Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುಎಇಯಲ್ಲಿ ಭಾರತೀಯ ಮಹಿಳೆಗೆ ಗಲ್ಲುಶಿಕ್ಷೆ – ಶಿಶು ಹತ್ಯೆ ಆರೋಪ

Spread the love

ನವದೆಹಲಿ: ಉತ್ತರ ಪ್ರದೇಶದ 33 ವರ್ಷದ ಮಹಿಳಾ ಕೇರ್‌ಟೇಕರ್ ಶಹಜಾದಿ ಖಾನ್ ಅವರನ್ನು ಫೆಬ್ರವರಿ 15ರಂದು ಯುಎಇಯಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಇಂದು (ಮಾರ್ಚ್ 3) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಅವರು ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮನೆಯ ಶಿಶುವಿನ ಕೊಲೆ ಆರೋಪದ ಮೇಲೆ ಆಕೆಗೆ ಮರಣದಂಡನೆ ವಿಧಿಸಲಾಗಿತ್ತು. ಗಲ್ಲಿಗೇರಿದ ಆಕೆಯ ಅಂತ್ಯಕ್ರಿಯೆ ಮಾರ್ಚ್ 5ರಂದು ನಡೆಯಲಿದೆ.
ಶಹಜಾದಿ ಖಾನ್ ಡಿಸೆಂಬರ್ 19, 2022ರಂದು ಪ್ರವಾಸಿ ವೀಸಾದಲ್ಲಿ ಅಬುಧಾಬಿಗೆ ಪ್ರಯಾಣಿಸಿದ್ದರು.ಅಲ್ಲಿ ಆಕೆಯನ್ನು ಮಗುವಿನ ಕೇರ್‌ಟೇಕರ್ ಆಗಿ ನೇಮಿಸಲಾಗಿತ್ತು. ಫೆಬ್ರವರಿ 2023ರಲ್ಲಿ ಆಕೆಯನ್ನು ನೇಮಿಸಿಕೊಂಡ ದಂಪತಿಗಳು ತಮ್ಮ ಮಗುವಿನ ಸಾವಿಗೆ ಆಕೆಯೇ ಕಾರಣ ಎಂದು ಆರೋಪಿಸಿದ್ದರು. ಇದಾದ ನಂತರ ಆಕೆಯನ್ನು ಬಂಧಿಸಲಾಗಿತ್ತು.
ಜುಲೈ 31, 2023ರಂದು ಆಕೆಗೆ ಮರಣದಂಡನೆ ವಿಧಿಸಲಾಯಿತು. 2024ರ ಫೆಬ್ರವರಿ 28ರಂದು ನ್ಯಾಯಾಲಯವು ಈ ತೀರ್ಪನ್ನು ಎತ್ತಿಹಿಡಿಯಿತು. ಆಕೆಯ ಮರಣದಂಡನೆಗೆ ಮುಂಚಿತವಾಗಿ ಆಕೆಯನ್ನು ಅಲ್ ವಾಥ್ಬಾ ಕೇಂದ್ರ ಜೈಲಿನಲ್ಲಿ ಇರಿಸಲಾಗಿತ್ತು. ಆಕೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರೂ ಅದು ಸ್ವೀಕೃತವಾಗಲಿಲ್ಲ.

ವರ್ಷಗಟ್ಟಲೆ ಲಸಿಕೆ ನೀಡಿ ಆಕೆ ಮಗುವನ್ನು ಕೊಂದಿದ್ದಾಳೆ ಎಂಬ ಆರೋಪದಲ್ಲಿ ಆಕೆಗೆ ಮರಣದಂಡನೆ ವಿಧಿಸಲಾಗಿತ್ತು. ಈಗಾಗಲೇ ಗಲ್ಲುಶಿಕ್ಷೆಗೆ ಒಳಗಾಗಿರುವ ಆಕೆಯ ಅಂತ್ಯಕ್ರಿಯೆ ಮಾರ್ಚ್ 5ರಂದು ನಡೆಯಲಿದೆ. ಆಕೆಯ ಅಂತ್ಯಕ್ರಿಯೆಗಾಗಿ ಅಬುಧಾಬಿಗೆ ಪ್ರಯಾಣದ ವ್ಯವಸ್ಥೆ ಮಾಡಲು ಭಾರತೀಯ ರಾಯಭಾರ ಕಚೇರಿ ಆಕೆಯ ಕುಟುಂಬಕ್ಕೆ ಸಹಾಯ ಮಾಡುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *