ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಆಭರಣದಂಗಡಿಗೆ ಕನ್ನ: ಕೇವಲ 1 ನಿಮಿಷದಲ್ಲಿ 15 ಕೋಟಿ ಲೂಟಿ!

ಕ್ಯಾಲಿಫೋರ್ನಿಯಾ: ನೋಡ ನೋಡುತ್ತಿದ್ದಂತೆ 8 ರಿಂದ 10 ಮಂದಿ ದರೋಡೆಕೋರರು ಆಭರಣದಂಗಡಿಗೆ ನುಗ್ಗಿ 15 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ. ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಭಾರತೀಯ ಒಡೆತನದ ಕುಮಾರ್ ಜ್ಯುವೆಲ್ಲರ್ಸ್‌ನಿಂದ ಸುಮಾರು ಒಂದು ನಿಮಿಷದಲ್ಲಿ 1.7 ಮಿಲಿಯನ್ ಡಾಲರ್‌ಗಳ ಆಭರಣವನ್ನು ದುಷ್ಕರ್ಮಿಗಳು ಕದಿಯುವ ದೃಶ್ಯಗಳು ಇಲ್ಲಿವೆ. ಈ ಘಟನೆ 2025ರ ಜೂನ್ 18ರಂದು ನಡೆದಿದೆ. ಆಭರಣದಂಗಡಿಯ ಶೇ.75ರಷ್ಟು ಆಭರಣಗಳನ್ನು ಕಳವು ಮಾಡಲಾಗಿತ್ತು.
