ನೌಕೆ ಮುಳುಗುವ ಮುನ್ನ ಭಾರತದಲ್ಲಿ ಇರಾನ್ ನಾವಿಕರ ಸೆಲ್ಫಿ, ಶಾಪಿಂಗ್ ಸಂಭ್ರಮ

ವಿಶಾಖಪಟ್ಟಣಂ: ಭಾರತದಲ್ಲಿ ನಡೆದ ಇಂಟರ್ನ್ಯಾಷನಲ್ ಫೀಟ್ ರಿವ್ಯೂ IFR ಹಾಗೂ ಮಿಲನ್-2026 ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದ ಇರಾನ್ ಯುದ್ಧನೌಕೆ ‘IRIS ದೇನಾ’ದ ನಾವಿಕರು ಭಾರತದಲ್ಲಿ ಇದ್ದ ವೇಳೆ ಸೆಲ್ಪಿ ತೆಗೆದುಕೊಳ್ಳುವುದು, ಪ್ರವಾಸಿ ಸ್ಥಳಗಳನ್ನು ವೀಕ್ಷಿಸುವುದು ಹಾಗೂ ಶಾಪಿಂಗ್ ಮಾಡುವುದರಲ್ಲಿ ಕಾಲ ಕಳೆದಿದ್ದರು. ಆದರೆ ಸಮರಾಭ್ಯಾಸದ ನಂತರ ಹಿಂತಿರುಗುತ್ತಿದ್ದಾಗ ಶ್ರೀಲಂಕಾದ ದಕ್ಷಿಣ ಕರಾವಳಿಯ ಸಮೀಪ ಅಮೆರಿಕದ ಜಲಾಂತರ್ಗಾಮಿ ನೌಕೆಯಿಂದ ಟಾರ್ಪಿಡೊ ದಾಳಿಗೆ ಈ ಹಡಗು ಗುರಿಯಾಗಿದ್ದು, ಹಡಗಿನಲ್ಲಿದ್ದ ಹಲವರು ಮೃತಪಟ್ಟಿದ್ದಾರೆ. ಹಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಫೆಬ್ರವರಿ 19ರಂದು ವಿಶಾಖಪಟ್ಟಣಂನ ಆರ್.ಕೆ. ಬೀಚ್ ರಸ್ತೆಯಲ್ಲಿ ನಡೆದ ನೌಕಾ ಕವಾಯತು ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು. ಬೀಚ್ ವ್ಯೂ ಹಾಲಿಡೇ ಹೋಮ್ ಹೋಟೆಲ್‌ನ ಮೇಲ್ಬಾವಣಿಯಲ್ಲಿ ನಿಂತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಲವಾರು ದೇಶಗಳ ನಾವಿಕರ ಕವಾಯತುಗಳನ್ನು ವೀಕ್ಷಿಸುತ್ತಿದ್ದರು. ಈ ಕವಾಯತಿನಲ್ಲಿ ಇರಾನ್ ನೌಕಾಪಡೆಯ ತುಕಡಿಯೂ ಭಾಗವಹಿಸಿತ್ತು ಎಂದು indianexpress.com ವರದಿ ಮಾಡಿದೆ.
“ಪರೇಡ್ ವೀಕ್ಷಿಸಲು ಸಾವಿರಾರು ಜನರು ಬಂದಿದ್ದರು. ಇರಾನ್ ನಾವಿಕರನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಅವರು ಸೆಲ್ಪಿಗಳಿಗೆ ಪೋಸ್ ನೀಡುತ್ತಾ ಕಡಲತೀರದ ಫೋಟೊಗಳನ್ನು ತೆಗೆದುಕೊಳ್ಳುತ್ತಿದ್ದರು. ವೈಝಾಗ್‌ಗೆ ಬರುವವರು ಸುರಕ್ಷಿತವಾಗಿ ಮನೆಗೆ ಮರಳುತ್ತಾರೆ ಎಂದು ನಾನು ಸದಾ ಆಶಿಸುತ್ತೇನೆ,” ಎಂದು ಹೋಟೆಲ್ ಮಾಲೀಕ ಸುರೇಶ್ ಕೆ ತಿಳಿಸಿದ್ದಾರೆ.
ಸಮರಾಭ್ಯಾಸದ ಬಳಿಕ ಬುಧವಾರ ಮುಂಜಾನೆ ವಿಶಾಖಪಟ್ಟಣಂನಿಂದ ಹಿಂತಿರುಗುತ್ತಿದ್ದ IRIM ದೇನಾವನ್ನು ಶ್ರೀಲಂಕಾದ ದಕ್ಷಿಣ ಕರಾವಳಿಯ ಸಮೀಪ ಅಮೆರಿಕದ ಜಲಾಂತರ್ಗಾಮಿ ನೌಕೆ ಮೇಲೆ ಟಾರ್ಪಿಡೊ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಹಡಗಿನಲ್ಲಿದ್ದ ಅನೇಕ ಸಿಬ್ಬಂದಿ ಮೃತಪಟ್ಟಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿದ್ದ ವೇಳೆ ಕೆಲ ಇರಾನ್ ನಾವಿಕರು ಕೈಲಾಸಗಿರಿ ಬೆಟ್ಟದ ತುದಿ, ಸಮುದ್ರದಲ್ಲಿರುವ ವಿಕ್ಟೋರಿ ಯುದ್ಧ ಸ್ಮಾರಕ, ಜಲಾಂತರ್ಗಾಮಿ ವಸ್ತುಸಂಗ್ರಹಾಲಯ ಮತ್ತು ವೈಝಾಗ್ ಹೊರವಲಯದಲ್ಲಿರುವ ಸಂಕಲ್ಪ ಕಲಾ ಗ್ರಾಮ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು. “ದಡದಲ್ಲಿ ಇದ್ದ ಹೆಚ್ಚಿನ ಸಮಯವನ್ನು ಅವರು ಭಾರತೀಯ ನೌಕಾಪಡೆಯ ಅಧಿಕಾರಿಗಳೊಂದಿಗೆ ಕಳೆದರು,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಮರಾಭ್ಯಾಸದಲ್ಲಿ 19 ವಿದೇಶಿ ಯುದ್ಧನೌಕೆಗಳನ್ನು ಸೇರಿ ಒಟ್ಟು 85 ಹಡಗುಗಳು ಭಾಗವಹಿಸಿದ್ದವು. ಭಾರತೀಯ ನೌಕಾಪಡೆಯ 60 ಹಡಗುಗಳು, ನಾಲ್ಕು ಕರಾವಳಿ ಕಾವಲು ಪಡೆಯ ಹಡಗುಗಳು ಹಾಗೂ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯಿಂದ ತಲಾ ಒಂದು ಹಡಗು ಸೇರಿದ್ದವು. ಈ ಸಂದರ್ಭದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಸಹ ವಿಶಾಖಪಟ್ಟಣಂಗೆ ಭೇಟಿ ನೀಡಿದ್ದರು.
ಫೆಬ್ರವರಿ 19ರಂದು ಮಿಲನ್ ಸಮರಾಭ್ಯಾಸವನ್ನು ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪರಸ್ಪರ ಗೌರವ ಮತ್ತು ಸಹಕಾರದ ಮನೋಭಾವದಿಂದ ಅಂತರರಾಷ್ಟ್ರೀಯ ಸಮುದಾಯವು ಸಮುದ್ರದಲ್ಲಿ ಎದುರಾಗುತ್ತಿರುವ ಸಂಕೀರ್ಣ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕೆಂದು ಕರೆ ನೀಡಿದ್ದರು ಎಂದು PIB ಪ್ರಕಟಣೆ ತಿಳಿಸಿದೆ.
ಇರಾನ್ ನಾವಿಕರು ಫೆಬ್ರವರಿ 13ರಿಂದ 15ರ ನಡುವೆ ವಿಶಾಖಪಟ್ಟಣಂಗೆ ಆಗಮಿಸಿದ್ದರು. ಈ ಅವಧಿಯಲ್ಲಿ ಕೆಲವು ವಿದೇಶಿ ನೌಕಾ ಅಧಿಕಾರಿಗಳು ತಾಜ್ ಮಹಲ್ ಹಾಗೂ ಬೋದ್ ಗಯಾಕ್ಕೆ ಸಹ ಭೇಟಿ ನೀಡಿದ್ದರು. “ಅವರು ತಾಜ್ ಮಹಲ್‌ನ ಸೌಂದರ್ಯವನ್ನು ಹಾಗೂ ಭಗವಾನ್ ಬುದ್ಧ ಜ್ಞಾನೋದಯ ಪಡೆದ ಮಹಾಬೋಧಿ ದೇವಾಲಯದ ಪಾವಿತ್ರ್ಯವನ್ನು ಕಂಯ್ತುಂಬಿಕೊಂಡಿದ್ದರು,” ಎಂದು ರಕ್ಷಣಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆರ್.ಕೆ. ಬೀಚ್ ರಸ್ತೆಯಲ್ಲಿ ನಡೆದ ಕವಾಯತಿನಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಝೀರ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮವನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಆಯೋಜಿಸಿದ್ದರು. ಇರಾನ್ ನೌಕಾಪಡೆಯ ಮುಖ್ಯಸ್ಥರಿಯರ್ ಅಡ್ಮಿರಲ್ ಶಹರಾಮ್ ಇರಾನಿ ಹಾಗೂ IRIS ದೇನಾದ ಕಮಾಂಡಿಂಗ್ ಅಧಿಕಾರಿ ಅಬುಝರ್ ಝರಿ ಸಹ ಉಪಸ್ಥಿತರಿದ್ದರು ಎಂದು ನೌಕಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇರಾನ್ ಮತ್ತು ಭಾರತ ನೌಕಾಪಡೆಯ ಸಿಬ್ಬಂದಿ ಪರಸ್ಪರ ಯುದ್ಧನೌಕೆಗಳಿಗೆ ‘ಕ್ರಾಸ್-ಡೆಕ್’ ಭೇಟಿಗಳನ್ನು ನೀಡಿದರು. ಯುವ ಅಧಿಕಾರಿಗಳು ಪರಸ್ಪರ ಸಂವಹನ ನಡೆಸಿ ಅನುಭವಗಳನ್ನು ಹಂಚಿಕೊಂಡರು. “ಅವರು ತುಂಬಾ ಉತ್ಸಾಹಭರಿತ ತಂಡವಾಗಿದ್ದರು. ಇಲ್ಲಿ ಕಳೆದ ಸಮಯವನ್ನು ಅವರು ಬಹಳವಾಗಿ ಆನಂದಿಸಿದರು,” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊನೆಯ ದಿನ ಅವರು ಬೇರೆ ಬೇರೆ ಸ್ಥಳಗಳ ವೀಕ್ಷಣೆ ಹಾಗೂ ಶಾಪಿಂಗ್ ಗೆ ತೆರಳಿದ್ದರು. ಕೈಲಾಸಗಿರಿಯ ಗಾಜಿನ ವಾಕ್ ಅವರನ್ನು ವಿಶೇಷವಾಗಿ ಆಕರ್ಷಿಸಿತ್ತು. ಕುಟುಂಬಗಳಿಗೆ ಉಡುಗೊರೆಯಾಗಿ ಸಾಂಪ್ರದಾಯಿಕ ಭಾರತೀಯ ನೇಯ್ಕೆ ವಸ್ತುಗಳನ್ನು ಖರೀದಿಸಿದ್ದರು ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.
ಕೊನೆಯ ದಿನ ಅವರು ಬೇರೆ ಬೇರೆ ಸ್ಥಳಗಳ ವೀಕ್ಷಣೆ ಹಾಗೂ ಶಾಪಿಂಗ್ ಗೆ ತೆರಳಿದ್ದರು. ಕೈಲಾಸಗಿರಿಯ ಗಾಜಿನ ಸೈವಾಕ್ ಅವರನ್ನು ವಿಶೇಷವಾಗಿ ಆಕರ್ಷಿಸಿತ್ತು. ಕುಟುಂಬಗಳಿಗೆ ಉಡುಗೊರೆಯಾಗಿ ಸಾಂಪ್ರದಾಯಿಕ ಭಾರತೀಯ ನೇಯ್ದೆ ವಸ್ತುಗಳನ್ನು ಖರೀದಿಸಿದ್ದರು ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.
ಬೀಚ್ ರಸ್ತೆಯಲ್ಲಿ ಕಚೇರಿ ಹೊಂದಿರುವ ಎಪಿ ಗ್ರಾಮೀಣ ವಿಕಾಸ್ ಬ್ಯಾಂಕ್ ಸದಸ್ಯರೊಬ್ಬರು, “ಇದು ಅತ್ಯಂತ ಸುಂದರವಾದ ಕವಾಯತಾಗಿತ್ತು. ಇರಾನ್ ನಾವಿಕರು ಸ್ಥಳೀಯರೊಂದಿಗೆ ಮಾತನಾಡಿ ಸೆಲ್ಪಿಗಳಿಗೆ ಪೋಸ್ ನೀಡುತ್ತಿದ್ದರು. ಕೆಲ ದಿನಗಳ ಹಿಂದೆ ಇಲ್ಲಿ ಕವಾಯತು ನಡೆಸಿದವರ ಮೇಲೆ ಇಂತಹ ದುರ್ಘಟನೆ ಸಂಭವಿಸಿದೆ ಎಂಬುದು ತುಂಬಾ ದುಃಖಕರ,” ಎಂದು ಹೇಳಿದ್ದಾರೆ.
ಈ ನಡುವೆ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಫ್ಟಿ, IRIS ದೇನಾ “ಭಾರತೀಯ ನೌಕಾಪಡೆಯ ಅತಿಥಿ” ಆಗಿತ್ತು ಎಂದು ತಿಳಿಸಿದ್ದಾರೆ.
“ಇರಾನ್ ಕರಾವಳಿಯಿಂದ ಸುಮಾರು 2,000 ಮೈಲು ದೂರದಲ್ಲಿ ಅಮೆರಿಕ ಸಮುದ್ರದಲ್ಲಿ ದೌರ್ಜನ್ಯ ನಡೆಸಿದೆ. ಸುಮಾರು 130 ನಾವಿಕರನ್ನು ಹೊತ್ತೊಯ್ಯುತ್ತಿದ್ದ ಭಾರತದ ನೌಕಾಪಡೆಯ ಅತಿಥಿಯಾಗಿದ್ದ ಈ ಫ್ರಿಗೇಟ್ ಅನ್ನು ಯಾವುದೇ ಎಚ್ಚರಿಕೆ ನೀಡದೆ ಅಂತರರಾಷ್ಟ್ರೀಯ ನೀರಿನಲ್ಲಿ ಹೊಡೆದುರುಳಿಸಲಾಗಿದೆ. ಅಮೆರಿಕ ಈ ಕೃತ್ಯಕ್ಕಾಗಿ ತೀವ್ರವಾಗಿ ವಿಷಾದಿಸಬೇಕಾಗುತ್ತದೆ,” ಎಂದು ಅವರು ಬರೆದಿದ್ದಾರೆ.