Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತ ಎಲೆಕ್ಟ್ರಾನಿಕ್ಸ್ ಉದ್ಯಮ ₹12 ಲಕ್ಷ ಕೋಟಿ ಮೌಲ್ಯ : 11 ವರ್ಷದಲ್ಲಿ ಆರು ಪಟ್ಟು ಬೆಳವಣಿಗೆ

Spread the love

ಬೆಂಗಳೂರು: ಭಾರತದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮದ ಮೌಲ್ಯ 12 ಲಕ್ಷ ಕೋಟಿ ರೂ ಮುಟ್ಟಿದೆ. ಅಮೆರಿಕಕ್ಕೆ ಸ್ಮಾರ್ಟ್​ಫೋನ್ ಸರಬರಾಜುದಾರರಲ್ಲಿ ಭಾರತ ಮುಂಚೂಣಿಗೆ ಬಂದಿದೆ ಎಂದು ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಕಳೆದ 11 ವರ್ಷದಲ್ಲಿ ಆರು ಪಟ್ಟು ಬೆಳೆದಿದೆ. ಎಲೆಕ್ಟ್ರಾನಿಕ್ಸ್ ಸರಕುಗಳ ರಫ್ತು ಎಂಟು ಪಟ್ಟು ಹೆಚ್ಚಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

‘ನಮ್ಮ ಎಲೆಕ್ಟ್ರಾನಿಕ್ಸ್ ತಯಾರಿಕೆಯು ಕಳೆದ 11 ವರ್ಷದಲ್ಲಿ ಆರು ಪಟ್ಟು ಬೆಳೆದಿದೆ. ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮ 12 ಲಕ್ಷ ಕೋಟಿ ರೂ ತಲುಪಿದೆ. ಎಲೆಕ್ಟ್ರಾನಿಕ್ಸ್ ರಫ್ತು ಎಂಟು ಪಟ್ಟು ಬೆಳೆದಿದೆ. ಇವತ್ತು ಇದರ ರಫ್ತು 3 ಲಕ್ಷ ಕೋಟಿ ರೂನಷ್ಟಿದೆ. ಭಾರತವು ಈ ವಿಶ್ವದಲ್ಲಿ ಎರಡನೇ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ತಯಾರಕ ದೇಶವೆನಿಸಿದೆ’ ಎಂದು ಎ ವೈಷ್ಣವ್ ವಿವರಿಸಿದ್ದಾರೆ.

2014ರ ನಂತರ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮದ ರಕ್ಕಸ ಬೆಳವಣಿಗೆ

2014ರಲ್ಲಿ ಭಾರತದಲ್ಲಿ ಎರಡೇ ಎರಡು ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳಿದ್ದುವು. ಇವತ್ತು 300ಕ್ಕೂ ಹೆಚ್ಚು ಘಟಕಗಳಿವೆ. 2014-15ರಲ್ಲಿ ಭಾರತದಲ್ಲಿ ಮಾರಾಟವಾಗುತ್ತಿದ್ದ ಮೊಬೈಲ್ ಫೋನ್​ಗಳಲ್ಲಿ ಶೇ. 26ರಷ್ಟು ಮಾತ್ರವೇ ದೇಶೀಯವಾಗಿ ನಿರ್ಮಾಣವಾದಂಥವಾಗಿದ್ದುವು. ಉಳಿದವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇವತ್ತು ಭಾರತದಲ್ಲಿ ಮಾರಾಟವಾಗುತ್ತಿರುವ ಶೇ. 99.2ರಷ್ಟು ಫೋನ್​ಗಳು ಮೇಡ್ ಇನ್ ಇಂಡಿಯಾದ್ದಾಗಿವೆ.

ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಪುಷ್ಟಿ ಕೊಟ್ಟ ಪಿಎಲ್​ಐ ಸ್ಕೀಮ್

ಭಾರತ ಜಾರಿಗೆ ತಂದ ಪಿಎಲ್​ಐ ಸ್ಕೀಮ್, ಆರಂಭದಲ್ಲಿ ಮೊಬೈಲ್ ಫೋನ್ ತಯಾರಿಕೆಗೆ ಒತ್ತುಕೊಟ್ಟಿತ್ತು. ಫೋನ್ ಮ್ಯಾನುಫ್ಯಾಕ್ಚರಿಂಗ್​ಗೆ ಇರುವ ಪಿಎಲ್​ಐ ಸ್ಕೀಮ್​ನಿಂದ ಬರೋಬ್ಬರಿ 12,390 ಕೋಟಿ ರೂ ಹೂಡಿಕೆ ಹರಿದುಬಂದಿದೆ. ಕೇಂದ್ರ ಸಚಿವ ಜಿತಿನ್ ಪ್ರಸಾದ ಅವರು ಇತ್ತೀಚೆಗೆ ಲೋಕಸಭೆಗೆ ನೀಡಿದ ಮಾಹಿತಿ ಪ್ರಕಾರ ಮೊಬೈಲ್ ತಯಾರಿಕೆಗೆಂದು ರೂಪಿಸಲಾದ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಎಂಟೂವರೆ ಲಕ್ಷ ಕೋಟಿ ರೂ ಸಮೀಪದಷ್ಟು ಮೌಲ್ಯದ ಉತ್ಪಾದನೆ ಆಗಿದೆ. 1,30,330 ನೇರ ಉದ್ಯೋಗಗಳು ಸೃಷ್ಟಿಯಾಗಿವೆ.

ಐಟಿ ಹಾರ್ಡ್​ವೇರ್​ಗಾಗಿ ರೂಪಿಸಲಾದ ಪಿಎಲ್​ಐ ಸ್ಕೀಮ್​ನಲ್ಲಿ ಈವರೆಗೆ 717 ಕೋಟಿ ರೂ ಹೂಡಿಕೆ ಬಂದಿದೆ. ಈ ಯೋಜನೆ ಅಡಿ 12,195 ಕೋಟಿ ರೂ ಮೌಲ್ಯದ ಸರಕುಗಳ ಉತ್ಪಾದನೆ ಆಗಿದೆ. 5,056 ನೇರ ಉದ್ಯೋಗಗಳು ಸೃಷ್ಟಿಯಾಗಿವೆ.


Spread the love
Share:

administrator

Leave a Reply

Your email address will not be published. Required fields are marked *