ಕಾಂಗ್ರೆಸ್ ಶಾಸಕ ಬೆಂಬಲಿಗನ ಮನೆ ಮೇಲೆ ಇನ್‌ಟೆಲಿಜೆನ್ಸ್ ದಾಳಿ – ವಿದೇಶಿ ವಹಿವಾಟಿಗೆ ಸಂಬಂಧಿಸಿದ ತನಿಖೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಮುಖಂಡ, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗನ ಮನೆ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ದಾಳಿ ನಡೆಸಿದೆ.

ಕೃಷ್ಣಪ್ಪ ಅಲಿಯಾಸ್ ಜೋಳದ ಕಿಟ್ಟಪ್ಪ ಅವರ ಅದೆನ್ನಗಾರಹಳ್ಳಿ (ದಿಗೂರು) ಗ್ರಾಮದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. 20 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.
ಕೃಷ್ಣಪ್ಪ ಅವರು ವಿದೇಶಗಳಿಂದ ಪಾಪ್ ಕಾರ್ನ್ ಜೋಳ ಆಮದ ರಪ್ತು ವಹಿವಾಟು ನಡೆಸುತ್ತಿದ್ದರು. ವಿದೇಶಿ ವಹಿವಾಟಿನಲ್ಲಿ ಅಕ್ರಮ ವ್ಯವಹಾರ ಆರೋಪ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
