ಬಾಹ್ಯಾಕಾಶಕ್ಕೆ ಭಾರತದ ಹೊಸ ರಕ್ಷಣಾ ಯೋಜನೆ: ಉಪಗ್ರಹಗಳ ರಕ್ಷಣೆಗಾಗಿ ‘ಬಾಡಿಗಾರ್ಡ್ ಸ್ಯಾಟಲೈಟ್’ ನಿಯೋಜನೆ

ಬೆಂಗಳೂರು : ಕಕ್ಷೆಯಲ್ಲಿ ಭೂಮಿಯನ್ನು ಸುತ್ತುವ ವೇಳೆ ಇನ್ನೊಂದು ಸ್ಯಾಟ್ಲೈಟ್ಗೆ ಢಿಕ್ಕಿಯಾಗುವ ಬುಹುತೇಕ ಸಾಧ್ಯತೆಯನ್ನು ತಪ್ಪಿಸಿಕೊಂಡ ನಂತರ ಭಾರತ ಈಗ ಬಾಹ್ಯಾಕಾಶದಲ್ಲಿ ಬಾಡಿಗಾರ್ಡ್ ಸ್ಯಾಟಲೈಟ್ಅನ್ನು ಉಪಗ್ರಹಗಳ ರಕ್ಷಣೆಗೆ ಬಳಸಿಕೊಳ್ಳಲು ನಿರ್ಧರಿಸಿದೆ.

ಬಾಹ್ಯಾಕಾಶ ನೌಕೆಗಳಿಂದ ರಾಷ್ಟ್ರೀಯ ಭದ್ರತೆಗೆ ಉಂಟಾಗುವ ಅಪಾಯ ಇನ್ನಷ್ಟು ಹೆಚ್ಚಿರುವ ಕಾರಣ, ಈ ನೌಕೆಗಳ ರಕ್ಷಣೆ ಮಾಡುವ ಸಾಮರ್ಥ್ಯವನ್ನು ಸುಧಾರಿಸಲು ಒಂದು ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಕಕ್ಷೆಯಲ್ಲಿರುವ ಬಾಹ್ಯಾಕಾಶ ನೌಕೆಗಳಿಗೆ ಇರುವ ಬೆದರಿಕೆಗಳನ್ನು ಗುರುತಿಸಲು ಮತ್ತು ಎದುರಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬಾಡಿಗಾರ್ಡ್ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲು ಬಯಸಿದೆ ಎಂದು ಮೂಲಗಳು ತಿಳಿಸಿವೆ.
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಸಮಯದಲ್ಲಿ ಉಪಗ್ರಹಗಳು ಮಹತ್ವದ ಪಾತ್ರ ವಹಿಸಿದವು, ಇದು ರಾಷ್ಟ್ರಗಳನ್ನು ಸಂಪೂರ್ಣ ಯುದ್ಧದ ಅಂಚಿನಲ್ಲಿರಿಸಿತು. ನೆರೆಯ ದೇಶದ ಉಪಗ್ರಹವೊಂದು ಭಾರತದ ಉಪಗ್ರಹದ ಸಮೀಪಕ್ಕೆ ಅತ್ಯಂತ ಅಪಾಯಕಾರಿಯಾಗಿ ಬಂದಿತ್ಉತ. ಇದರಿಂದ ಹೆಚ್ಚೂ ಕಡಿಮೆ ಬಾಹ್ಯಾಕಾಶದಲ್ಲಿ ಉಪಗ್ರಹಗಳು ಢಿಕ್ಕಿಯಾಗುವ ಸಮಸ್ಯೆ ಸೃಷ್ಟಿಯಾಗಿತ್ತು. ಆದರೆ, ಈ ಘಟನೆ ಅಂದು ಹೆಚ್ಚಾಗಿ ವರದಿಯಾಗಿರಲಿಲ್ಲ. ಆದರೆ, ಘಟನೆಯಿಂದ ಎಚ್ಚೆತ್ತುಕೊಂಡಿರುವ ಭಾರತ ಬಾಡಿಗಾರ್ಡ್ ಸ್ಯಾಟ್ಲೈಟ್ ರಚಿಸಲು ಆರಂಭ ಮಾಡಿದೆ.
2024ರ ಮಧ್ಯದಲ್ಲಿ ಈ ಘಟನೆ ನಡೆದಿತ್ತು. ಇಸ್ರೋ ಹಾರಿಬಿಟ್ಟ ಉಪಗ್ರಹಗಳು ಭೂಮಿಯ ಮೇಲಿನಿಂದ 500-600 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತದೆ. ಇದೇ ಕಕ್ಷೆಯಲ್ಲಿ ಎಲೋನ್ ಮಸ್ಕ್ ಅವರ ಸ್ಟಾರ್ಲಿಂಕ್ ನೆಟ್ವರ್ಕ್ನ ಸಾಲು ಸಾಲು ಸಂವಹನ ಉಪಗ್ರಹಗಳು ಕೂಡ ಇರುವುದರಿಂದ ಇದು ಅತ್ಯಂತ ಬ್ಯುಸಿ ಕಕ್ಷೆಯಾಗಿ ಮಾರ್ಪಟ್ಟಿದೆ.
ನೆರೆಯ ದೇಶವೊಂದರ ಸ್ಯಾಟಲೈಟ್ ಭಾರತದ ಸ್ಯಾಟಲೈಟ್ಗೆ ಢಿಕ್ಕಿಯಾಗುವ ಹಂತದಿಂದ 1 ಕಿಲೋಮೀಟರ್ ದೂರದಲ್ಲಿತ್ತು. ಇಸ್ರೋದ ಈ ಸ್ಯಾಟಲೈಟ್ ಮಿಲಿಟರಿ ಅಪ್ಲಿಕೇಶನ್ನ ಕೆಲಸವನ್ನು ನಿರ್ವಹಣೆ ಮಾಡುತ್ತಿತ್ತು. ಭೂಮಿಯಲ್ಲಿ ಮ್ಯಾಪಿಂಗ್ ಹಾಗೂ ಮಾನಿಟರಿಂಗ್ ಮಾಡುವ ಕೆಲಸ ಈ ಉಪಗ್ರಹದ್ದಾಗಿತ್ತು ಎಂದು ಮೂಲಗಳು ತಿಳಿಸಿವೆ.
