ಅಮೆರಿಕಕ್ಕೆ ಇರಾನ್ ಸರಣಿ ಪೆಟ್ಟು: ಒಂದೇ ದಿನದಲ್ಲಿ ಎರಡು ಯುದ್ಧವಿಮಾನಗಳು ಪತನ; ತತ್ತರಿಸಿದ ಅಮೆರಿಕ ವಾಯುಪಡೆ

ಟೆಹ್ರಾನ್: ಒಂದೇ ದಿನದಲ್ಲಿ ಅಮೆರಿಕದ ಎರಡು ಯುದ್ಧವಿಮಾನಗಳನ್ನು ಇರಾನ್ ಹೊಡೆದುರುಳಿಸಿದೆ. ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ಗಣನೀಯ ಪ್ರಗತಿ ಸಾಧಿಸಿರುವುದಾಗಿ ಹೇಳಿಕೊಂಡಿರುವ ಅಮೆರಿಕಗೆ ಇದು ದೊಡ್ಡ ಹಿನ್ನೆಡೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು ಯುದ್ಧವಿಮಾನವನ್ನು ಇರಾನ್ ಹೊಡೆದುರುಳಿಸಿದೆ. ಎರಡು ಬ್ಲಾಕ್ ಹಾಕ್ ಹೆಲಿಕಾಪ್ಟರ್ಗಳಿಗೆ ಹಾನಿಯಾಗಿದೆ
ಅಮೆರಿಕದ ಅಮೆರಿಕದ F-15E ಸ್ಟೈಕ್ ಈಗಲ್ ಯುದ್ಧವಿಮಾನವನ್ನು ಇರಾನ್ ಹೊಡೆದುರುಳಿಸಿದೆ. ಅದರಲ್ಲಿದ್ದ ಇಬ್ಬರು ಸಿಬ್ಬಂದಿಯಲ್ಲಿ ಒಬ್ಬನನ್ನು ರಕ್ಷಿಸಲಾಗಿದ್ದು, ಇನ್ನೊಬ್ಬ ನಾಪತ್ತೆಯಾಗಿದ್ದಾರೆ.
ನಮ್ಮಸ್ಥಳೀಯ ರಕ್ಷಣಾ ವ್ಯವಸ್ಥೆ ಮತ್ತೊಂದು F-35 ಶುತ್ರು ವಿಮಾನವನ್ನು ಹೊಡೆದುರುಳಿಸಿದೆ ಎಂದು ಇರಾನ್ ಹೇಳಿದೆ.
