ಐಫೋನ್ 17 ಕ್ರೇಜ್: ಮುಂಬೈನ ಆಪಲ್ ಸ್ಟೋರ್ನಲ್ಲಿ ನೂಕುನುಗ್ಗಲು; ದೆಹಲಿ, ಬೆಂಗಳೂರಿನಲ್ಲೂ ಭಾರೀ ಜನಸಂದಣಿ

ಮುಂಬೈ: ಭಾರತದಲ್ಲಿ ನೂತನ ಐಪೋನ್ 17 ಲಾಂಚ್ ಆಗಿದೆ. ಮುಂಬೈ ಮತ್ತು ದೆಹಲಿಯ ಐಫೋನ್ ಶೋರೂಂಗಳಲ್ಲಿ ಇಂದು ಐಫೋನ್ ಬಿಡುಗಡೆಗೊಂಡಿದೆ. ಈ ನಡುವೆ ಹೊಸ ಐಫೋನ್ ಗಾಗಿ ಜನ ಮುಂಜಾನೆ 2 ಗಂಟೆಗೆ ಆಗಮಿಸಿ ಕ್ಯೂನಲ್ಲಿ ನಿಂತಿದ್ದಾರೆ. ಅಲ್ಲದೆ ಮುಂಬೈನಲ್ಲಿ ಶೋ ರೂಂ ಹೊರಗಡೆ ಗಲಾಟೆ ಕೂಡ ನಡೆದಿದೆ.

ನಮ್ಮ ದೇಶದಲ್ಲಿ ಐಫೋನ್ ಗೆ ಇಷ್ಟು ಕ್ರೇಜ್ ಇದೆ ಅಂತ ಯಾರು ಅಂದುಕೊಂಡಿಲ್ಲ. ವರ್ಷದಿಂದ ವರ್ಷಕ್ಕೆ ಐಫೋನ್ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಈ ನಡುವೆ ಇಂದು ದೇಶದಲ್ಲಿ ಐಫೋನ್ 17 ಬಿಡುಗಡೆಯಾಗಿದೆ. ಮುಂಬೈನ ಬಂದಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಆಪಲ್ ಅಂಗಡಿಯಲ್ಲಿ ಹೊಸ ಐಫೋನ್ 17 ಖರೀದಿಸಲು ನೂರಾರು ಜನ ಆಗಮಿಸಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ ಗಲಾಟೆ ಕೂಡ ನಡೆದಿದೆ.
ದೆಹಲಿ ಹಾಗೂ ಬೆಂಗಳೂರಿನಲ್ಲೂ ಕೂಡ ಐಪೋನ್ ಗಾಗಿ ಜನರು ಕ್ಯೂನಿಂತಿರುವುದು ಕಂಡು ಬಂದಿದೆ.
ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾ, ಮುಂಬೈನ ಜಿಯೋ ಸೆಂಟರ್ ಆಗಿರಲಿ ಮತ್ತು ದೆಹಲಿಯ ಸಾಕೇತ್ ಮಾಲ್ ಆಗಿರಲಿ ಐಫೋನ್ 17 ಖರೀದಿದಾರರ ಗುಂಪು ಎಲ್ಲೆಡೆ ಇದೆ. ಆಪಲ್ ಐಫೋನ್ 17 ಸೀರಿಸ್ ಅನ್ನು ಪಡೆಯಲು ಬಯಸುವವರು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಬೆಂಗಳೂರಿನ ಆಪಲ್ ಅಂಗಡಿಯ ಹೊರಗೆ ಜನಸಂದಣಿ ತುಂಬಾ ದೊಡ್ಡದಾಗಿರುವುದು ಕಂಡು ಬಂದಿದೆ.
ಐಫೋನ್ 17 ರೂ.82,900 ರಿಂದ ಪ್ರಾರಂಭವಾಗುತ್ತದೆ. ಐಫೋನ್ ಏರ್ ರೂ.1,19,900 ಗೆ ಲಭ್ಯವಿದೆ. ಪ್ರೊ ಮಾದರಿ ರೂ.1,34,900 ಗೆ ಮತ್ತು ಪ್ರೊ ಮ್ಯಾಕ್ಸ್ ರೂ.1,49,900 ಗೆ ಲಭ್ಯವಿದೆ. ಎಲ್ಲಾ ಮಾದರಿಗಳು ಬೇಸ್ 256GB ಸ್ಟೋರೇಜ್ ಹೊಂದಿವೆ. ಪ್ರಮುಖ ವೈಶಿಷ್ಟ್ಯಗಳಲ್ಲಿ 48MP ಕ್ಯಾಮೆರಾ, A19 ಚಿಪ್ ಮತ್ತು ಪ್ರೊಮೋಷನ್ ಡಿಸ್ಪ್ಲೇ ಸೇರಿವೆ.
