ವಾಸಿಸಲು ಯೋಗ್ಯವಾದ ವಿಶ್ವದ ಟಾಪ್ 10 ನಗರಗಳಲ್ಲಿ ಭಾರತದ ಸಿಟಿಗಿದ್ಯಾ ಸ್ಥಾನ?

ವಿಶ್ವದಲ್ಲಿ ವಾಸಿಸಲು ಉತ್ತಮ ನಗರ ಯಾವುದು? ಸುರಕ್ಷತೆ, ಉದ್ಯೋಗ, ರಕ್ಷಣೆ, ಆರ್ಥಿಕತೆ, ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ ಸೇರಿದಂತೆ ಹಲವು ಮಾನದಂಡಗಳ ಆಧಾರದಲ್ಲಿ ವಾಸಿಸಲು ಯೋಗ್ಯವಾದ ನಗರ ಯಾವುದು ಅನ್ನೋ ಪಟ್ಟಿ ಬಿಡುಗಡೆಯಾಗಿದೆ.

ಭಾರತ ಸೇರಿದಂತೆ ವಿಶ್ವದ ಪ್ರತಿಯೊಂದು ನಗರಕ್ಕೂ ಅದರದ್ದೇ ಆದ ವಿಶೇಷತೆ ಇದೆ.
ಬೆಂಗಳೂರು ಸಿಲಿಕಾನ್ ಸಿಟಿಯಾಗಿದ್ದರೆ, ಮಂಬೈ ವಾಣಿಜ್ಯ ನಗರಿ. ಇದೀಗ ಜನರು ವಾಸಿಸಲು ಅತ್ಯಂತ ಯೋಗ್ಯವಾದ ನಗರ ಯಾವುದು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. 2025ರಲ್ಲಿ ವಾಸಿಸಲು ಯೋಗ್ಯವಾದ ನಗರದ ಪಟ್ಟಿ ಬಿಡುಗಡೆಯಾಗಿದೆ. ಎಕಾನಾಮಿಸ್ಟ್ ಇಂಟಲಿಜೆನ್ಸಿ ಯುನಿಟ್ (EIU) ವಿಶ್ವದ ಹಲವು ನಗರಗಳಲ್ಲಿ ಸಮೀಕ್ಷೆ ನಡೆಸಿ ವಾಸಯೋಗ್ಯ ನಗರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ನಗರ ಡೆನ್ಮಾರ್ಕ್‌ನ ಕೋಪೆನ್‌ಹೇಗನ್ ನಗರ.
ವಾಸಿಸಲು ಯೋಗ್ಯವಾದ ನಗರ ಪಟ್ಟಿಯಲ್ಲಿ ಪ್ರತಿ ದಿನ ಸುದ್ದಿಯಲ್ಲಿರುವ ನಗರಳ ಹೆಸರಿಲ್ಲ. ಪ್ರಮುಖವಾಗಿ ವಾಸಿಸುವ ಜನರಿಗೆ ಸುಕ್ಷತೆ, ಆರೋಗ್ಯ ರಕ್ಷಣೆ, ಆರ್ಥಿಕತೆ, ಉದ್ಯೋಗವಕಾಶ, ಮೂಲಭೂತ ಸೌಕರ್ಯ, ಶಿಕ್ಷಣ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆ ಪ್ರಕಾರ ವಾಸಿಸಲು ಯೋಗ್ಯವಾದ ಟಾಪ್ 10 ನಗರಗಳ ಪಟ್ಟಿ ಈ ಕೆಳಗಿನಂತಿದೆ.
ವಾಸಿಸಲು ಯೋಗ್ಯವಾದ ವಿಶ್ವದ ಅತ್ಯುತ್ತಮ ನಗರ ಪಟ್ಟಿ (2025)
1 ) ಕೋಪೆನ್‌ಹೆಗನ್, ಡೆನ್ಮಾರ್ಕ್
2) ವಿಯೆನ್ನ, ಆಸ್ಟ್ರಿಯಾ
3) ಜ್ಯೂರಿಚ್, ಸ್ವಿಟ್ಜರ್‌ಲೆಂಡ್
4) ಮೆಲ್ಬೋರ್ನ್, ಆಸ್ಟ್ರೇಲಿಯಾ
5) ಜಿನೆವಾ, ಸ್ವಿಟ್ಜರ್‌ಲೆಂಡ್
6) ಸಿಡ್ನಿ, ಆಸ್ಟ್ರೇಲಿಯಾ
7) ಓಸಾಕ, ಜಪಾನ್
8) ಆಕ್ಲೆಂಡ್, ನ್ಯೂಜಿಲೆಂಡ್
9) ಆಡಿಲೇಡ್, ಆಸ್ಟ್ರೇಲಿಯಾ
10, ವ್ಯಾಂಕೋವರ್, ಕೆನಡಾ
ವಾಸಿಸಲು ಯೋಗ್ಯವಾದ ನಗರಗಳ ಪೈಕಿ ಆಸ್ಟ್ರೇಲಿಯಾ ಅತೀ ಹೆಚ್ಚು ಸ್ಥಾನ ಪಡೆದಿದೆ. ಆಸ್ಟ್ರೇಲಿಯಾದ ಮೂರು ನಗರಗಳು ವಾಸಿಸಲು ಅತ್ಯಂತ ಯೋಗ್ಯವಾದ ನಗರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ನಾಲ್ಕನೇ ಸ್ಥಾನಲ್ಲಿರವು ಮೆಲ್ಬೋರ್ನ್, 6ನೇ ಸ್ಥಾನದಲ್ಲಿರುವ ಸಿಡ್ನಿ, 9ನೇ ಸ್ಥಾನದಲ್ಲಿರುವ ಆಡಿಲೇಡ್ ಆಸ್ಟ್ರೇಲಿಯಾ ನಗರಗಳಾಗಿವೆ.
ಈ ಪಟ್ಟಿಯಲ್ಲಿ ಭಾರತದ ನಗರಗಳು ಸ್ಥಾನ ಪಡೆದಿಲ್ಲ. ಹಾಗಂತ ವಾಸಿಸಲು ಯೋಗ್ಯವಲ್ಲ ಎಂದಲ್ಲ. ನಗರಗಳಲ್ಲಿ ನಡೆಯುವ ಅಪರಾಧ ಸೇರಿದಂತೆ ಇತರ ಕೃತ್ಯಗಳು, ಅಲ್ಲಿನ ಮೂಲಭೂತ ಸೌಕರ್ಯ,ಆರೋಗ್ಯ ವ್ಯವಸ್ಥೆ, ಶಿಕ್ಷಣ ಸೇರಿದಂತೆ ಹಲವು ಕಾರಣಗಳಿಂದ ಭಾರತದ ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಭಾರತ ಮಾತ್ರವಲ್ಲ, ಅಮರಿಕದ ಪ್ರತಿಷ್ಠಿತ ನಗರಳಾದ ನ್ಯೂಯಾರ್ಕ್, ವಾಶಿಂಗ್ಟನ್, ಇನ್ನು ಯುಕೆಯ ಲಂಡನ್ ಸೇರಿದಂತೆ ಹಲವು ನಗರಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
