Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದಲ್ಲಿ ರಿನಿವಬಲ್ ಎನರ್ಜಿ ಸಾಮರ್ಥ್ಯ 232 ಗಿಗಾ ವ್ಯಾಟ್ ತಲುಪಿದ ಹಿನ್ನೆಲೆ – ಮುಂದಿನ ಗುರಿ 500 ಗಿಗಾ ವ್ಯಾಟ್

Spread the love

ನವದೆಹಲಿ: ಭಾರತದಲ್ಲಿ ಸ್ಥಾಪಿತವಾದ ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯ 232 ಗಿಗಾ ವ್ಯಾಟ್ ತಲುಪಿದೆ. ಕಳೆದ ಒಂದು ದಶಕದಲ್ಲಿ ಇದು ಮೂರು ಪಟ್ಟು ಹೆಚ್ಚಾಗಿದೆ. 2014ರ ಮಾರ್ಚ್ ತಿಂಗಳಲ್ಲಿ ಭಾರತದ ಈ ಮರುಬಳಕೆ ಶಕ್ತಿ ಸಾಮರ್ಥ್ಯ 75.52 ಗಿಗಾ ವ್ಯಾಟ್ ಇತ್ತು. ಭಾರತದಲ್ಲಿ 10 ವರ್ಷದಲ್ಲಿ ರಿನಿವಬಲ್ ಎನರ್ಜಿ ಯೋಜನೆಗಳು ಸಾಕಷ್ಟು ಚಾಲ್ತಿಗೆ ಬಂದಿದ್ದು, ಸೌರಶಕ್ತಿ ವಿದ್ಯುತ್ ದರಗಳೂ ಕೂಡ ಶೇ. 80ರಷ್ಟು ಇಳಿಕೆ ಆಗಿವೆ. ಈಗ ಒಂದು ಯುನೆಟ್​​ಗೆ 10.95 ರೂ ಮಾತ್ರವೇ ಇದೆ.

ರಿನಿವಬಲ್ ಎನರ್ಜಿಗಳಲ್ಲಿ ಸೌರಶಕ್ತಿ, ವಾಯುಶಕ್ತಿ ಅಷ್ಟೇ ಅಲ್ಲದೆ ಜಲವಿದ್ಯುತ್ ಕೂಡ ಸೇರಿದೆ. ಜಲವಿದ್ಯುತ್ ಘಟಕಗಳು ಭಾರತದಲ್ಲಿ ಮೊದಲಿಂದಲೂ ಇವೆ. ಕಳೆದ ಹತ್ತು ವರ್ಷದಲ್ಲಿ ಸೌರಶಕ್ತಿ, ವಾಯುಶಕ್ತಿಯಂತಹ ಪರ್ಯಾಯ ವಿದ್ಯುತ್ ಉತ್ಪಾದನಾ ಘಟಕಗಳು ಸಾಕಷ್ಟು ಹೆಚ್ಚಾಗಿವೆ. 2014ರ ಮಾರ್ಚ್​​ನಲ್ಲಿ ಭಾರತದಲ್ಲಿ ಸೌರಶಕ್ತಿ ಕೆಪಾಸಿಟಿ 2.82 ಗಿಗಾ ವ್ಯಾಟ್​​ನಷ್ಟು ಇತ್ತು. ಇವತ್ತು ಅದು 108 ಗಿಗಾ ವ್ಯಾಟ್​​ಗೆ ಏರಿದೆ. ವಿಂಡ್ ಎನರ್ಜಿ ಅಥವಾ ವಾಯುಶಕ್ತಿ ವಿದ್ಯುತ್ ಸಾಮರ್ಥ್ಯ 21 ಗಿಗಾವ್ಯಾಟ್​​ನಷ್ಟು ಇದ್ದದ್ದು 51 ಗಿಗಾ ವ್ಯಾಟ್ ಮುಟ್ಟಿದೆ.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೋಲಾರ್ ಮಾಡ್ಯೂಲ್ ಮ್ಯಾನುಫ್ಯಾಕ್ಚರಿಂಗ್ ಸಖತ್ ಹೆಚ್ಚಾಗಿದೆ. ಹತ್ತು ವರ್ಷಗಳ ಹಿಂದೆ ಸೋಲಾರ್ ಸೆಲ್ ಮತ್ತು ವೇಫರ್​​ಗಳು ಭಾರತದಲ್ಲಿ ತಯಾರಾಗುತ್ತಿದ್ದುದು ತೀರಾ ಕಡಿಮೆ. ಇವತ್ತು 25 ಗಿಗಾವ್ಯಾಟ್​​ನಷ್ಟು ಸೋಲಾರ್ ಸೆಲ್ ತಯಾರಿಕೆ ಆಗಿದೆ.

ರಿನಿವಬಲ್ ಎನರ್ಜಿ ಸಾಮರ್ಥ್ಯದಲ್ಲಿ ಮೂರನೇ ಸ್ಥಾನದಲ್ಲಿ ಭಾರತ

  1. ಚೀನಾ: 1,827 ಗಿಗಾ ವ್ಯಾಟ್
  2. ಅಮೆರಿಕ: 428 ಗಿಗಾ ವ್ಯಾಟ್
  3. ಭಾರತ: 232 ಗಿಗಾ ವ್ಯಾಟ್
  4. ಬ್ರೆಜಿಲ್: 213 ಗಿಗಾ ವ್ಯಾಟ್
  5. ಜರ್ಮನಿ: 179 ಗಿಗಾ ವ್ಯಾಟ್
  6. ಜಪಾನ್: 132 ಗಿಗಾ ವ್ಯಾಟ್
  7. ಕೆನಡಾ: 110 ಗಿಗಾ ವ್ಯಾಟ್
  8. ಸ್ಪೇನ್: 88.5 ಗಿಗಾ ವ್ಯಾಟ್
  9. ಫ್ರಾನ್ಸ್: 74 ಗಿಗಾ ವ್ಯಾಟ್
  10. ಇಟಲಿ: 72 ಗಿಗಾ ವ್ಯಾಟ್

ಇನ್ನೈದು ವರ್ಷದಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆಯಾ ಭಾರತ?

2030ರಷ್ಟರಲ್ಲಿ ಭಾರತದಲ್ಲಿ ಸ್ಥಾಪಿತವಾದ ರಿನಿವಬಲ್ ಎನರ್ಜಿ ಸಾಮರ್ಥ್ಯವನ್ನು 500 ಗಿಗಾ ವ್ಯಾಟ್​​ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಇನ್ನೈದು ವರ್ಷದಲ್ಲಿ ಪ್ರತೀ ವರ್ಷ ಕನಿಷ್ಠ 50 ಗಿಗಾ ವ್ಯಾಟ್​​ನಷ್ಟು ರಿನಿವಬಲ್ ಎನರ್ಜಿ ಕೆಪಾಸಿಟಿ ಹೆಚ್ಚಾಗುವ ಅವಶ್ಯಕತೆ ಇದೆ. ಈ ಗುರಿ ನೆರವೇರಿದರೆ ಅಮೆರಿಕಕ್ಕಿಂತ ಹೆಚ್ಚು ರಿನಿವಬಲ್ ಎನರ್ಜಿ ಸಾಮರ್ಥ್ಯ ಭಾರತದ್ದಾಗಬಹುದು.


Spread the love
Share:

administrator

Leave a Reply

Your email address will not be published. Required fields are marked *