Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇಂಡಿಯನ್ ಐಡಲ್ ವಿಜೇತ ಪವನ್‌ದೀಪ್ ರಾಜನ್ ಗೆ ಭೀಕರ ಅಪಘಾತ

Spread the love

ಉತ್ತರ ಪ್ರದೇಶ: ಜನಪ್ರಿಯ ರಿಯಾಲಿಟಿ ಶೋನ ವಿಜೇತರಾಗಿ ಗುರುತಿಸಿಕೊಂಡಿರುವ ಗಾಯಕ ಪವನ್‌ದೀಪ್ ರಾಜನ್ ಇಂಡಿಯನ್ ಐಡಲ್ ಸೀಸನ್ 12 ವಿಜೇತ ಗಾಯಕ ಪವನ್‌ದೀಪ್ ರಾಜನ್ ಅವರು ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ (ಮೇ.5) ಮುಂಜಾನೆ 3ರ ಅಸುಪಾಸಿನಲ್ಲಿಉತ್ತರ ಪ್ರದೇಶದ ಅಮ್ರೋಹಾದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಪವನ್‌ದೀಪ್ ಅವರ ಎಂಜಿ ಹೆಕ್ಟರ್ ಕಾರು ನಿಲ್ಲಿಸಿದ್ದ ಐಷರ್ ಕ್ಯಾಂಟರ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತವಾದ ಬಳಿಕ ಮೊದಲು ಗಾಯಾಳು ಪವನ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಾಯ ಗಂಭೀರವಾದ ಕಾರಣ ನೋಯ್ಡಾದ ಮತ್ತೊಂದು ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.

ಅಪಘಾತದಲ್ಲಿ ಪವನ್‌ದೀಪ್ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪವನ್‌ದೀಪ್ ಉತ್ತರಾಖಂಡದ ಚಂಪಾವತ್‌ನಿಂದ ದೆಹಲಿಗೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಪವನ್‌ದೀಪ್ ರಾಜನ್ ಇಂಡಿಯನ್ ಐಡಲ್ 12 ಗೆದ್ದು, 25 ಲಕ್ಷ ರೂ. ಚೆಕ್ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಬಹುಮಾನವಾಗಿ ಪಡೆದುಕೊಂಡಿದ್ದರು.


Spread the love
Share:

administrator

Leave a Reply

Your email address will not be published. Required fields are marked *