Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉದ್ವಿಗ್ನತೆಯಿಂದ ಐಪಿಎಲ್ 2025 ವಾರ ಮಂದೂಡಿಕೆ – ಬಿಸಿಸಿಐಗೂ, ಫ್ರಾಂಚೈಸಿಗೂ ನಷ್ಟವಿಲ್ಲ ಎನ್ನುವ ಭರವಸೆ

Spread the love

ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, 2025 ರ ಐಪಿಎಲ್ ಅನ್ನು ಒಂದು ವಾರ ಮುಂದೂಡಲು ನಿರ್ಧರಿಸಿದೆ. ಈ ಸೀಸನ್‌ನಲ್ಲಿ ಒಟ್ಟು 57 ಪಂದ್ಯಗಳು ಪೂರ್ಣಗೊಂಡಿದ್ದು, 58 ನೇ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇಂದು ಮುಂದಿನ ಐಪಿಎಲ್ ಪಂದ್ಯಗಳ ಕುರಿತು ಮಾಹಿತಿ ನೀಡಿದ ಬಿಸಿಸಿಐ, ಒಂದು ವಾರ ಈ ಟೂರ್ನಿಯನ್ನು ಮುಂದೂಡಿದೆ. ಆದಾಗ್ಯೂ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಒಂದು ವೇಳೆ ರದ್ದಾದರೆ ಬಿಸಿಸಿಐ ಮತ್ತು ತಂಡದ ಮಾಲೀಕರು ಎಷ್ಟು ನಷ್ಟ ಅನುಭವಿಸುತ್ತಾರೆ ಎಂಬುದು ಎಲ್ಲರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ, ಐಪಿಎಲ್ ರದ್ದಾದರೆ ಬಿಸಿಸಿಐಗಾಗಲಿ ಅಥವಾ ಫ್ರಾಂಚೈಸಿಗಳಿಗಾಗಲಿ ಯಾವುದೇ ನಷ್ಟವಾಗುವುದಿಲ್ಲ ಎಂಬುದಾಗಿದೆ.

ಬಿಸಿಸಿಐಗೆ ಯಾವುದೇ ನಷ್ಟವಿಲ್ಲ

ಐಪಿಎಲ್ 2025 ಅನ್ನು ವಾರದವರೆಗೆ ಸ್ಥಗಿತಗೊಳಿಸಲಾಗಿದೆ. ವಾರದ ಬಳಿಕ ಪರಿಸ್ಥಿತಿ ತಿಳಿಯಾದರೆ ಈ ಸೀಸನ್ ಹೊಸ ವಿಂಡೋದಲ್ಲಿ ಪೂರ್ಣಗೊಳ್ಳುತ್ತದೆ. ಅಂದರೆ ಉಳಿದ ಪಂದ್ಯಗಳಿಗೆ ಬಿಸಿಸಿಐ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಆದಾಗ್ಯೂ ಮುಂದಿನ ವಾರವೂ ಪರಿಸ್ಥಿತಿ ಸುಧಾರಿಸದೆ ಪಂದ್ಯಾವಳಿಯನ್ನು ನಡೆಸಲು ಸಾಧ್ಯವಾಗದೆ ಐಪಿಎಲ್ ರದ್ದಾದರೂ ಯಾರಿಗೂ ಯಾವುದೇ ನಷ್ಟವಾಗುವುದಿಲ್ಲ. ಇದರ ಹಿಂದಿನ ಕಾರಣ ಬಿಸಿಸಿಐನ ವಿಮಾ ಪಾಲಿಸಿ.

ಐಪಿಎಲ್‌ ವಿಮಾ ಪಾಲಿಸಿ

ವಾಸ್ತವವಾಗಿ, ಇಂತಹ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡೆ ಬಿಸಿಸಿಐ, ಮುಂಚಿತವಾಗಿಯೇ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಹೇಗೆ ಜನರು ಅನಾರೋಗ್ಯದ ಚಿಕಿತ್ಸೆಗಾಗಿ, ಕಾರು ಮತ್ತು ಬೈಕಿಗೆ ಅಥವಾ ದುಬಾರಿ ಮೊಬೈಲ್ ಫೋನ್‌ಗೆ ವಿಮೆಯನ್ನು ತೆಗೆದುಕೊಳ್ಳುತ್ತಾರೋ ಅದೇ ರೀತಿ ಐಪಿಎಲ್ ಕೂಡ ವಿಮೆಯನ್ನು ಮಾಡಿಸಲಾಗಿದೆ. ಇದರೊಂದಿಗೆ, ತಂಡಗಳು ತಮ್ಮ ಆಟಗಾರರಿಗೆ ವಿಮೆಯನ್ನು ಸಹ ಮಾಡಿಸಿಕೊಳ್ಳುತ್ತವೆ. ಇದರಿಂದಾಗಿ ಆಟಗಾರರು ಗಾಯಗೊಂಡರೆ ಆ ಆಟಗಾರರ ಇಡೀ ಚಿಕಿತ್ಸೆ ವಿಮೆ ಮೂಲಕವೇ ನಡೆಯಲಿದೆ. ಇದರಿಂದ ಯಾವುದೇ ಫ್ರಾಂಚೈಸಿಗೂ ನಷ್ಟವಾಗುವುದಿಲ್ಲ.

ಇಷ್ಟು ಮಾತ್ರವಲ್ಲದೆ ಐಪಿಎಲ್‌ನ ಪ್ರತಿಯೊಂದು ಪಂದ್ಯ ಮತ್ತು ಆಟಗಾರನಿಗೆ ವಿಮೆ ಮಾಡಿಸಲಾಗಿರುತ್ತದೆ. ಇದರಿಂದ ಯಾವುದೇ ನಷ್ಟವನ್ನು ಸರಿದೂಗಿಸಬಹುದು. ಹೀಗಾಗಿ ಯಾವುದೇ ಫ್ರಾಂಚೈಸಿಗೂ ನಷ್ಟವುಂಟಾಗುವುದಿಲ್ಲ. ಅದೇ ಸಮಯದಲ್ಲಿ, ಪಂದ್ಯ ರದ್ದಾದರೆ, ಬಿಸಿಸಿಐ ಪ್ರಾಯೋಜಕರಿಂದ ಪಡೆಯುವ ಹಣಕ್ಕೆ ಪರಿಹಾರವನ್ನು ಸಹ ಪಡೆಯುತ್ತದೆ. ಯಾವುದೇ ಪಂದ್ಯ ರದ್ದಾದರೆ ಆಯಾ ತಂಡಗಳಿಗೆ ವಿಮಾ ಮೂಲಕ ನಷ್ಟದ ಮೊತ್ತವನ್ನು ನೀಡಲಾಗುತ್ತದೆ.


Spread the love
Share:

administrator

Leave a Reply

Your email address will not be published. Required fields are marked *