಚಿನ್ನದ ಹಂಚಿಕೆಯನ್ನು 20%-25%ರಷ್ಟಾಗಿ ಹೆಚ್ಚಿಸುವುದು ಸೂಕ್ತ. ಅವರು ಹೇಳುವಂತೆ, “ಸ್ಥಿರ ಆರ್ಥಿಕ ಪರಿಸ್ಥಿತಿಯಲ್ಲಿ 10% ಹಂಚಿಕೆ ಸಾಕಾಗಿತ್ತು, ಆದರೆ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೆಚ್ಚು ಭದ್ರತೆ ಬೇಕಾದ ಸಮಯ ಬಂದಿದೆ.”
ಯಾವಾಗ ಚಿನ್ನದ ಹಂಚಿಕೆಯನ್ನು ಹೆಚ್ಚಿಸಬೇಕು?
ನೀವು ಚಿನ್ನವು ದೀರ್ಘಾವಧಿಯಲ್ಲಿ ಮೌಲ್ಯವೃದ್ಧಿಯ ಪರ್ಯಾಯ ಸ್ವತ್ತು ಎಂದು ನಂಬುತ್ತಿದ್ದರೆ, ಅದರಲ್ಲಿ ಹೆಚ್ಚು ಹೂಡಿಕೆಯನ್ನು ಪರಿಗಣಿಸಬಹುದು. ಜಾಗತಿಕ ಯುದ್ಧಭೀತಿ, ಮೌಲ್ಯಹೀನತೆ ಅಥವಾ ಡಾಲರ್ ದುರ್ಬಲಗೊಳ್ಳುವುದು ಮುಂತಾದ ಪರಿಸ್ಥಿತಿಗಳು ಎದುರಾಗುವ ನಿರೀಕ್ಷೆಯಿದ್ದರೆ, ನಿಮ್ಮ ಹಂಚಿಕೆಯನ್ನು ಹೆಚ್ಚಿಸುವುದು ತಂತ್ರಜ್ಞವಾದ ನಿರ್ಧಾರವಾಗಬಹುದು.
ಯಾವಾಗ ಸ್ಥಿರ ಹಂಚಿಕೆಯು ಉತ್ತಮ?
ನಿಮ್ಮ ಬಂಡವಾಳ ಈಗಾಗಲೇ ವೈವಿಧ್ಯಮಯವಾಗಿದ್ದರೆ ಮತ್ತು ನೀವು ದೀರ್ಘಾವಧಿಗೆ ಹೂಡಿಕೆ ಮಾಡುತ್ತಿದ್ದರೆ, ಚಿನ್ನದಲ್ಲಿ 10%-15% ಶೇಕಡಾವಾರು ಮಾತ್ರವಿದ್ದರೂ ಸಾಕು. ಇದು ಹಣದುಬ್ಬರದ ವಿರುದ್ಧದ ಹೆಡ್ಜ್ ಆಗಿ ಕಾರ್ಯನಿರ್ವಹಿಸುತ್ತದೆ. ಹ್ಯಾನಿಯವರ ಅಭಿಪ್ರಾಯವೂ ಇದಕ್ಕೆ ಸಮಾನ. ಅವರು ಹೇಳುವಂತೆ, “ನಿಮ್ಮ ಬಂಡವಾಳದಲ್ಲಿ ನೈಜ ಆಸ್ತಿಗಳು, ಕಡಿಮೆ ಸಾಲ ಮತ್ತು ಉತ್ತಮ ಸ್ವತ್ತು ಹಂಚಿಕೆ ಇದ್ದರೆ, ನೀವು ಈಗಿರುವ ಹಂಚಿಕೆಯನ್ನು ಮುಂದುವರಿಸಲು ಸಾಧ್ಯ.”
ಚಿನ್ನದ ಬೆಲೆ ಹೆಚ್ಚಾಗುವುದಕ್ಕೆ ಹಲವು ಬಲವಾದ ಕಾರಣಗಳಿವೆ. ಉದಾಹರಣೆಗೆ, ಅಮೆರಿಕದ ಸರ್ಕಾರಿ ಸಾಲದ ಮಟ್ಟ ಇತ್ತೀಚೆಗೆ ಚುಕ್ಕಾಣಿ ತಪ್ಪಿದಂತೆ ಹೆಚ್ಚುತ್ತಿದೆ. ಈ ಕಾರಣದಿಂದ ಡಾಲರ್ ಮೌಲ್ಯ ಕುಸಿಯುವ ಸಂಭವ ಹೆಚ್ಚಿದೆ, ಮತ್ತು ಇದು ಚಿನ್ನದ ಬೆಲೆಗೆ ಸಹಾಯ ಮಾಡುತ್ತದೆ. ಅಷ್ಟೆ ಅಲ್ಲ, ಹಣದುಬ್ಬರದ ಭೀತಿ ಹೆಚ್ಚಾಗುತ್ತಿದ್ದಂತೆ ಇತರೆ ಹೂಡಿಕೆ ಆಯ್ಕೆಗಳು ಅಪಾಯದೊಂದಿಗೆ ಬರುತ್ತವೆ, ಆದ್ದರಿಂದ ಹೂಡಿಕೆದಾರರು ಚಿನ್ನದತ್ತ ಮೊರೆ ಹೋಗುತ್ತಿದ್ದಾರೆ.
ಇನ್ನು ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವ ವಿಧಾನಗಳೂ ವಿಭಿನ್ನವಾಗಿವೆ. ಕೆಲವು ಜನರು ನೇರವಾಗಿ ಗಟ್ಟಿ ಚಿನ್ನ ಅಥವಾ ನಾಣ್ಯಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದು ಸಾಂಪ್ರದಾಯಿಕ ಹಾಗೂ ಜನಪ್ರಿಯ ವಿಧಾನ. ಇನ್ನು ಕೆಲವುರು Gold ETF ಅಥವಾ Gold IRA ಮುಖಾಂತರ ಹೂಡಿಕೆ ಮಾಡುತ್ತಾರೆ. ಇದು ಆಧುನಿಕ, ತೆರಿಗೆ ಲಾಭ ನೀಡುವ ಹಾಗೂ ಬಲವಾದ ಆಯ್ಕೆ.
ಕೊನೆಗೆ ಹೇಳಬೇಕಾದ್ದೆಂದರೆ, ಪ್ರಸ್ತುತ ಸಮಯದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವ ಬಗ್ಗೆ ಚಿಂತಿಸುವುದು ಸೂಕ್ತ. ಆದರೆ, ಇದರ ಮೊತ್ತ ಅಥವಾ ಶೇಕಡಾವಾರು ಹೇಗಿರಬೇಕು ಎಂಬುದು ನಿಮ್ಮ ವೈಯಕ್ತಿಕ ಅಗತ್ಯತೆಗಳು ಮತ್ತು ಇತರೆ ಹೂಡಿಕೆಗಳ ಸಹಿತ ಸಮೀಕ್ಷೆಯಿಂದ ನಿರ್ಧಾರವಾಗಬೇಕು. ನೀವು ಈ ಬಗ್ಗೆ ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚನೆ ಮಾಡಿದರೆ ಉತ್ತಮ. ಭದ್ರತೆ, ಲಾಭ ಹಾಗೂ ದೀರ್ಘಕಾಲೀನ ಗುರಿಗಳನ್ನು ಸಮತೋಲಿಸುತ್ತಲೇ ಚಿನ್ನದಲ್ಲಿ ಹೂಡಿಕೆ ಮಾಡುವುದೇ ಚುರುಕುತನದ