Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕದೊಂದಿಗೆ ಭಾರತಕ್ಕೆ 16.6% ರಫ್ತು ಲಾಭ ಹೆಚ್ಚಳ

Spread the love

ನವದೆಹಲಿ: ಮಾರ್ಚ್ ತಿಂಗಳಲ್ಲಿ ಭಾರತದ ಒಟ್ಟಾರೆ ವ್ಯಾಪಾರ ಕೊರತೆ ಅಥವಾ ಟ್ರೇಡ್ ಡೆಫಿಸಿಟ್ (Trade Deficit) ಮತ್ತಷ್ಟು ಹೆಚ್ಚಾಗಿದೆ. ಅಂದರೆ, ಒಟ್ಟಾರೆ ರಫ್ತಿಗಿಂತ ಆಮದು ಪ್ರಮಾಣ ಮತ್ತಷ್ಟು ಹಿಗ್ಗಿದೆ. ಆದರೆ, ಅಮೆರಿಕದೊಂದಿಗಿನ ವ್ಯಾಪಾರ ವಹಿವಾಟಿನಲ್ಲಿ ಭಾರತದ ಟ್ರೇಡ್ ಸರ್​​ಪ್ಲಸ್ ಹೊಂದಿದ್ದು, ಅದು 2024-25ರಲ್ಲಿ ಮತ್ತಷ್ಟು ಹೆಚ್ಚಿದೆ. ಅಂದರೆ, ಅಮೆರಿಕಕ್ಕೆ ಭಾರತದ ರಫ್ತು ಮತ್ತಷ್ಟು ಹಿಗ್ಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಅಮೆರಿಕದೊಂದಿಗೆ ಭಾರತದ ಟ್ರೇಡ್ ಸರ್​​​ಪ್ಲಸ್ ಶೇ. 16.6ರಷ್ಟು ಹೆಚ್ಚಾಗಿದೆ.

2024-25ರಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಗಣನೀಯವಾಗಿ ಹೆಚ್ಚಾಗಿದೆ. ಹಾಗೆಯೇ, ಆಮದು ಕೂಡ ಹೆಚ್ಚಾಗಿದೆ. ಎರಡು ದೇಶಗಳ ನಡುವಿನ ಒಟ್ಟು ವ್ಯಾಪಾರ ಹೆಚ್ಚಾಗಿದೆ.

2024-25ರಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸರಕು ವ್ಯಾಪಾರದ ವಿವರ

  • ಸರಕು ರಫ್ತು: 77.52ನಿಂದ 86.51 ಬಿಲಿಯನ್ ಡಾಲರ್​​ಗೆ ಹೆಚ್ಚಳ (ಶೇ. 11.6)
  • ಸರಕು ಆಮದು: 42.20ನಿಂದ 45.33 ಬಿಲಿಯನ್ ಡಾಲರ್​​ಗೆ ಹೆಚ್ಚಳ (ಶೇ. 7.42)

ಇಲ್ಲಿ ಸರ್ವಿಸ್ ಸೆಕ್ಟರ್​​ನ ವಹಿವಾಟನ್ನು ಗಣಿಸಲಾಗಿಲ್ಲ. ಕೇವಲ ಸರಕು ವ್ಯಾಪಾರದ ಅಂಕಿ ಅಂಶ ಇದೆ. ಭಾರತದ ಸರ್ವಿಸ್ ಸೆಕ್ಟರ್​ಗೆ ಅಮೆರಿಕ ದೊಡ್ಡ ಮಾರುಕಟ್ಟೆಯಾಗಿದೆ. ಅದನ್ನು ಸೇರಿಸಿದರೆ ಅಮೆರಿಕದ ಜೊತೆ ಭಾರತದ ಟ್ರೇಡ್ ಸರ್​​ಪ್ಲಸ್ ಮತ್ತಷ್ಟು ಬೃಹತ್ತಾಗುತ್ತದೆ.

ಭಾರತದಿಂದ ಅಮೆರಿಕಕ್ಕೆ ರಫ್ತಾದ ಪ್ರಮುಖ ಸರಕುಗಳು

ಎಲೆಕ್ಟ್ರಾನಿಕ್ ವಸ್ತುಗಳು, ಜವಳಿ, ಔಷಧ, ಎಂಜಿನಿಯರಿಂಗ್ ಉತ್ಪನ್ನ, ಆಭರಣ, ಪೆಟ್ರೋಲಿಯಂ ಉತ್ಪನ್ನ, ಕೃಷಿ ಉತ್ಪನ್ನಗಳು ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಪ್ರಮುಖ ಸರಕುಗಳೆನಿಸಿವೆ.

ಭಾರತದ ಒಟ್ಟಾರೆ ಸರಕು ವ್ಯಾಪಾರ ಕೊರತೆಯಲ್ಲಿ ಹೆಚ್ಚಳ

ಕಳೆದ ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್​​ನಲ್ಲಿ ಭಾರತದ ಒಟ್ಟಾರೆ ವ್ಯಾಪಾರ ಕೊರತೆ 21.54 ಬಿಲಿಯನ್ ಡಾಲರ್​ನಷ್ಟಿದೆ. ಫೆಬ್ರುವರಿಯಲ್ಲಿ 14.05 ಬಿಲಿಯನ್ ಡಾಲರ್​​ನಷ್ಟು ಮಾತ್ರವೇ ಡೆಫಿಸಿಟ್ ಇತ್ತು. ಈಗ ಅದು ಗಣನೀಯವಾಗಿ ಹೆಚ್ಚಳವಾಗಿದೆ.

ಮಾರ್ಚ್ ತಿಂಗಳಲ್ಲಿ ಭಾರತದಿಂದ ಸರಕು ರಫ್ತು 41.97 ಬಿಲಿಯನ್ ಡಾಲರ್ ಇದೆ. ಆಮದು ಪ್ರಮಾಣ 63.51 ಬಿಲಿಯನ್ ಡಾಲರ್ ಇದೆ. ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್​​ನಲ್ಲಿ ಆಮದು ಮತ್ತು ರಫ್ತು ಎರಡೂ ಕೂಡ ಹೆಚ್ಚಳ ಆಗಿದೆ. ರಫ್ತಿಗಿಂತ ಆಮದು ಬಹಳ ಹೆಚ್ಚಿದ್ದರಿಂದ ಟ್ರೇಡ್ ಡೆಫಿಸಿಟ್ ಹೆಚ್ಚಾಗಿದೆ.

ಇಡೀ ಹಣಕಾಸು ವರ್ಷವನ್ನು ಪರಿಗಣಿಸಿದಾಗ, ಭಾರತದಿಂದ ಸರಕು ರಫ್ತು 437.42 ಬಿಲಿಯನ್ ಡಾಲರ್​​ನಷ್ಟಿದೆ. ಸರಕು ಆಮದು 720.24 ಬಿಲಿಯನ್ ಡಾಲರ್ ಇದೆ. ಇಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ರಫ್ತಿನಲ್ಲಿ ನಗಣ್ಯ ಪ್ರಮಾಣದಲ್ಲಿ ಏರಿಕೆ ಆಗಿದೆ. ಆದರೆ, 2023-24ರಲ್ಲಿ 678.21 ಬಿಲಿಯನ್ ಡಾಲರ್ ಇದ್ದ ಸರಕು ಆಮದು, 2024-25ರಲ್ಲಿ 720.24 ಬಿಲಿಯನ್ ಡಾಲರ್​​ಗೆ ಏರಿದೆ.

2024-25ರಲ್ಲಿ ಭಾರತದ ಟ್ರೇಡಿಂಗ್ ಮಾಹಿತಿ

ಒಟ್ಟು ರಫ್ತು: 770.18 ಬಿಲಿಯನ್ ಡಾಲರ್

(ಸರಕು, 437.06 ಬಿಲಿಯನ್ ಡಾಲರ್; ಸರ್ವಿಸ್, 333.12 ಬಿಲಿಯನ್ ಡಾಲರ್)

ಒಟ್ಟು ಆಮದು: 892.18 ಬಿಲಿಯನ್ ಡಾಲರ್

(ಸರಕು, 677.24 ಬಿಲಿಯನ್ ಡಾಲರ್; ಸರ್ವಿಸ್, 214.94 ಬಿಲಿಯನ್ ಡಾಲರ್)

ಒಟ್ಟಾರೆ ಟ್ರೇಡ್ ಡೆಫಿಸಿಟ್ 122 ಬಿಲಿಯನ್ ಡಾಲರ್


Spread the love
Share:

administrator

Leave a Reply

Your email address will not be published. Required fields are marked *