Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮಾಯಕನಿಗೆ 13 ತಿಂಗಳು ಜೈಲು ಶಿಕ್ಷೆ: ಭೋಪಾಲ್‌ನಲ್ಲಿ ಭ್ರಷ್ಟ ಪೊಲೀಸ್ ವ್ಯವಸ್ಥೆಯ ಕ್ರೂರ ಮುಖ!

Spread the love

ಒಬ್ಬ ತಪ್ಪಿತಸ್ಥನಿಗೆ ಶಿಕ್ಷೆ ಆಗದೇ ಹೋದರೂ ಪರವಾಗಿಲ್ಲ ಆದರೆ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ಹೇಳುತ್ತದೆ. ನಮ್ಮ ಕಾನೂನು. ಆದರೂ ವ್ಯವಸ್ಥೆ ಹಾಗೂ ಕೆಲ ಭ್ರಷ್ಟ ಪೊಲೀಸರ ಕೈಗೆ ಸಿಕ್ಕಿ ನಿರಪರಾಧಿಯೊಬ್ಬರು ತಾವು ಮಾಡಿದ ಒಳ್ಳೆಯ ಕಾರ್ಯಕ್ಕೆ ಸುಮಾರು 13 ತಿಂಗಳು ಜೈಲು ಶಿಕ್ಷೆ ಅನುಭವಿಸಿ ಬಂದಿದ್ದು, ಅವರ ಕತೆ ಮನಕಲುಕುವಂತಿದೆ.

ಕೆಲವೊಮ್ಮೆ ಒಳ್ಳೆಯದು ಮಾಡಲು ಹೋದವರಿಗೆ ಜೀವನದಲ್ಲಿ ಕೆಟ್ಟದಾಗುತ್ತದೆ. ನಾನು ಎಲ್ಲರಿಗೂ ಒಳ್ಳೆಯದ್ದೇ ಬಯಸುತ್ತೇನೆ ಆದರೆ ನನಗೇ ಏಕೋ ಬರೀ ಕೆಟ್ಟದೇ ಆಗುತ್ತಿದೆ ಎಂದು ಕೆಲವರು ಅಳಲು ತೋಡಿಕೊಳ್ಳುವುದನ್ನು ಕೇಳಬಹುದು. ಅದೇ ರೀತಿ ಇಲ್ಲೂ ಒಬ್ಬರಿಗೆ ಒಳ್ಳೆಯದು ಮಾಡಲು ಹೋಗಿ ಜೈಲಿನಲ್ಲಿ ವರ್ಷ ಕಳೆಯುವಂತ ಸ್ಥಿತಿ ಬಂದಿದ್ದು, ಕಡೆಗೂ ಆತ ಜೈಲಿನಿಂದ ನಿರಪರಾಧಿಯಾಗಿ ಹೊರಬಂದಿದ್ದಾನೆ.

ಹೌದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕಾನೂನು ಹಾಗೂ ಪೊಲೀಸ್ ವ್ಯವಸ್ಥೆಯ ವ್ಯವಸ್ಥೆಯಲ್ಲಿರುವವರ ನಿರ್ಲಕ್ಷ್ಯದಿಂದ ನಿರಪರಾಧಿಯೊಬ್ಬರು ಒಂದು ವರ್ಷ ಜೈಲಿನಲ್ಲಿ ಕಳೆಯುವಂತಾಗಿದೆ. ಅಂದಹಾಗೆ ಪೊಲೀಸರ ನಿರ್ಲಕ್ಷ್ಯ ಹಾಗೂ ಸುಳ್ಳು ಪ್ರಕರಣದಿಂದ ಶಿಕ್ಷೆಗೊಳಗಾದ ಯುವಕನ ಹೆಸರು ರಾಜೇಶ್, ಭೋಪಾಲ್‌ನ ಆದರ್ಶನಗರದ ಸ್ಲಮ್‌ ನಿವಾಸಿಯಾದ ರಾಜೇಶ್ ವಿಶ್ವಕರ್ಮ ಒಬ್ಬರಿಗೆ ಸಹಾಯ ಮಾಡಲು ಹೋಗಿ ಜೈಲು ಶಿಕ್ಷೆಗೆ ಒಳಗಾದವರು.

ಯಾವುದೇ ಆಸ್ತಿ ಇಲ್ಲದ ಪೋಷಕರು ಇಲ್ಲದ ಸ್ಲಮ್ ನಿವಾಸಿಯಾದ ರಾಜೇಶ್ 2024ರ ಜೂನ್‌ 16ರಂದು ಅನಾರೋಗ್ಯಪೀಡಿತ ಮಹಿಳೆಯೊಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದು ಮನೆಗೆ ಬಿಟ್ಟು ಅವರು ತಮ್ಮ ಕೆಲಸಕ್ಕೆ ಹೊರಟು ಹೋಗಿದ್ದಾರೆ ಆದರೆ ಸಂಜೆ ವೇಳೆ ಅವರು ಸಾವನ್ನಪ್ಪಿದ್ದಾರೆ. ಆದರೆ ಪೊಲೀಸರು ಬಂದು ರಾಜೇಶ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಆಕೆ ಕೇಳಿದಳು ಎಂದು ಆಸ್ಪತ್ರೆಗೆ ಕರೆದೊಯ್ದೆ, ಆದರೆ ಸಂಜೆ ವೇಳೆಗೆ ಪೊಲೀಸರು ವಿಚಾರಣೆಗಾಗಿ ನನ್ನನ್ನು ಕರೆದೊಯ್ದರು. ನಾನು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆ ಎಂದು ಅವರಿಗೆ ಹೇಳಿದೆ. ಆದರೆ ಅವರು ನನ್ನ ಕುಟುಂಬದ ಜೊತೆಗೂ ಮಾತನಾಡುವುದಕ್ಕೆ ಬಿಡಲಿಲ್ಲ, 9 ದಿನಗಳ ಕಾಲ ನನ್ನನ್ನು ಪೊಲೀಸ್ ಠಾಣೆಯಲ್ಲಿ ಇಟ್ಟರು. ನಂತರ ನೇರವಾಗಿ ಜೈಲಿಗೆ ಹಾಕಿದರು. ನನ್ನ ಬಳಿ ವಕೀಲರನ್ನು ನೇಮಿಸುವುದಕ್ಕೂ ಹಣವಿರಲಿಲ್ಲ.

ಈಗ ನಾನು 13 ತಿಂಗಳ ಕಾಲ ಜೈಲಲ್ಲಿ ಕಳೆದಿದ್ದೇನೆ. ಇಲ್ಲಿ ಯಾರೊಬ್ಬರು ನನಗೆ ಕೆಲಸ ಕೊಡುತ್ತಿಲ್ಲ, ಎಲ್ಲರೂ ನನ್ನನ್ನು ಜೈಲಿನಿಂದ ಬಂದವನು ಎಂದು ಹೇಳುತ್ತಾರೆ. ನಾನು ಅಮಾಯಕ, ಆದರೂ ನಾನು ಜೈಲಿನಲ್ಲಿ ಕಳೆಯಬೇಕಾಯ್ತು. ನನಗೆ ಭೂಮಿಯಾಗಲಿ ಪೋಷಕರಾಗಲಿ ಇಲ್ಲಆದರೆ ಈ ಘಟನೆಯಿಂದ ನನ್ನ ಮರ್ಯಾದೆ ಹೋಗಿದೆ ಎಂದು ಅವರು ಹೇಳಿದರು.

ವರ್ಷಕ್ಕೂ ಅಧಿಕ ಕಾಲ ರಾಜೇಶ್ ಜೈಲಿನಲ್ಲಿ ಕಳೆದಿದ್ದು, ಅವರ ಕುಟುಂಬಕ್ಕೂ ಯಾವುದೇ ಕಾನೂನಿನ ನೆರವು ಸಿಕ್ಕಿಲ್ಲ, ತನ್ನ ಕುಟುಂಬವನ್ನೇ ಸಲಹುವುದಕ್ಕೆ ಕಷ್ಟಪಡುತ್ತಿದ್ದ ಈತನ ಸೋದರಿ ಕಮಲೇಶ್‌ಗೆ ಈತನ ಬಂಧನವಾದ 9 ದಿನಗಳ ನಂತರ ಮಾಹಿತಿ ನೀಡಲಾಗಿತ್ತು.

ಸಂಜೆ 4 ಗಂಟೆಗೆ ಕರೆ ಮಾಡಿ ಕೋರ್ಟ್‌ಗೆ ಬರುವಂತೆ ಹೇಳಿದರು. ನನಗೆ ಹೋಗಲಾಗಲಿಲ್ಲ, ಆದರೆ ವಾರದ ನಂತರ ನಾನು ಆತನನ್ನು ಭೇಟಿಯಾದಾಗ ಆತ ಎಲ್ಲಾ ವಿಚಾರ ತಿಳಿಸಿದ. ಇದಾದ ನಂತರ ನಾನು ಆತನ ಫೋನ್ ಹಾಗೂ ಆಧಾರ್‌ಕಾರ್ಡ್‌ಗಾಗಿ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಅವುಗಳನ್ನು ನೀಡುವುದಕ್ಕೆ 500 ರೂಪಾಯಿ ಕೇಳಿದರು. ಒಂದು ವೇಳೆ ಪೊಲೀಸರು ಮರ್ಯಾದೆಯಿಂದ ತಮ್ಮ ಕೆಲಸ ಮಾಡಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ. ನಮ್ಮ ಕುಟುಂಬದಲ್ಲಿ ಯಾರೊಬ್ಬರು ಶಿಕ್ಷಿತರಿಲ್ಲ ನನಗೆ ಸಾಧ್ಯವಾದಾಗ ನಾನು ಅವನನ್ನು ಭೇಟಿ ಮಾಡುತ್ತಿದೆ ಎಂದು ಆತನ ಸೋದರಿ ಹೇಳಿದ್ದಾರೆ.

ಕೊನೆಗೂ ಆತನನ್ನು ಕೋರ್ಟ್ ನಿಪರಾಧಿ ಎಂದು ಘೋಷಿಸಿದೆ ಆದರೆ ಇದು ಪೊಲೀಸರ ಕಾರಣದಿಂದ ಅಲ್ಲ, ನ್ಯಾಯಾಲಯವೇ ಆಯೋಜಿಸಿದ ಕಾನೂನು ಸಹಾಯ ಕೇಂದ್ರದಿಂದ. ನನ್ನ ಬಳಿ ವಕೀಲರನ್ನು ನೇಮಿಸುವುದಕ್ಕೂ ಹಣವಿರಲಿಲ್ಲ ಎಂದು ಯುವಕನ ಸೋದರಿ ಹೇಳಿದ್ದಾರೆ.

ಹೀಗೆ ಈ ಯುವಕನ ಸಹಾಯಕ್ಕೆ ಬಂದಿದ್ದು, ಸರ್ಕಾರ ನೇಮಿಸಿದ ವಕೀಲೆ ರೀನಾ ವರ್ಮಾ, ಆತನ ಬಳಿ ವಕೀಲರನ್ನು ನೇಮಿಸಿಕೊಳ್ಳಲು ಹಣವಿರಲಿಲ್ಲ. ನ್ಯಾಯಾಲಯ ನನ್ನನ್ನು ನೇಮಿಸಿತು, ಮತ್ತು ನ್ಯಾಯ ಸಿಗುವಂತೆ ನೋಡಿಕೊಳ್ಳಲು ನಾವು ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇವೆ. ಇದು ಸಂಪೂರ್ಣವಾಗಿ ಉಚಿತ ಸೌಲಭ್ಯ ಎಂದು ಅವರು ಮಾಹಿತಿ ನೀಡಿದ್ದಾರೆ.

ಜೈಲಿಗೆ ಹೋಗುವುದಕ್ಕೆ ಕಾರಣವಾಗಿದ್ದೇನು?

ಮಹಿಳೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆಂದು ತೋರಿಸುವ ದಾಖಲೆಗಳಿದ್ದವು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಕತ್ತು ಹಿಸುಕಿ ಸಾವನ್ನಪ್ಪಿದ್ದಾಳೆ ಎಂಬ ವರದಿ ಇತ್ತು. ಪೊಲೀಸರು ಆಸ್ಪತ್ರೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಿಲ್ಲ. ಆಕೆಗೆ ಚಿಕಿತ್ಸೆಗೆ ಕರೆದೊಯ್ದು ಬಿಟ್ಟುಹೋದ ವ್ಯಕ್ತಿಯ ಮೇಲೆ ಯಾವ ಆಧಾರದ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ? ಯಾವುದೇ ಪುರಾವೆಗಳಿಲ್ಲರಲಿಲ್ಲ, ಪೊಲೀಸರ ತನಿಖೆ ಸಂಪೂರ್ಣ ನಿರ್ಲಕ್ಷ್ಯ ಮತ್ತು ದುರ್ಬಲವಾಗಿತ್ತು ಎಂದು ವಕೀಲೆ ರೀನಾ ವರ್ಮಾ ಹೇಳಿದ್ದಾರೆ.

ಜೈಲಿಗೆ ಹೋಗಿ ಬಂದ ನಂತರ ರಾಜೇಶ್ ಅವರ ಬದುಕು ಸಂಕಷ್ಟಕ್ಕೀಡಾಗಿದೆ. ನ್ಯಾಯಾಲಯದಿಂದಾಗಿ ಅವರಿಗೆ ಜೈಲಿನಿಂದ ಮುಕ್ತಿ ಸಿಕ್ಕಿದ್ದರೂ, ಕಳಂಕ, ಬಡತನ ಮತ್ತು ಒಂದು ವರ್ಷದ ಕಾಲದ ನಷ್ಟದ ಹೊರೆಯಿಂದ ಬಳಲುತ್ತಿರುವ ಅವರು ಹೆಚ್ಚು ಮಾತನಾಡದೇ ಮೌನಕ್ಕೆ ಶರಣಾಗಿದ್ದು, ತಾನು ಕಳೆದುಹೋದ 13 ತಿಂಗಳುಗಳಿಗೆ ನನಗೆ ಯಾರು ಪರಿಹಾರ ನೀಡುತ್ತಾರೆ? ಎಂದು ಉತ್ತರವನ್ನು ನಿರೀಕ್ಷಿಸದೆ ಕೇಳುತ್ತಾರೆ. ಆತನನ್ನು ನಿರಪರಾಧಿ ಎಂದು ಘೋಷಿಸಿದ್ದರು, ಆತನ ಈ ಸ್ಥಿತಿಗೆ ಕಾರಣವಾದ ಪೊಲೀಸ್ ಠಾಣೆಯನ್ನಾಗಲಿ ಅಧಿಕಾರಿಗಳನ್ನಾಗಲಿ ನ್ಯಾಯಾಲಯ ಪ್ರಶ್ನೆ ಮಾಡಿಲ್ಲ.


Spread the love
Share:

administrator

Leave a Reply

Your email address will not be published. Required fields are marked *