ಇನ್ಫೋಸಿಸ್ 240 ಟ್ರೈನೀಸ್‌ಗಳನ್ನು ಆಂತರಿಕ ಮೌಲ್ಯಮಾಪನದ ಕಾರಣದಿಂದ ವಜಾಗೊಳಿಸಿತು

ಬೆಂಗಳೂರು : ಭಾರತೀಯ ಐಟಿ ಕ್ಷೇತ್ರದ ಧೈತ್ಯ ಇನ್ಫೋಸಿಸ್ ಮತ್ತೆ ಸುದ್ದಿಯಲ್ಲಿದ್ದು, ಟ್ರೈನಿಂಗ್ ನಲ್ಲಿದ್ದ ಸಿಬ್ಬಂದಿ ವಜಾಗೊಳಿಸಿ ಇದೀಗ ಕೆಂಗಣ್ಣಿಗೆ ಗುರಿಯಾಗಿದೆ.

ಮೈಸೂರಿನ ಕ್ಯಾಂಪಸ್‌ನಿಂದ ಸುಮಾರು 400 ಪ್ರಶಿಕ್ಷಣಾರ್ಥಿಗಳನ್ನು ಕೆಲಸದಿಂದ ತೆಗೆದುಹಾಕಿದ್ದ ಎರಡು ತಿಂಗಳ ನಂತರ, ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ಮತ್ತೆ 240 ಪ್ರಶಿಕ್ಷಣಾರ್ಥಿಗಳನ್ನು ಆಂತರಿಕ ಮೌಲ್ಯಮಾಪನಗಳಲ್ಲಿ ಉತ್ತೀರ್ಣರಾಗದ ಕಾರಣ ವಜಾಗೊಳಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು ನೇಮಕ ಮಾಡಿಕೊಂಡಿತ್ತು. ಮೂಲಗಳ ಪ್ರಕಾರ, ಮುಂದಿನ ಬ್ಯಾಚ್‌ನ ಪ್ರಶಿಕ್ಷಣಾರ್ಥಿಗಳು ಮುಂದಿನ ವಾರದಲ್ಲಿ ಫಲಿತಾಂಶಕ್ಕಾಗಿ ಕಾಯುತ್ತಿರುವುದರಿಂದ ಇನ್ನೂ ಕೆಲವು ಪ್ರಶಿಕ್ಷಣಾರ್ಥಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಹುತೇಕ ಎಲ್ಲರೂ ದೇಶದ ವಿವಿಧ ಭಾಗಗಳಿಂದ ಆಗಮಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಆಡಳಿತ ಮಂಡಳಿಯ ಈ ನಿರ್ಧಾರದಿಂದ ಉದ್ಯೋಗಾಕಾಂಕ್ಷಿಗಳು ದಿಕ್ಕುತೋಚದೆ ಕಂಗಾಲಾಗಿದ್ದಾರೆ