Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದ ಮೊಟ್ಟಮೊದಲ ಹೈಡ್ರೋಜನ್ ರೈಲು: ನಿರೀಕ್ಷೆಗೆ ಬಿತ್ತು ಬ್ರೇಕ್

Spread the love

ಭಾರತ : ಭಾರತದ ಮೊಟ್ಟ ಮೊದಲ ಹೈಡ್ರೋಜನ್ ಇಂಧನ ಸೆಲ್​ ರೈಲು ಯಾವಾಗ ಪ್ರಾರಂಭವಾಗುತ್ತದೆ ಎಂದು ಕೋಟ್ಯಂತರ ಜನರು ಬಹಳ ಸಮಯದಿಂದ ಕಾಯುತ್ತಿದ್ದಾರೆ. ಮೊದಲ ಹೈಡ್ರೋಜನ್ ಇಂಧನ ಸೆಲ್​ ರೈಲು ಕಳೆದ ವರ್ಷ ಅಂದ್ರೆ ಡಿಸೆಂಬರ್ 2024ರಲ್ಲಿ ಪ್ರಾರಂಭವಾಗಬೇಕಾಗಿತ್ತು. ಆದ್ರೆ ಮಾರ್ಚ್ 31ರ ವೇಳೆಗೆ ಇದು ಬಳಕೆಗೆ ಸಿದ್ಧವಾಗುವ ನಿರೀಕ್ಷೆಯಿತ್ತು. ಈಗ ಪರೀಕ್ಷೆಯ ಸಮಯದಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಬೆಳಕಿಗೆ ಬಂದ ನಂತರ ಈ ರೈಲು ಸಂಚಾರವನ್ನು ಸ್ವಲ್ಪ ಸಮಯದವರೆಗೆ ಮತ್ತೆ ಮುಂದೂಡಲಾಗಿದೆ.

ಹೆಚ್ಚಿನ ಪೇಲೋಡ್ ಸಾಗಿಸಲು ಅದರ ಹೈಡ್ರೋಜನ್ ಇಂಧನ ಸೆಲ್​ ಸಾಮರ್ಥ್ಯವನ್ನು ಸುಧಾರಿಸಲು ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗಿದೆ. ಈ ಮಾಹಿತಿಯನ್ನು ಸಿಬ್ಬಂದಿ ಅರಿತುಕೊಂಡಿದ್ದು, ರೈಲನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ.

ಭಾರತೀಯ ರೈಲ್ವೆಯ ಅಭಿವೃದ್ಧಿಯಲ್ಲಿ ಹೈಡ್ರೋಜನ್ ಇಂಧನ ಸೆಲ್​ ರೈಲು ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಲಿದೆ. ಇದು ಐತಿಹಾಸಿಕ ಕಲ್ಕಾ-ಶಿಮ್ಲಾ ಮಾರ್ಗದಲ್ಲಿ ಪ್ರತ್ಯೇಕವಾಗಿ ಪ್ರಯಾಣಿಸಲಿದೆ. ಈ ಯೋಜನೆಯು ಭಾರತದ ರೈಲ್ವೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಸರಸ್ನೇಹಿಯನ್ನಾಗಿ ಮಾಡುವತ್ತ ಒಂದು ದೊಡ್ಡ ಹೆಜ್ಜೆ.

ವಿಶ್ವದ ಅತ್ಯಂತ ಶಕ್ತಿಶಾಲಿ ರೈಲು: ಹೈಡ್ರೋಜನ್ ಇಂಧನ ಸೆಲ್​ ರೈಲು 1,200 ಎಚ್‌ಪಿ ಸಾಮರ್ಥ್ಯದೊಂದಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್‌ಚಾಲಿತ ರೈಲು ಎಂದು ಇತಿಹಾಸದಲ್ಲಿ ದಾಖಲಾಗಲಿದೆ. ಈ ರೈಲು ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಮೂಲಕ ಚಲಿಸುತ್ತದೆ. ರೈಲು ಚಲನೆಗೆ ಅಗತ್ಯ ಶಕ್ತಿ ಉತ್ಪಾದಿಸುತ್ತದೆ. ಯಾವುದೇ ಮಾಲಿನ್ಯವನ್ನು ಹೊರಸೂಸದೆ ಮತ್ತು ಪರಿಸರಕ್ಕೆ ಶೂನ್ಯ ಹಾನಿ ಮಾಡುತ್ತದೆ. ಇದು ನೀರಿನ ಆವಿಯನ್ನು ಮಾತ್ರ ಬಿಡುಗಡೆ ಮಾಡುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂಬುದು ತಜ್ಞರ ಮಾತು.

ರೈಲಿನ ಎಂಜಿನ್ ಅನ್ನು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ. ಈ ರೈಲು ಯಶಸ್ವಿಯಾದರೆ ಭಾರತ ಪರಿಸರಸ್ನೇಹಿ ಸಾರಿಗೆ ಕ್ಷೇತ್ರದಲ್ಲಿ ಮುಂಚೂಣಿಯಾಗಿ ನಿಲ್ಲುತ್ತದೆ. ಇದು ಹೆಚ್ಚು ಹೈಡ್ರೋಜನ್ ಚಾಲಿತ ರೈಲುಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೈಡ್ರೋಜನ್ ರೈಲು ಆರಂಭದಲ್ಲಿ ಹರಿಯಾಣದ ಜಿಂದ್-ಸೋನೆಪತ್ ಮಾರ್ಗ ಅಂದ್ರೆ ಸುಮಾರು 89 ಕಿ.ಮೀ. ಓಡಲಿದೆ. ಅದು ಬಹಳ ದೂರ ಪ್ರಯಾಣಿಸುತ್ತದೆ. ಒಟ್ಟು 8 ಪ್ರಯಾಣಿಕರ ವಿಭಾಗಗಳಲ್ಲಿ 2,638 ಪ್ರಯಾಣಿಕರನ್ನು ಹೊತ್ತೊಯ್ಯಬಹುದು. ಈ ಡಿಸೈನ್​ ಕಡಿಮೆ ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *