Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ವೇಗ: 4 ವರ್ಷದಲ್ಲಿ 7ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿತ

Spread the love

ನವದೆಹಲಿ: ಭಾರತದ ಎಲೆಕ್ಟ್ರಾನಿಕ್ಸ್ ರಫ್ತು (electronics exports) ಬಹಳ ವೇಗದಲ್ಲಿ ಹೆಚ್ಚುತ್ತಿದೆ. ನಾಲ್ಕು ವರ್ಷಗಳ ಹಿಂದೆ ಅತಿಹೆಚ್ಚು ರಫ್ತಾದ ವಿಭಾಗದಲ್ಲಿ ಏಳನೇ ಸ್ಥಾನದಲ್ಲಿದ್ದ ಎಲೆಕ್ಟ್ರಾನಿಕ್ಸ್ ಸೆಕ್ಟರ್ ಇದೀಗ ಮೂರನೇ ಸ್ಥಾನಕ್ಕೆ ಏರಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಈ ಹಣಕಾಸು ವರ್ಷದೊಳಗೆ ಎರಡನೇ ಸ್ಥಾನಕ್ಕೆ ಏರುವ ಸಾಧ್ಯತೆ ಕಾಣುತ್ತಿದೆ.

ಪೆಟ್ರೋಲಿಯಂ ಸೆಕ್ಟರ್ ಭಾರತದ ಎರಡನೇ ಅತಿಹೆಚ್ಚು ರಫ್ತು ಕೊಡುಗೆ ನೀಡುತ್ತಾ ಬಂದಿದೆ. ಮೊದಲನೆಯ ಸ್ಥಾನ ಎಂಜಿನಿಯರಿಂಗ್ ಉಪಕರಣಗಳ ರಫ್ತು. ಭಾರತ ಬಹಳ ಹೆಚ್ಚು ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆಯಾದರೂ ಅದನ್ನು ಸಂಸ್ಕರಿಸಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳಾಗಿ ಪರಿವರ್ತಿಸಿ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುತ್ತದೆ. ಇದೀಗ ಅಮೆರಿಕದ ಒತ್ತಡದಿಂದಾಗಿ ರಷ್ಯನ್ ತೈಲ ಆಮದನ್ನು ಭಾರತ ಕಡಿಮೆ ಮಾಡುತ್ತಿದೆ. ಹೀಗಾಗಿ, ಭಾರತದ ಪೆಟ್ರೋಲಿಯಂ ರಫ್ತು ಕೂಡ ತುಸು ಕಡಿಮೆ ಆಗಬಹುದು ಎನ್ನಲಾಗುತ್ತಿದೆ.

ಇದೇ ವೇಳೆ, ಐಫೋನ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ವಸ್ತುಗಳ ರಫ್ತು ಕೂಡ ಗಣನೀಯವಾಗಿ ಹೆಚ್ಚುತ್ತಿದೆ. 2025-26ರ ಹಣಕಾಸು ವರ್ಷ ಮುಗಿಯುವ ವೇಳೆಗೆ ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಪೆಟ್ರೋಲಿಯಂ ಅನ್ನೂ ಮೀರಿಸುವ ಅಂದಾಜಿದೆ.

2021-22ರಲ್ಲಿ ಹೀಗಿತ್ತು ಭಾರತದ ವಿವಿಧ ಸೆಕ್ಟರ್​ಗಳ ರಫ್ತು ಶ್ರೇಯಾಂಕ

  1. ಎಂಜಿನಿಯರಿಂಗ್ ಉಪಕರಣಗಳು
  2. ಪೆಟ್ರೋಲಿಯಂ ಉತ್ಪನ್ನಗಳು
  3. ಆಭರಣಗಳು
  4. ರಾಸಾಯನಿಕ ಉತ್ಪನ್ನಗಳು
  5. ಔಷಧಗಳು
  6. ಸಿದ್ಧ ಉಡುಪುಗಳು
  7. ಎಲೆಕ್ಟ್ರಾನಿಕ್ಸ್ ವಸ್ತುಗಳು

2025-26ರಲ್ಲಿ ಟಾಪ್-3 ರಫ್ತು

  1. ಎಂಜಿನಿಯರಿಂಗ್ ಉತ್ಪನ್ನಗಳು
  2. ಪೆಟ್ರೋಲಿಯಂ ಉತ್ಪನ್ನಗಳು
  3. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು

ಎಂಜಿನಿಯರಿಂಗ್ ಉತ್ಪನ್ನಗಳ ರಫ್ತು ಈ ವರ್ಷ (2025-26) ಶೇ. 5.35ರಷ್ಟು ಹೆಚ್ಚಳಗೊಂಡು 59.3 ಬಿಲಿಯನ್ ಡಾಲರ್ ಮೊತ್ತ ಮುಟ್ಟಿದೆ. ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ. 16.4ರಷ್ಟು ಕಡಿಮೆಗೊಂಡಿವೆ. ಇನ್ನು ಎಲೆಕ್ಟ್ರಾನಿಕ್ಸ್ ರಫ್ತು ಮೂರು ವರ್ಷಗಳ ಹಿಂದೆ (2022-23) 23.5 ಬಿಲಿಯನ್ ಡಾಲರ್ ಇದ್ದದ್ದು 2024-25ರಲ್ಲಿ 38.5 ಬಿಲಿಯನ್ ಡಾಲರ್​ಗೆ ಏರಿದೆ. ಈ ಹಣಕಾಸು ವರ್ಷದಲ್ಲಿ ಇದು 2023ರದಕ್ಕಿಂತ ಎರಡು ಪಟ್ಟು ಹೆಚ್ಚುವ ನಿರೀಕ್ಷೆ ಇದೆ. ಇದು ಆದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಮೀರಿಸಿ ಎರಡನೇ ಸ್ಥಾನ ಅಲಂಕರಿಸಲಿದೆ ಎಲೆಕ್ಟ್ರಾನಿಕ್ಸ್ ರಫ್ತು.


Spread the love
Share:

administrator

Leave a Reply

Your email address will not be published. Required fields are marked *