ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿ ಮನುಷ್ಯತ್ವ ಮೀರಿದ ಹೇಯಕೃತ್ಯ: ಬಾಲಕಿ ಮೇಲೆ 2 ವರ್ಷ ಗ್ಯಾಂಗ್‌ರೇಪ್, 13 ಆರೋಪಿಗಳು ಸೆರೆ

ಎದುಗುರಲ್ಲಪಲ್ಲಿ : ಇಲ್ಲಿನ ಶ್ರೀ ಸತ್ಯ ಸಾಯಿ ಜಿಲ್ಲೆಯ ಎದುಗುರಲ್ಲಪಲ್ಲಿ ಎಂಬಲ್ಲಿ ಸತತ 2 ವರ್ಷಗಳ ಕಾಲ 15 ವರ್ಷದ ದಲಿತ ಬಾಲಕಿ ಮೇಲೆ ಗ್ಯಾಂಗ್‌ರೇ*ಪ್ ನಡೆಸಿದ ಕೃತ್ಯ ಬೆಳಕಿಗೆ ಬಂದಿದ್ದು, ಈ ಸಂಬಂಧ 13 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಭಯಾನಕ ಕೃತ್ಯದಿಂದ ಬಾಲಕಿ ಗರ್ಭಿಣಿಯಾಗಿದ್ದು, ಆಕೆ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬಯಲಾಗಿದೆ.

ಗ್ಯಾಂಗ್‌ರೇಪ್‌ನಲ್ಲಿ 21 ವರ್ಷದಿಂದ ಹಿಡಿದು 51 ವರ್ಷದವರೆಗಿನವರು ಪಾಲ್ಗೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಇನ್ನೂ ನಾಪತ್ತೆಯಾಗಿದ್ದಾನೆ
ಬಾಲಕಿ 8 ತಿಂಗಳ ಗರ್ಭಿಣಿಯಾಗಿದ್ದಾಳೆ ಮತ್ತು ಅನಂತಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದರೆ, ಜಿಲ್ಲಾಡಳಿತ ಮತ್ತು ವೈದ್ಯರು ಆಕೆಗೆ ಗರ್ಭಪಾತ ಮಾಡಿಸದಿರಲು ನಿರ್ಧರಿಸಿದ್ದಾರೆ.
