Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಹಣ ಕಟ್ಟಿದರೆ ಪೌಂಡ್ಸ್ ಸಿಗುತ್ತದೆ’: ಮೋಸ ಹೋಗಿ ತನ್ನ ಪರಿಚಯಸ್ಥರಿಂದಲೂ ಹಣ ಹಾಕಿಸಿದ ಮಹಿಳೆ; ಪೊಲೀಸರಿಗೆ ದೂರು, ತನಿಖೆ ಆರಂಭ

Spread the love

ಮಂಗಳೂರು : ವಿದೇಶಿ ಕರೇನ್ಸಿ ಸಿಗುತ್ತದೆ ಎಂದು ನಂಬಿ ಮಹಿಳೆಯೊಬ್ಬರು ಬರೋಬ್ಬರಿ 79 ಲಕ್ಷ ಹಣ ಕಳೆದುಕೊಂಡ ಮಂಗಳೂರಿನಲ್ಲಿ ನಡೆದಿದೆ.

ಹಣಕಳೆದುಕೊಂಡ ಮಹಿಳೆ ಮನೆಗೆ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರಿಂದ ಯು.ಕೆ (ಲಂಡನ್) ಮೂಲದ ಅಪರಿಚಿತ ವ್ಯಕ್ತಿ ಮ್ಯಾಕ್ಸ್ ಅಲೆಂಗ್ಸಾಂಡರ್ ಎಂಬವರೊಂದಿಗೆ ಆನ್ ಲೈನ್ ಫೇಸ್ ಬುಕ್ ಮೂಲಕ ಪರಿಚಯವಾಗಿದೆ. ಬಳಿಕ ದೂರುದಾರೆ ಮಹಿಳೆ ಹಾಗೂ ಅಪರಿಚಿತ ವ್ಯಕ್ತಿ ವಾಟ್ಸ್ ಆಪ್ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ಮಹಿಳೆಗೆ ವಿದೇಶಿ ಪೌಂಡ್ಸ್ ಗಳನ್ನು ನೀಡುವುದಾಗಿ ತಿಳಿಸಿದ್ದಾನೆ. ಅಲ್ಲದೆ ದಿನಾಂಕ:21-08-2025 ರಂದು ಅಪರಿಚಿತ ನೀಗ್ರೋ ವ್ಯಕ್ತಿ ದೂರುದಾರೆ ಮಹಿಳೆಯ ಮನೆಗೆ ಆಗಮಿಸಿ ತನ್ನ ಹೆಸರು ಸ್ವೀವ್ ಎಂದು ಪರಿಚಯಿಸಿಕೊಂಡು, ಸಣ್ಣದಾದ ಬಾಕ್ಸ್ ಅನ್ನು ತಂದಿದ್ದು ಆ ಬಾಕ್ಸ್ ನಲ್ಲಿ ವಿದೇಶಿ ಡಾಲರ್ ಗಳು ಇರುವುದನ್ನು ತೋರಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ಆ ಬಾಕ್ಸ್ ಅನ್ನು ಪಿರ್ಯಾದಿದಾರರಿಗೆ ನೀಡಿ ತೆರಳಿದ್ದಾನೆ.

ಇದನೆಲ್ಲಾ ಸತ್ಯವೆಂದು ಭಾವಿಸಿ ತನ್ನ ಪರಿಚಯಸ್ಥರಾದ ನೀರುಮಾರ್ಗ ಮೂಲದ ಇನ್ನೊಬ್ಬ ಮಹಿಳೆಯರಿಗೆ ಈಕ ಈ ವಿಚಾರ ತಿಳಿಸಿದ್ದಾರೆ. ಅವರು ಕೂಡ ವಿದೇಶಿ ಪೌಂಡ್ಸ್ ಆಸೆಗೆ ಸುಮಾರು 25 ಲಕ್ಷ ಹಣವನ್ನು ದೂರುದಾರೆ ಮಹಿಳೆಯ ಮೂಲಕ ವರ್ಗಾಯಿಸಿದ್ದಾರೆ. ಅಲ್ಲದೆ ಮತ್ತೊಬ್ಬ ಮಹಿಳೆಯೂ ಕೂಡ 2 ಲಕ್ಷ ಹಣವನ್ನು ನೀಡಿದ್ದಾರೆ.

ಈ ಹಣವನ್ನು ಸೇರಿಸಿ ದೂರುದಾರೆ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಿಂದ ದಿನಾಂಕ:02-04-2025 ರಿಂದ 14-08-2025 ರವರೆಗೆ ಅಪರಿಚಿತ ವ್ಯಕ್ತಿಯು ನೀಡಿದ ಹಲವು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿರುತ್ತಾರೆ. ನಂತರದ ದಿನಗಳಲ್ಲಿ ಸದ್ರಿ ಅಪರಿಚಿತ ವ್ಯಕ್ತಿ ಇನ್ನೂ ಹೆಚ್ಚಿನ ಹಣ ವರ್ಗಾಯಿಸುವಂತೆ ಪಿರ್ಯಾದಿದಾರರನ್ನು ಒತ್ತಾಯಿಸಿದಾಗ ಅನುಮಾನ ಬಂದು ತನ್ನ ಮಕ್ಕಳಲ್ಲಿ ವಿಚಾರಿಸಿದಾಗ ಪಿರ್ಯಾದಿದಾರರು ಮೋಸ ಹೋಗಿರುವ ವಿಚಾರ ತಿಳಿದಿರುತ್ತದೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ವಿದೇಶಿ ಪೌಂಡ್ಸ್ ಗಳನ್ನು ನೀಡುವುದಾಗಿ ನಂಬಿಸಿ ಆನ್ ಲೈನ್ ಮುಖಾಂತರ ಒಟ್ಟು 79,19,850/- ರೂ ಗಳನ್ನು ವರ್ಗಾಯಿಸಿಕೊಂಡು ಆನ್ ಲೈನ್ ಮೋಸ ವಂಚನೆ ಮಾಡಿದ್ದು, ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುಬೇಕೆಂದು ದೂರು ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *