Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದ ಮೊದಲ ದೇಶೀಯ ಎಐ – ಭಾರತ್‌ಜೆನ್ ಬಿಡುಗಡೆ

Spread the love

ನವದೆಹಲಿ:ಚ್ಯಾಟ್​​ಜಿಪಿಟಿ (ChatGPT) ರೀತಿಯಲ್ಲಿ ಭಾರತದ್ದೇ ಸ್ವಂತ ಮಲ್ಟಿಮೋಡಲ್ ಎಲ್​ಎಲ್​​ಎಂವೊಂದು ತಯಾರಾಗಿದೆ. ನಿನ್ನೆ ಸೋಮವಾರ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ‘ಭಾರತ್ ಜೆನ್’ ಅನ್ನು ಬಿಡುಗಡೆ ಮಾಡಿದ್ದಾರೆ.

ಭಾರತದಲ್ಲಿ ಸ್ವಂತವಾಗಿ ಅಭಿವೃದ್ಧಿಗೊಂಡ ಮೊದಲ ಮಲ್ಟಿಮೋಡಲ್ ಲಾರ್ಜ್ ಲ್ಯಾಂಗ್ವೇಜ್ ಎಐ ಮಾಡಲ್ ಇದು. ಜನರೇಟಿವ್ ಎಐ ಮತ್ತು ಎಲ್​​ಎಲ್​​ಎಂ ಸಮಿಟ್ ಮತ್ತು ಹ್ಯಾಕಥಾನ್ ಎನಿಸಿದ ‘ಭಾರತ್​ಜೆನ್ ಸಮಿಟ್’ (BharatGen Summit) ಕಾರ್ಯಕ್ರಮದ ವೇಳೆ ಸಚಿವರು ಈ ವಿಶೇಷ ಎಐ ಮಾಡಲ್ ಅನ್ನು ಅನಾವರಣಗೊಳಿಸಿದ್ದಾರೆ.

ಐಐಟಿ ಬಾಂಬೆ ನೆರವಿನಿಂದ ಮತ್ತು ಸರ್ಕಾರದ ಪ್ರಾಯೋಜಕತ್ವದಲ್ಲಿ ಭಾರತ್ ಜೆನ್ ಎಲ್​ಎಲ್​​ಎಂ ಅನ್ನು ರೂಪಿಸಲಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇತರ ಹಲವು ಶಿಕ್ಷಣ ಸಂಸ್ಥೆಗಳ ಸಂಶೋಧಕರು ಮತ್ತು ವಿಜ್ಞಾನಿಗಳು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಈ ಹಿಂದೆ ಚ್ಯಾಟ್​​ಜಿಪಿಟಿ ಬಿಡುಗಡೆ ಆದಾಗ ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​​ಮ್ಯಾನ್ ಅವರು ಭಾರತಕ್ಕೆ ಇಂಥ ಎಲ್​​ಎಲ್​​ಎಂ ಅನ್ನು ಸ್ವಂತವಾಗಿ ತಯಾರಿಸಲು ಆಗೋದಿಲ್ಲ ಎಂದು ನಿಷ್ಠುರವಾಗಿ ಹೇಳಿದ್ದರು. ಒಂದು ವರ್ಷದ ಅಂತರದಲ್ಲಿ ಭಾರತೀಯರು ಸ್ಯಾಮ್​​ಗೆ ತಕ್ಕ ಉತ್ತರ ಕೊಟ್ಟಿದ್ದಾರೆ.

ಸರ್ವಮ್ ಎಐ, ಚ್ಯಾಟ್​ಜಿಪಿಟಿಗಿಂತ ಭಾರತ್ ಜೆನ್ ಹೇಗೆ ಭಿನ್ನ?

ಕಳೆದ ತಿಂಗಳು ಸರ್ವಮ್ ಎಐ ಎನ್ನುವ ಮಾಡಲ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದು ಸ್ವಂತ ಪ್ಲಾಟ್​​ಫಾರ್ಮ್​​ನಲ್ಲಿ ರೂಪುಗೊಂಡ ಮಾಡಲ್ ಅಲ್ಲ. ಯೂರೋಪ್​​ನಲ್ಲಿ ಅಭಿವೃದ್ಧಿಪಡಿಸಲಾದ ಮಿಸ್ತ್ರಾಲ್ ಸ್ಮಾಲ್ ಎನ್ನುವ ಓಪನ್ ಸೋರ್ಸ್ ಮಾಡಲ್ ಅನ್ನು ಉಪಯೋಗಿಸಿಕೊಂಡು ತಯಾರಿಸಲಾಗಿದೆ.

ಭಾರತ್​​ಜೆನ್ ಬಹುತೇಕ ಚ್ಯಾಟ್​​ಜಿಪಿಟಿ ಮಾದರಿಯಲ್ಲಿ ಇರುವ, ಆದರೆ, ಭಾರತದಲ್ಲೇ ಸ್ವಂತವಾಗಿ ತಯಾರಾಗಿರುವ ಮಲ್ಟಿಮೋಡಲ್ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಆಗಿದೆ. ಚ್ಯಾಟ್​​ಜಿಪಿಟಿ ಇತ್ಯಾದಿಗಿಂತ ಭಾರತ್ ಜೆನ್ ಸ್ವಲ್ಪ ಭಿನ್ನ ಎನಿಸಿಕೊಳ್ಳುವುದು ಇದರ ಭಾರತೀಯ ಭಾಷೆಗಳ ಅಳವಡಿಕೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳ ಕಂಟೆಂಟ್ ಅನ್ನು ಯಥೇಚ್ಛವಾಗಿ ಬಳಸಿ ಈ ಮಾಡಲ್​​ಗೆ ಟ್ರೇನ್ ಮಾಡಲಾಗಿದೆ.

ಭಾರತ್​​ಜೆನ್ ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸಬಲ್ಲುದು. ಭಾರತೀಯ ಭಾಷೆ ಮತ್ತು ಸಂಸ್ಕೃತಿಯ ಅಂಶಗಳನ್ನು ಅಳವಡಿಸಿಕೊಂಡಿರುವ ಇದು ಭಾರತೀಯರಿಗೆ ಅವರದೇ ಭಾಷೆಯಲ್ಲಿ ಎಐ ಸೇವೆ ನೀಡಲು ಹೆಚ್ಚು ಸಮರ್ಪಕ ಎನಿಸಬಹುದು.

ಭಾರತ್​ಜೆನ್ ಉಪಯೋಗ ಹೇಗೆ?

ಮಲ್ಟಿಮೋಡಲ್ ಎಲ್​ಎಲ್​ಎಂಗಳು ಹಲವು ರೀತಿಯಲ್ಲಿ ಉಪಯುಕ್ತ ಎನಿಸಬಲ್ಲುವು. ಕೃಷಿ, ಶಿಕ್ಷಣ, ಆರೋಗ್ಯ, ವ್ಯವಹಾರ ಇತ್ಯಾದಿ ಕ್ಷೇತ್ರಗಳಲ್ಲಿ ಸಾಕಷ್ಟು ವಿಷಯಗಳನ್ನು ಈ ಎಐ ಮಾಡಲ್​​ಗಳು ಕರಗತ ಮಾಡಿಕೊಂಡಿದ್ದು, ಜನರ ಬಹುತೇಕ ಅನುಮಾನಗಳಿಗೆ ಪರಿಹಾರ ಒದಗಿಸಲು ಸಮರ್ಥವಾಗಿರುತ್ತವೆ. ಸದ್ಯ ಭಾರತ್​ಜೆನ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಸಾರ್ವಜನಿಕ ಬಳಕೆಗೆ ಲಭ್ಯ ಇಲ್ಲ.


Spread the love
Share:

administrator

Leave a Reply

Your email address will not be published. Required fields are marked *