Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತೀಯ ರೈಲ್ವೆ: ದಾಖಲೆ ಮಟ್ಟದ ಕೋಚ್ ನಿರ್ಮಾಣ

Spread the love

ಭಾರತೀಯ ರೈಲ್ವೆ 2024-25ರಲ್ಲಿ 7,134 ಕೋಚ್‌ಗಳನ್ನು ನಿರ್ಮಿಸಿ ದಾಖಲೆ ಸಾಧಿಸಿದೆ, ಇದು ಹಿಂದಿನ ವರ್ಷಕ್ಕಿಂತ 9% ಹೆಚ್ಚಾಗಿದೆ. ಪ್ರಯಾಣಿಕರ ಬೇಡಿಕೆ ಪೂರೈಸಲು ಮತ್ತು ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸಲು ಇದು ಮಹತ್ವದ ಹೆಜ್ಜೆಯಾಗಿದೆ.

ಭಾರತೀಯ ರೈಲ್ವೆ 2024-25ನೇ ಹಣಕಾಸು ವರ್ಷದಲ್ಲಿ 7,134 ಕೋಚ್‌ಗಳನ್ನು ನಿರ್ಮಿಸುವ ಮೂಲಕ ಒಂದು ದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ. ಹಿಂದಿನ ವರ್ಷ 6,541 ಉತ್ಪಾದನೆ ಮಾಡಿತ್ತು , ಈ ಮೂಲಕ ಈ ಹಣಕಾಸು ವರ್ಷದಲ್ಲಿ 9% ಏರಿಕೆ ಕಂಡಿದೆ. ಇದರಲ್ಲಿ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸುವ 4,601 ನಾನ್-ಎಸಿ ಕೋಚ್‌ಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸಲು ಭಾರತವು ಹೆಚ್ಚಿನ ಗಮನ ನೀಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಭಾರತೀಯ ರೈಲ್ವೆಯು ದೇಶದಲ್ಲಿ ಮೂರು ಕೋಚ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಚೆನ್ನೈ. ಪಂಜಾಬ್ ನಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (RCF) ಕಪುರ್ತಲಾ, ಮತ್ತು ಉತ್ತರ ಪ್ರದೇಶದಲ್ಲಿ ರಾಯ್ಬರೇಲಿಯಲ್ಲಿರುವ ಮಾಡರ್ನ್ ಕೋಚ್ ಫ್ಯಾಕ್ಟರಿ (MCF). ಅಧಿಕೃತ ಮಾಹಿತಿಯ ಪ್ರಕಾರ, 2024-25ನೇ ಹಣಕಾಸು ವರ್ಷದಲ್ಲಿ ಚೆನ್ನೈನಲ್ಲಿರುವ ಭಾರತೀಯ ರೈಲ್ವೆಯ ಪ್ರಮುಖ ಪ್ರಯಾಣಿಕ ಕೋಚ್ ಉತ್ಪಾದನಾ ಘಟಕವಾದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ತನ್ನ ಹಿಂದಿನ ಉತ್ಪಾದನಾ ದಾಖಲೆಗಳನ್ನು ಮೀರಿಸಿದೆ. ಕಳೆದ ವರ್ಷ 2,829 ಕೋಚ್‌ಗಳನ್ನು ತಯಾರಿಸಿತ್ತು. ಈ ಬಾರಿ 3,007 ಕೋಚ್‌ಗಳನ್ನು ನಿರ್ಮಿಸಿದೆ.


Spread the love
Share:

administrator

Leave a Reply

Your email address will not be published. Required fields are marked *