ಇಂಡಿಗೋ ವಿಮಾನ ಅವ್ಯವಸ್ಥೆ 5ನೇ ದಿನವೂ ಮುಂದುವರಿಕೆ

ಬೆಂಗಳೂರು: ಇಂಡಿಗೋ ವಿಮಾನ (IndiGo Flights Chaos) ಹಾರಾಟದಲ್ಲಿ ವ್ಯತ್ಯಯ ಇಂದು ಶನಿವಾರ 5ನೇ ದಿನವೂ ಮುಂದುವರಿದಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Kempegowda Airport) ಪ್ರಯಾಣಿಕರ ಪರದಾಟ,ಗೋಳಾಟ ಮುಂದುವರಿದಿದೆ.


ಸಾವಿರಾರು ಪ್ರಯಾಣಿರರು ಏರ್ಪೋರ್ಟ್‌ನಲ್ಲೇ ಹಗಲು- ರಾತ್ರಿ ಕಾಲ ಕಳೆಯುವಂತಾಗಿದೆ. ಇಂಡಿಗೋ ಏರ್‌ಲೈನ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಏರ್‌ಪೋರ್ಟ್ ಸಿಬ್ಬಂದಿ ನಮಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಕೊನೇ ಕ್ಷಣದಲ್ಲಿ ವಿಮಾನ ಹಾರಾಟ ರದ್ದು ಎಂದು ಹೇಳುತ್ತಾರೆ. 2 ದಿನದಲ್ಲಿ ನಿಮ್ಮ ಹಣ ರೀಫಂಡ್ ಆಗುತ್ತದೆ ಎನ್ನುತ್ತಾರೆ.

ನಮಗೆ ಹಣ ಮುಖ್ಯವಲ್ಲ, ಕೆಲವರು ವ್ಯವಹಾರದ ಮೇಲೆ ಹೋಗ್ತಾರೆ, ಇನ್ನೂ ಕೆಲವರು ಪರ್ಸನಲ್ ಕೆಲಸದ ಮೇಲೆ ಬೇರೆ ಬೇರೆ ಕಡೆ ಹೋಗ್ಬೇಕಾಗಿರುತ್ತೆ. ಇವತ್ತು ನೋಡಿದ್ರೆ ಯಾವುದೇ ಮಾಹಿತಿಯಿಲ್ಲದೇ ಕೆಲವು ವಿಳಂಬ ಆಗ್ತಿವೆ. ಕೆಲವು ಸಂಪೂರ್ಣ ಕ್ಯಾನ್ಸಲ್ ಆಗ್ತಿದೆ, ಕುಟುಂಬ ಸಮೇತ ಜೈಪುರ (Jaipura) ಹೋಗ್ಬೇಕಿತ್ತು ಆದ್ರೆ ಇನ್ನೂ ಕೂಡ ಫ್ಲೈಟ್ ಕನ್ಪರ್ಮ್ ಮಾಡ್ತಿಲ್ಲ, ನಾವು ಬಳ್ಳಾರಿಯಿಂದ ಬಂದಿದ್ದೇನೆ ಈಗ ಏನು ಮಾಡೋದು ಅಂತಾ ಗೊತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.