Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇರಾನ್ ಉಡಾಯಿಸಿದ ಕ್ಷಿಪಣಿಗಳಲ್ಲಿ ಬಹು ಗುರಿ ಸ್ಫೋಟಕ ತಂತ್ರ

Spread the love

ಟೆಲ್ಅವಿವ್ :ಇಸ್ರೇಲ್‌ ನತ್ತ ಗುರುವಾರ ಇರಾನ್ ಉಡಾಯಿಸಿದ ಪ್ರತಿ 20 ಬ್ಯಾಲೆಸ್ಟಿಕ್ ಕ್ಷಿಪಣಿಗಳ ಪೈಕಿ ಒಂದು ಕ್ಷಿಪಣಿಯ ತುದಿಯು ಸಿಡಿತಲೆಗಳ ಗೊಂಚಲನ್ನು ಹೊಂದಿತ್ತು ಎಂದು ಇಸ್ರೇಲ್ ಸೇನೆಯ ಹೋಮ್ ಫ್ರಂಟ್ ಕಮಾಂಡ್ ಅನ್ನು ಉಲ್ಲೇಖಿಸಿ ದಿ ಟೈಮ್ಸ್ ಒಫ್ ಇಸ್ರೇಲ್ ವರದಿ ಮಾಡಿದೆ.

ಇಂತಹ ಸಿಡಿತಲೆಗಳು ನೆಲಕ್ಕೆ ಅಪ್ಪಳಿಸುತ್ತಿದ್ದಂತೆಯೇ, ಸಿಡಿದು ಹೋಗಿ ಸಣ್ಣ ಸ್ಫೋಟಕಗಳನ್ನು ಚೆಲ್ಲಾಡುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಇಂತಹ ಸ್ಫೋಟಕವೊಂದು ಅಝೋರ್‌ನಲ್ಲಿನ ಮನೆಯೊಂದಕ್ಕೆ ಅಪ್ಪಳಿಸಿ, ಅದಕ್ಕೆ ಹಾನಿಯನ್ನುಂಟು ಮಾಡಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

“ನಾವು ಬಹು ಸ್ವತಂತ್ರ ಗುರಿಗಳ ಮರುಪ್ರವೇಶ ವಾಹನ (Multiple Independently Targetable Reentry Vehicle) ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹಾಗೆಯೇ, ಸಣ್ಣ ಯುದ್ಧ ಸಾಮಗ್ರಿಗಳೊಂದಿಗೆ ಇನ್ನಿತರ ಸ್ಫೋಟಕಗಳನ್ನು ಹೊಂದಿದ್ದು, ಇವುಗಳಿಂದಾಗಿ, ಒಂದೇ ಕ್ಷಿಪಣಿ ಹಲವು ಗುರಿಗಳನ್ನು ತಲುಪಬಲ್ಲದಾಗಿದೆ ಎಂದು ಇರಾನ್ ಹೇಳಿಕೊಂಡಿದೆ” ಎಂದು ದಿನಪತ್ರಿಕೆಯೊಂದರಲ್ಲಿ ಪತ್ರಕರ್ತರಾಗಿರುವವರೊಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ‌.

“ನೆಲದ ಮೇಲೆ ಕಂಡು ಬರುವ ಯಾವುದೇ ಕ್ಷಿಪಣಿ ಅವಶೇಷಗಳ ಸಮೀಪ ತೆರಳಬಾರದು. ಅವು ಅಪಾಯಕಾರಿಯಾಗಿದ್ದು, ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಇಸ್ರೇಲ್ ಸೇನೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ” ಎಂದು ದಿ ಟೈಮ್ಸ್ ಒಫ್ ಇಸ್ರೇಲ್ ವರದಿ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *