Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸರ್ಕಾರಿ ಆಸ್ಪತ್ರೆಗೆ ಭಾರತದ ಮೊದಲ ಸ್ವದೇಶಿ MRI ಮಷಿನ್: ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆಗೆ ದಾರಿ

Spread the love

ಭಾರತ : ಭಾರತವು ತನ್ನ ಮೊದಲ ಸ್ವದೇಶಿ MRI (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಇದನ್ನು ದೆಹಲಿಯ ಏಮ್ಸ್​ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್)ನಲ್ಲಿ ಸ್ಥಾಪಿಸಲಾಗುವುದು ಮತ್ತು ಅಕ್ಟೋಬರ್ 2025 ರಿಂದ ಪ್ರಯೋಗಗಳನ್ನು ನಡೆಸಲಾಗುತ್ತದೆ. ಈ ಸ್ವದೇಶಿ ಮಷಿನ್​ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಆಮದು ಮಾಡಿಕೊಂಡ ವೈದ್ಯಕೀಯ ಉಪಕರಣಗಳ ಮೇಲಿನ ಅವಲಂಬನೆಯನ್ನು ಶೇ.80-85ರಷ್ಟು ತಗ್ಗಿಸಲಿದೆ.

ಮೆಡಿಕಲ್​ ಟೆಕ್ನಾಲಜಿಯಲ್ಲಿ ಭಾರತ ಸ್ವಾವಲಂಬಿ: ವೈದ್ಯಕೀಯ ತಂತ್ರಜ್ಞಾನದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಇದೊಂದು ಪ್ರಮುಖ ಹೆಜ್ಜೆ. ಇದರೊಂದಿಗೆ 1.5 ಟೆಸ್ಲಾ MRI ಸ್ಕ್ಯಾನರ್ ಸ್ಥಾಪಿಸಲು SAMEER (ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ಸಂಶೋಧನಾ ಸಂಸ್ಥೆ) ಮತ್ತು AIIMS ನಡುವೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕುವ ಪ್ರಕ್ರಿಯೆಯೂ ಸಹ ಮುಗಿದಿದೆ.

“ಭಾರತದಲ್ಲಿ ಕ್ರಿಟಿಕಲ್ ಕೇರ್, ಪೋಸ್ಟ್​-ಆಪರೇಟಿವ್​ ಕೇರ್​, ಐಸಿಯು, ರೊಬೊಟಿಕ್ಸ್ ಮತ್ತು ಎಂಆರ್​ಐನಂತಹ ಮುಂತಾದ ಕ್ಷೇತ್ರಗಳಲ್ಲಿ ಹಲವು ಸಾಧನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅದರಲ್ಲಿ ಉತ್ತಮ ಗುಣಮಟ್ಟದ ಉಪಕರಣಗಳಲ್ಲಿ ಶೇ 80ರಿಂದ 90ರಷ್ಟನ್ನು ಆಮದು ಮಾಡಿಕೊಂಡಿದ್ದೇವೆ. ಭಾರತ ದಿ ಬೆಸ್ಟ್​ ಇಂಟೆಲಿಜೆನ್ಸ್​ ಹೊಂದಿದೆ. ನಮಗೆ ಜಗತ್ತಿನ ಅತ್ಯುತ್ತಮ ಉಪಕರಣಗಳು ಕೂಡ ಬೇಕು. ಈ ಗುರಿಯತ್ತ ಏಮ್ಸ್​ ಕೆಲಸ ಮಾಡುತ್ತಿದೆ. ಆದರೆ ಈಗ ನಾವು ಈ ಸಾಧನಗಳನ್ನು ಭಾರತದಲ್ಲಿ ಏಕೆ ತಯಾರಿಸಲು ಸಾಧ್ಯವಿಲ್ಲ ಎಂದು ಯೋಚಿಸುತ್ತಿದ್ದೇವೆ. ಇದು ಸ್ವಾವಲಂಬಿ ಭಾರತದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ದೆಹಲಿಯ ಏಮ್ಸ್​ ನಿರ್ದೇಶಕ ಡಾ.ಎಂ.ಶ್ರೀನಿವಾಸ್ ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *