Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

SSLC ಪಾಸ್ ಆಗಲು 35 ಅಂಕ ಬೇಕೇ? 33 ಅಂಕ ಸಾಕೆ?

Spread the love

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಉತ್ತೀರ್ಣಕ್ಕೆ ಕನಿಷ್ಠ 35 ಅಂಕದ ಬದಲು 33ಕ್ಕೆ ಇಳಿಸಿ ಎಂದು ಸರ್ಕಾರಕ್ಕೆ ಖಾಸಗಿ ಶಾಲೆಗಳು ಒತ್ತಾಯ ಮಾಡಿವೆ.
ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಖಾಸಗಿ ಶಾಲೆಗಳ ಒಕ್ಕೂಟ ಕನಿಷ್ಠ 35 ಅಂಕಗಳ ಬದಲಾಗಿ ಈ ವರ್ಷದಿಂದಲೇ ಪಾಸ್‌ ಮಾನದಂಡವನ್ನು 33 ಅಂಕಗಳಿಗೆ ಬದಲಾವಣೆ ಮಾಡುವಂತೆ ಒತ್ತಾಯಿಸಿದೆ.
ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯಕ್ರಮದಲ್ಲಿ ಪಾಸ್ ಅಂಕ 33 ಇದೆ. ಇದೇ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ 33 ಅಂಕಗಳಿಗೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಹೇಳಿದೆ.
ಈಗಾಗಲೇ 33 ಅಂಕದ ಮಾದರಿ ಜಾರಿಗೆ ಶಿಕ್ಷಣ ಇಲಾಖೆಯ ಜೊತೆ ಖಾಸಗಿ ಶಾಲೆಗಳು ಸಭೆ ಮಾಡಿದ್ದವು. ಆದರೆ ಈವರೆಗೂ ಶಿಕ್ಷಣ ಇಲಾಖೆ ಈ ಪ್ರಸ್ತಾಪವನ್ನು ಪರಿಗಣನೆ ಮಾಡಿರಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದೆ. ಅಂಕ ಕಡಿತದ ಬಗ್ಗೆ ನಿರ್ಧಾರ ಮಾಡುವಂತೆ ಸಭಾಪತಿ ಬಸವರಾಜ್ ಹೊರಟ್ಟಿ ಸಹ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.

ಖಾಸಗಿ ಶಾಲೆಗಳ ಒತ್ತಾಯಕ್ಕೆ ಕಾರಣ ಏನು!?

10ನೇ ತರಗತಿ ಉತ್ತೀರ್ಣಕ್ಕೆ ಕನಿಷ್ಠ 33 ಅಂಕಗಳು ಸಾಕು ಎಂಬ ನಿಯಮ CBSE, ICSE ಸೇರಿ ವಿವಿಧ ಬೋರ್ಡ್‌ಗಳಲ್ಲಿ ಇದೆ. ಬೇರೆ ಬೋರ್ಡ್‌ನಲ್ಲಿ 100ಕ್ಕೆ ವಿದ್ಯಾರ್ಥಿಗಳು 33 ಅಂಕ ಪಡೆದರೆ ಪಾಸ್ ಆಗುತ್ತಾರೆ. 100 ರಲ್ಲಿ ಇಂಟ್ರನಲ್ ಅಸೆಸ್ಮೆಂಟ್ ಅಂಕ 20ನ್ನು ಕೇಂದ್ರ ಬೋರ್ಡ್‌ಗಳು ಸಂಪೂರ್ಣವಾಗಿ ಪರಿಗಣಿಸುತ್ತವೆ.


Spread the love
Share:

administrator

Leave a Reply

Your email address will not be published. Required fields are marked *