Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಂದೇ ದಿನದಲ್ಲಿ ಹೂಡಿಕೆದಾರರಿಗೆ 200 ಲಕ್ಷ ಕೋಟಿ ರೂ. ನಷ್ಟ – ಷೇರು ಮಾರುಕಟ್ಟೆಗೆ ಶಾಕ್

Spread the love

ನವದೆಹಲಿ : ಅಮೆರಿಕದ ಷೇರು ಮಾರುಕಟ್ಟೆ ಭಾರೀ ಕುಸಿತ (US stock market crash) ಕಂಡಿದೆ. ಬಹುತೇಕ ಎಲ್ಲಾ ಸೂಚ್ಯಂಕಗಳು ಗಣನೀಯವಾಗಿ ಇಳಿಕೆ ಆಗಿದೆ. ಡೌವ್ ಜೋನ್ಸ್ ಇಂಡಸ್ಟ್ರಿಯಲ್ ಆಯವರೇಜ್ ಶೇ. 3.98, ಎಸ್ ಅಂಡ್ ಪಿ 500 ಸೂಚ್ಯಂಕ (S&P 500) ಶೇ 4.84 ಯಷ್ಟು ಕುಸಿತ ಕಂಡಿದೆ.

ನಾಸ್ಡಾಕ್ ಕಾಂಪೋಸಿಟ್ ಇಂಡೆಕ್ಸ್ ಅಂತೂ ಇನ್ನೂ ಹೆಚ್ಚಿನ ಪ್ರಮಾಣದಷ್ಟು ಕಡಿಮೆ ಆಗಿದೆ. ಕೋವಿಡ್ ಬಳಿಕ ಅಮೆರಿಕ ಷೇರು ಮಾರುಕಟ್ಟೆ ಕಂಡ ಅತಿದೊಡ್ಡ ಕುಸಿತ ಇದು.

ಎಸ್ ಅಂಡ್ ಪಿ 500 ಸೂಚ್ಯಂಕದಲ್ಲಿರುವ ಅತಿದೊಡ್ಡ 500 ಕಂಪನಿಗಳ ಮಾರುಕಟ್ಟೆ ಮೌಲ್ಯ ಒಂದೇ ದಿನದಲ್ಲಿ 2.4 ಟ್ರಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಅಂದರೆ ಬರೋಬ್ಬರಿ 200 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವನ್ನು ಹೂಡಿಕೆದಾರರು ಅನುಭವಿಸಿದ್ದಾರೆ. ಭಾರತದ ಜಿಡಿಪಿಯ ಅರ್ಧಕ್ಕಿಂತ ಹೆಚ್ಚಿನ ಮೊತ್ತದಷ್ಟು ಹಣವು ಒಂದೇ ದಿನದಲ್ಲಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಅಮೆರಿಕ ಷೇರು ಮಾರುಕಟ್ಟೆಯ ಮ್ಯಾಗ್ನಿಫಿಕೆಂಟ್ ಸೆವೆನ್ ಎಂದು ಪರಿಗಣಿಸಲಾದ ಏಳು ಟೆಕ್ನಾಲಜಿ ಕಂಪನಿಗಳ ಷೇರು ಮೌಲ್ಯ ಒಂದೇ ದಿನದಲ್ಲಿ 600 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಆಯಪಲ್, ಮೈಕ್ರೋಸಾಫ್ಟ್, ಗೂಗಲ್, ಅಮೇಜಾನ್, ನಿವಿಡಿಯಾ, ಟೆಸ್ಲಾ ಮತ್ತು ಮೆಟಾ ಈ ಏಳು ಸಂಸ್ಥೆಗಳ ಷೇರುಗಳು ಎಸ್ ಅಂಡ್ ಪಿ 500 ಸೂಚ್ಯಂಕದ ಮಾರುಕಟ್ಟೆ ಮೌಲ್ಯದಲ್ಲಿ ಶೇ. 37ರಷ್ಟು ಪಾಲು ಹೊಂದಿವೆ. ಆಯಪಲ್ ಮತ್ತು ನಿವಿಡಿಯಾ ಷೇರುಮೌಲ್ಯ ಗಣನೀಯ ಕುಸಿತ ಕಂಡಿವೆ.

ಷೇರು ಮಾರುಕಟ್ಟೆ ಕುಸಿಯಲು ಏನು ಕಾರಣ?

ಡೊನಾಲ್ಡ್ ಟ್ರಂಪ್ ಅವರು ಪ್ರತಿಸುಂಕ ಕ್ರಮ ಘೋಷಣೆ ಮಾಡಿದ್ದು ಸಹಜವಾಗಿ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಎಲ್ಲಾ ದೇಶಗಳೂ ಕೂಡ ಅಮೆರಿಕದ ವಿರುದ್ಧ ರಿವೆಂಜ್ ಟ್ಯಾಕ್ಸ್ ಹಾಕಿಬಿಟ್ಟರೆ ಟ್ಯಾರಿಫ್ ಮಹಾಯುದ್ಧವೇ ಶುರುವಾಗಿಬಿಡಬಹುದು ಎನ್ನುವ ಭೀತಿ ಇದೆ.

ಹೂಡಿಕೆದಾರರಿಗೆ ಇರುವ ಮತ್ತೊಂದು ಭಯ ಎಂದರೆ, ಅಮೆರಿಕದ ದೊಡ್ಡ ಕಂಪನಿಗಳ ಸರಬರಾಜು ಸರಪಳಿಯ ಹೆಚ್ಚಿನ ಭಾಗವು ವಿದೇಶಗಳಲ್ಲಿದೆ. ಆಮದು ಸುಂಕ ಹೆಚ್ಚಾಗಿ ಬಿಟ್ಟರೆ ಸಪ್ಲೈ ಚೈನ್ನಿಂದ ಬರುವ ಬಿಡಿಭಾಗಗಳು, ಕಚ್ಛಾ ವಸ್ತುಗಳು ಇತ್ಯಾದಿ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಆಂತರಿಕವಾಗಿ ಬೆಲೆ ಏರಿಕೆ ಆಗುತ್ತದೆ. ಇದು ಕಂಪನಿಗಳ ಬೆಳವಣಿಗೆ ದೃಷ್ಟಿಯಿಂದ ಮಾರಕವಾದುದು ಎಂಬ ಲೆಕ್ಕಾಚಾರ ಇದೆ. ಈ ಕಾರಣಕ್ಕೆ ಹೂಡಿಕೆದಾರರು ಮಾರುಕಟ್ಟೆಯಿಂದ ಹೊರಬೀಳುತ್ತಿರಬಹುದು.

ಭಾರತದ ಷೇರು ಮಾರುಕಟ್ಟೆಯೂ ಕುಸಿತ…

ಭಾರತದ ಷೇರು ಮಾರುಕಟ್ಟೆ ಇತ್ತೀಚೆಗೆ ಚೇತರಿಕೆಯ ಹಾದಿಗೆ ಬಂದಿತ್ತು. ಆದರೆ, ಇವತ್ತು ಅಮೆರಿಕ ಮಾರುಕಟ್ಟೆ ರೀತಿಯಲ್ಲಿ ಸೆನ್ಸೆಕ್ಸ್, ನಿಫ್ಟಿ ಕುಸಿತ ಕಾಣುತ್ತಿದೆ. ಈ ಎರಡೂ ಸೂಚ್ಯಂಕಗಳು ಶೇ. 2ರಷ್ಟು ನಷ್ಟ ಕಂಡಿವೆ. ಇದು ಟ್ರಂಪ್ ಟ್ಯಾರಿಫ್ ಪರಿಣಾಮ ಇರಬಹುದು ಎನ್ನುವುದು ಹೆಚ್ಚಿನವರ ಅಂದಾಜು.


Spread the love
Share:

administrator

Leave a Reply

Your email address will not be published. Required fields are marked *