ಹೊರಗುತ್ತಿಗೆ ನೌಕರರ ಬದಲಿಗೆ ಖಾಯಂ ನೇಮಕಾತಿಗೆ ರಾಜ್ಯ ಸರ್ಕಾರ ಚಿಂತನೆ

ರಾಜ್ಯ ಸರ್ಕಾರದಲ್ಲಿ ಅದೆಷ್ಟೋ ಜನ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ರಾಹ್ಯ ಸರ್ಕಾರ ಅದಕ್ಕೆ ಬ್ರೇಕ್ ಹಾಕುವ ಯೋಜನೆ ರೂಪಿಸಿದೆ. ಹಾಗಾದ್ರೆ ಆ ನೌಕರರ ಕಥೆ ಏನು..? ಅದರ ಬದಲಿಗೆ ರಾಜ್ಯ ಸರ್ಕಾರ ಏನು ಮಾಡುತ್ತೆ ಎಂಬುದನ್ನ ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.

ರಾಜ್ಯ ಸರ್ಕಾರದಲ್ಲಿ ಸದ್ಯ 5.88 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 96.844 ಜನರು ಹೊರಗುತ್ತಿಗೆ ನೌಕರರಾಗಿದ್ದಾರೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾಹಿತಿಯನ್ನ ನೀಡಿದೆ. ಅದರಲ್ಲೂ ವೈದ್ಯಕೀಯ ಇಲಾಖೆಯೇ 15.824 ಹೊರಗುತ್ತುಗೆ ಪಡೆದ ಉದ್ಯೋಗಿಗಳನ್ನು ಹೊಂದಿದೆ. ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಮಂದಿ ಹೊರಗುತ್ತಿಗೆ ನೌಕರರು ಇದ್ದಾರೆ. ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಆಗುವ ತನಕ ಯಾವುದೇ ನೇಮಕಾತಿ ಬೇಡ ಎಂದು ರಾಜ್ಯ ಸರ್ಕಾರ ಈ ಹಿಂದೆಯೇ ಆದೇಶ ಮಾಡಿದೆ.
ಆ ಆದೇಶದ ಕಾತಣದಿಂದಾಗಿಯೇ ನವೆಂಬರ್ 2024 ರಿಂದ ಆಗಸ್ಟ್ 2025 ರ ನಡುವೆ 9 ತಿಂಗಳ ಕಾಲ ಸರ್ಕಾರ ಯಾವುದೇ ಹೊಸ ನೇಮಕಾತಿಯನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಈಗ ಒಳ ಮೀಸಲಾತಿಯೂ ಜಾರಿಯಾಗಿದ್ದು, ಸರ್ಕಾರ ಈ ಸಂದರ್ಭದಲ್ಲಿ ನೇಮಕಾತಿಗೆ ಮುಂದಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು 15,376 ಮಂದಿ ಮತ್ತು ಆರೋಗ್ಯ ಇಲಾಖೆ 11,424 ಹೊರಗುತ್ತಿಗೆ ನೌಕರರನ್ನು ಹೊಂದಿದೆ. ಹಿರಗುತ್ತಿಗೆ ನೌಕರರ ವೇತನಕ್ಕಾಗಿ ಸರ್ಕಾರ ಈ ವರ್ಷ 2,273 ಕೋಟಿ ಹಣವನ್ನು ಮೀಸಲಿಟ್ಟಿದೆ. ಒಟ್ಟಾರೆ ರಾಜ್ಯ ಸರ್ಕಾರ ಗುತ್ತಿಗೆಗಿಂತ ಖಾಯಂ ಕೆಲಸ ನೀಡಲು ನಿರ್ಧಾರ ಮಾಡಿದ್ದು, ಸರ್ಕಾರಿ ನೌಕರಿ ಪಡೆಯುವುದಕ್ಕೆ ಕಾಯುತ್ತಿರುವವರಿಗೆ ಸಂತಸ ತಂದಿದೆ.
