Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪೊಲೀಸ್ ತಪ್ಪು ಬರವಣಿಗೆಯಿಂದ 17 ವರ್ಷ ಕಾನೂನು ಹೋರಾಟ ಅನುಭವಿಸಿದ ಅಮಾಯಕ

Spread the love

ಪೊಲೀಸ್ ಇಲಾಖೆ ಮಾಡಿದ ಒಂದು ಎಡವಟ್ಟಿನಿಂದ ಒಂದೂವರೆ ದಶಕಕ್ಕೂ ಹೆಚ್ಚು ಓರ್ವ ವ್ಯಕ್ತಿ ಕಾನೂನು ಹೋರಾಟ ಮಾಡಿದ್ದು, ಪೊಲೀಸ್ ಇಲಾಖೆಯ ದಾಖಲೆಯಲ್ಲಿ ಒಂದು ಅಕ್ಷರದ ತಪ್ಪು (Spelling Error) ಉತ್ತರ ಪ್ರದೇಶದ (Uttar Pradesh) ಮೈನ್‌ಪುರಿಯ 55 ವರ್ಷ ರಾಜವೀರ್ ಸಿಂಗ್ ಯಾದವ್ (Rajveer Singh Yadav ) ಎಂಬಾತನ ಜೀವನವನ್ನು 17 ವರ್ಷಗಳ ಶಿಕ್ಷೆ ಅನುಭವಿಸುವಂತೆ ಮಾಡಿದೆ.
ಗ್ಯಾಂಗ್‌ಸ್ಟರ್ ಕಾಯ್ದೆಯಡಿ ತಪ್ಪಾಗಿ ಆರೋಪಿಯಾಗಿ, 22 ದಿನಗಳ ಜೈಲುವಾಸ ಮತ್ತು ದೀರ್ಘಕಾಲದ ಕಾನೂನು ಹೋರಾಟದ ಬಳಿಕ ಶನಿವಾರ ನ್ಯಾಯಾಲಯವು ರಾಜವೀರ್‌ನನ್ನು ಆರೋಪಮುಕ್ತಗೊಳಿಸಿದೆ.

2008ರ ಆಗಸ್ಟ್ 31ರಂದು, ಮೈನ್‌ಪುರಿ ಕೋತ್ವಾಲಿಯ ಇನ್ಸ್‌ಪೆಕ್ಟರ್ ಓಂಪ್ರಕಾಶ್, ಮನೋಜ್ ಯಾದವ್, ಪ್ರವೇಶ್ ಯಾದವ್, ಭೋಲಾ, ಮತ್ತು ರಾಜವೀರ್ ವಿರುದ್ಧ ಗ್ಯಾಂಗ್‌ಸ್ಟರ್ ಪ್ರಕರಣ ದಾಖಲಿಸಿದ್ದರು. ಆದರೆ, ರಾಮ್‌ವೀರ್ ಸಿಂಗ್ ಯಾದವ್‌ನ ಹೆಸರಿನ ಬದಲಿಗೆ ತಪ್ಪಾಗಿ ರಾಜವೀರ್‌ನ ಹೆಸರು ದಾಖಲಾಯಿತು. ಡನ್ನಹರ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಶಿವಸಾಗರ್ ದೀಕ್ಷಿತ್, 2008ರ ಡಿಸೆಂಬರ್ 1ರಂದು ರಾಜವೀರ್‌ನನ್ನು ಬಂಧಿಸಿದರು, ಆತನಿಗೆ ಅಪರಾಧದ ಇತಿಹಾಸವಿದೆ ಎಂದು ಮೂರು ಹಳೆಯ ಪ್ರಕರಣಗಳನ್ನು ಉಲ್ಲೇಖಿಸಿದರು. ಆದರೆ, ಈ ಪ್ರಕರಣಗಳು ರಾಜವೀರ್‌ನ ಸಹೋದರ ರಾಮ್‌ವೀರ್‌ಗೆ ಸಂಬಂಧಿಸಿದ್ದವು.

ರಾಜವೀರ್ ಆಗ್ರಾ ನ್ಯಾಯಾಲಯದಲ್ಲಿ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಹೋರಾಡಿದ. ಇನ್ಸ್‌ಪೆಕ್ಟರ್ ಓಂಪ್ರಕಾಶ್, ವಿಚಾರಣೆಯಲ್ಲಿ ಹೆಸರಿನ ತಪ್ಪನ್ನು ಒಪ್ಪಿಕೊಂಡರೂ, ತನಿಖಾಧಿಕಾರಿಗಳು ರಾಜವೀರ್ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿದರು. 2012ರಲ್ಲಿ ಪ್ರಕರಣ ವಿಚಾರಣೆಗೆ ಒಳಪಟ್ಟಿತು. ನಂತರದ 13 ವರ್ಷಗಳಲ್ಲಿ, ರಾಜವೀರ್ ನಿರಂತರವಾಗಿ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಿ, ತಾನು ತಪ್ಪಾಗಿ ಆರೋಪಿಯಾಗಿರುವುದನ್ನು ಸಾಬೀತುಪಡಿಸಲು ಶ್ರಮಿಸಿದ.ಈ ಅವಧಿಯಲ್ಲಿ ಆತನ ಜೀವನೋಪಾಯ, ಮಕ್ಕಳ ಶಿಕ್ಷಣ ಮತ್ತು ಮಾನಸಿಕ ಆರೋಗ್ಯವು ತೀವ್ರವಾಗಿ ಹಾನಿಗೊಳಗಾಯಿತು.
ಶನಿವಾರದ ತೀರ್ಪಿನಲ್ಲಿ, ADJ ಸ್ವಪನದೀಪ್ ಸಿಂಗಲ್ ಅವರ ನ್ಯಾಯಾಲಯವು ಪೊಲೀಸರ “ಗಂಭೀರ ನಿರ್ಲಕ್ಷ್ಯ”ವನ್ನು ಖಂಡಿಸಿತು. ತಪ್ಪು ಬೆಳಕಿಗೆ ಬಂದ ನಂತರವೂ ಪೊಲೀಸರು ನ್ಯಾಯಾಲಯದ ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ತೀರ್ಪು ತಿಳಿಸಿತು. ಜೊತೆಗೆ, ಈ ತಪ್ಪಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ. ಈ ಘಟನೆಯು ನಿರಪರಾಧಿಯೊಬ್ಬನ ಜೀವನವನ್ನು ಒಂದು ತಪ್ಪು ಹೇಗೆ ಹಾಳುಗೆಡವಬಹುದು ಎಂಬುದನ್ನು ಎತ್ತಿ ತೋರಿಸಿದೆ. ರಾಜವೀರ್‌ಗೆ ನ್ಯಾಯ ದೊರೆತರೂ, ಕಳೆದ 17 ವರ್ಷಗಳ ಕಾನೂನು ಹೋರಾಟದಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಸಾಧ್ಯವೇ ಎಂಬ ಪ್ರಶ್ನೆ ಉಳಿದಿದೆ.


Spread the love
Share:

administrator

Leave a Reply

Your email address will not be published. Required fields are marked *