Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತೀಯ ಮೂಲದ ನರ್ಸ್‌ ಮೇಲೆ ಹಲ್ಲೆ – ಆರೋಪಿ ಬಂಧನ

Spread the love

ಫ್ಲೋರಿಡಾ: ಆಸ್ಪತ್ರೆಯಲ್ಲಿ ಭಾರತದ ಮೂಲದ ನರ್ಸ್​ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಭಾರತದ ಮೂಲದ 67 ವರ್ಷದ ನರ್ಸ್​ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಭಾರತೀಯರು ಕೆಟ್ಟವರು ಎಂದು ಆ ದಾಳಿಕೋರ ಹೇಳಿದ್ದಾನೆ.
ನರ್ಸ್​ಗೆ ಮುಖದಲ್ಲಿ ಮುರಿತಗಳು ಉಂಟಾಗಿವೆ. ಈ ಘಟನೆ ಫೆಬ್ರವರಿ 18 ಫ್ಲೋರಿಡಾದ ಫಾರ್ಮ್ ಬಿ ಬಳಿಯ ಪ್ಯಾಮ್ ವೆಸ್ಟ್ ಆಸ್ಪತ್ರೆಯಲ್ಲಿ ನಡೆದಿದೆ.

ನರ್ಸ್ ಮೇಲಿನ ದಾಳಿಯ ನಂತರ, ಆರೋಗ್ಯ ಕಾರ್ಯಕರ್ತರು ಭದ್ರತೆಗಾಗಿ ಒತ್ತಾಯಿಸಿದ್ದಾರೆ. ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಭಾರತೀಯ ಮೂಲದ ನರ್ಸ್ ಹೆಸರು ಲೀಲಮ್ಮ ಲಾಲ್. ಲೀಲಮ್ಮ ಲಾಲ್ ಮೇಲೆ 33 ವರ್ಷದ ಸ್ಟೀಫನ್ ಎಂಬ ವ್ಯಕ್ತಿ ಹಲ್ಲೆ ನಡೆಸಿದ್ದಾನೆ.
ಆ ವ್ಯಕ್ತಿ ನರ್ಸ್ ಮೇಲೆ ಎಷ್ಟು ಕೆಟ್ಟದಾಗಿ ಹಲ್ಲೆ ನಡೆಸಿದ್ದಳೆಂದರೆ ಆಕೆಯ ಮುಖದ ಮೇಲೆ ಹಲವಾರು ಮುರಿತಗಳುಂಟಾಗಿದ್ದವು. ಆಕೆಯ ಕಾಲರ್ಬೋನ್ ಮುರಿದಿತ್ತು ಮತ್ತು ಆಕೆಯ ತಲೆಯಲ್ಲಿ ರಕ್ತಸ್ರಾವವಾಗಲು ಪ್ರಾರಂಭಿಸಿತು. ಸ್ಟೀಫನ್ ಸ್ಕ್ಯಾಂಟಲ್‌ಬರಿಯ ದಾಳಿ ಒಂದರಿಂದ ಎರಡು ನಿಮಿಷಗಳ ಕಾಲ ನಡೆದಿದ್ದು, ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೂಡಲೇ ದಾಳಿಕೋರನನ್ನು ಬಂಧಿಸಲಾಗಿದ್ದು, ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಆಘಾತಕಾರಿ ವಿಷಯವೆಂದರೆ ಲೀಲಮ್ಮ ಲಾಲ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಸ್ವತಃ ರೋಗಿಯಾಗಿದ್ದು, ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಲಾಗುತ್ತಿದೆ. ಆತನನ್ನು ಬಂಧಿಸಿದಾಗ ಶರ್ಟ್ ಮತ್ತು ಚಪ್ಪಲಿ ಧರಿಸಿರಲಿಲ್ಲ.

ಭಾರತೀಯರು ಕೆಟ್ಟವರು ಮತ್ತು ನಾನು ಭಾರತೀಯ ವೈದ್ಯರನ್ನು ಕೊಂದೆ ಎಂದು ಆರೋಪಿ ಹೇಳಿದ್ದಾನೆ. ಯಗೊಂಡ ನರ್ಸ್‌ನ ಮಗಳು ತನ್ನ ತಾಯಿಯ ಗಾಯಗಳ ತೀವ್ರತೆಯ ಬಗ್ಗೆ ವಿವರಿಸಿದ್ದಾಳೆ.

ಈ ಘಟನೆಯು ವೈದ್ಯಕೀಯ ವೃತ್ತಿಪರರ ಸುರಕ್ಷತೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ, ಮೂರು ದಿನಗಳಲ್ಲಿ 10,000 ಕ್ಕೂ ಹೆಚ್ಚು ಜನರು ಬಿಗಿ ಭದ್ರತಾ ಕ್ರಮಗಳು ಮತ್ತು ಕಠಿಣ ಶಿಕ್ಷೆಯನ್ನು ಕೋರುವ ಅರ್ಜಿಗೆ ಸಹಿ ಹಾಕಿದ್ದಾರೆ. ಏತನ್ಮಧ್ಯೆ, ಪಾಮ್ ಬೀಚ್ ಕೌಂಟಿ ಶೆರಿಫ್ ಅವರು ಫೆಬ್ರವರಿ 18 ರಂದು ಮಧ್ಯಾಹ್ನ 1.20 ರ ಸುಮಾರಿಗೆ ಘಟನಾ ಸ್ಥಳಕ್ಕೆ ಆಗಮಿಸಿದರು ಮತ್ತು ಅಲ್ಲಿ ನರ್ಸ್ ಗಂಭೀರವಾಗಿ ಗಾಯಗೊಂಡಿರುವುದನ್ನು ಕಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *