Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಹೈನೋದ್ಯಮವೇ ಅಡ್ಡಿ: ರೈತರ ಹಿತಾಸಕ್ತಿ ಕಾಪಾಡಲು ಭಾರತದ ಹೋರಾಟ!

Spread the love

Raw milk: the ultimate dairy product is back – but is it safe? | Milk | The  Guardian

ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದ (India USA trade deal) ಕುದುರಿಸಲು ಬಹಳ ಮಾತುಕತೆಗಳು ನಡೆಯುತ್ತಿವೆ. ಟ್ರಂಪ್ ಇತ್ತ ‘ಡೆಡ್ಲೈನ್’ನೊಳಗೆ ಡೀಲ್ ಮುಗಿಸಲು ಭಾರತ ಅವ್ಯಾಹತವಾಗಿ ಪ್ರಯತ್ನಿಸುತ್ತಿದೆ. ಮಾತುಕತೆಯು ಕೊನೆಯ ಹಂತಕ್ಕೆ ಬಂದಿವೆಯಾದರೂ ಒಂದೇ ಒಂದು ಮುಖ್ಯ ತಡೆ ಉಳಿದುಕೊಂಡಿದೆ.

ಅದು ಹೈನೋದ್ಯಮದ್ದು. ತನ್ನ ಡೈರಿ ಸೆಕ್ಟರ್ ಅನ್ನು ರಕ್ಷಿಸಲು ಕಟಿಬದ್ಧವಾಗಿದೆ. ಅಮೆರಿಕದ ಡೈರಿ ಉತ್ಪನ್ನಗಳು (US dairy products) ಭಾರತಕ್ಕೆ ಬಂದರೆ ಸ್ಥಳೀಯ ಹೈನೋದ್ಯಮಕ್ಕೆ ಅಗುವ ಹಾನಿ ಏನು, ಎಷ್ಟು?

ಅಮೆರಿಕದಲ್ಲಿ ಹೈನೋದ್ಯಮ ಹೇಗಿದೆ?

ಪ್ರಪಂಚದಲ್ಲಿ ಅತಿಹೆಚ್ಚು ಹಾಲು ಉತ್ಪಾದಿಸುವ ದೇಶ ಭಾರತ. ಆದರೆ, ಅಮೆರಿಕದಲ್ಲೂ ಸಾಕಷ್ಟು ಹಾಲು ಉತ್ಪಾದನೆ ಆಗುತ್ತದೆ. ಪ್ರಮುಖ ವ್ಯತ್ಯಾಸ ಎಂದರೆ, ಭಾರತದಲ್ಲಿ ಉತ್ಪಾದನೆಯಾಗುವ ಹಾಲು ಸ್ಥಳೀಯ ಬೇಡಿಕೆಯನ್ನು ಪೂರೈಸಲೇ ಸಾಕಾಗುತ್ತದೆ. ರಫ್ತು ಮಾಡುವುದು ಬಹಳ ಅಲ್ಪ.

ಆದರೆ, ಅಮೆರಿಕದಲ್ಲಿ ಆಂತರಿಕ ಬಳಕೆಗೆ ಅಗತ್ಯವಾಗಿರುವುದಕ್ಕಿಂತ ಹಲವು ಪಟ್ಟು ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಅಲ್ಲಿ ಫ್ಯಾಕ್ಟರಿ ಶೈಲಿಯಲ್ಲಿ ಹಾಲಿನ ಉತ್ಪಾದನೆ ಆಗುತ್ತದೆ. 94 ಲಕ್ಷ ಹಸುಗಳಿವೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾದ ದೊಡ್ಡ ದೊಡ್ಡ ಫಾರ್ಮ್ಗಳಲ್ಲಿ ಹಸುಗಳನ್ನು ಸಾಕಲಾಗುತ್ತದೆ. ಹೀಗಾಗಿ, ಅಲ್ಲಿ ಹಾಲಿನ ಉತ್ಪಾದನೆ ತೀರಾ ಹೆಚ್ಚಿನ ಮಟ್ಟದಲ್ಲಿದೆ.

ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವುದು ಅಮೆರಿಕಕ್ಕೆ ಅನಿವಾರ್ಯ. 2023ರಲ್ಲಿ ಅಮೆರಿಕ 8 ಬಿಲಿಯನ್ ಡಾಲರ್ ಮೌಲ್ಯದ ಡೈರಿ ಉತ್ಪನ್ನಗಳ ರಫ್ತು ಮಾಡಿದೆ. ಸ್ಕಿಮ್ಡ್ ಹಾಲಿನ ಪುಡಿ, ಬೆಣ್ಣೆ, ವೇ ಪ್ರೋಟೀನ್, ಮಕ್ಕಳ ಹಾಲಿನ ಪುಡಿ ಇವು ಅಮೆರಿಕದ ಪ್ರಮುಖ ಉತ್ಪನ್ನಗಳು.

ಭಾರತವು ಡೈರಿ ಸೆಕ್ಟರ್ ಅನ್ನು ರಕ್ಷಿಸಲು ಏನು ಕಾರಣ?

ಭಾರತದಲ್ಲಿ ಹೈನೋದ್ಯಮ ಹಾಗೂ ಕೃಷಿ ಕ್ಷೇತ್ರ ಬಹಳ ಸೂಕ್ಷ್ಮವಾದುದು. ಶೇ. 60ರಷ್ಟು ಜನಸಂಖ್ಯೆಗೆ ಈ ಕ್ಷೇತ್ರಗಳೇ ಆಧಾರವಾಗಿವೆ. ಅದರಲ್ಲೂ ಹೈನೋದ್ಯಮವು ಬಹಳಷ್ಟು ಸಣ್ಣ ರೈತರಿಗೆ ಪ್ರಮುಖ ಆದಾಯಮೂಲವಾಗಿದೆ. ಆಮದಿತ ಉತ್ಪನ್ನಗಳಿಂದ ಭಾರತದ ಹೈನೋದ್ಯಮ ಕುಸಿದುಹೋದರೆ ಹೈನುಗಾರಿಕೆಯನ್ನೇ ನಂಬಿಕೊಂಡವರಿಗೆ ಕಷ್ಟವಾಗುತ್ತದೆ. ಹೀಗಾಗಿ, ಭಾರತ ಸರ್ಕಾರವು ಶತಾಯಗತಾಯ ಡೈರಿ ಸೆಕ್ಟರ್ ಅನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಇಲ್ಲಿ ವಿವಿಧ ಡೈರಿ ಉತ್ಪನ್ನಗಳ ಮೇಲೆ ಭಾರತವು ಶೇ. 60-100ರಷ್ಟು ಆಮದು ಸುಂಕ ವಿಧಿಸುತ್ತದೆ.

ಅಮೆರಿಕದಲ್ಲಿ ಹಾಲಿನ ದರಗಳು ಎಷ್ಟಿವೆ?

ಭಾರತದಲ್ಲಿ ಒಂದು ಲೀಟರ್ ಹಾಲಿನ ಬೆಲೆ 45 ರೂನಿಂದ ಹಿಡಿದು 70 ರೂವರೆಗೂ ಇದೆ. ಅಮೆರಿಕದಲ್ಲಿ ಒಂದು ಲೀಟರ್ ಹಾಲಿನ ಬೆಲೆ 90 ಸೆಂಟ್ಸ್ನಿಂದ ಆರಂಭವಾಗಿ 1.3 ಡಾಲರ್ವರೆಗೂ ಇದೆ. ಅಂದರೆ, ಸುಮಾರು 80 ರೂನಿಂದ 105 ರೂವರೆಗೂ ಬೆಲೆ ಇದೆ. ಅಮೆರಿಕದಲ್ಲಿ ಹಾಲಿನ ಬೆಲೆ ಭಾರತದಕ್ಕಿಂತ ಹೆಚ್ಚಿದೆಯಾದರೂ, ಒಂದು ಲೀಟರ್ ಹಾಲಿನ ಉತ್ಪಾದನೆಗೆ ಆಗುವ ವೆಚ್ಚ ಭಾರತದಕ್ಕಿಂತ ಅಮೆರಿಕದಲ್ಲಿ ಕಡಿಮೆ ಇದೆ.

ಅಮೆರಿಕವು ಸ್ಕಿಮ್ಡ್ ಮಿಲ್ಕ್ ಪೌಡರ್ ಮತ್ತು ವೇ ಪ್ರೋಟೀನ್ ಪೌಡರ್ಗಳನ್ನು ಕಡಿಮೆ ಬೆಲೆಗೆ ತಯಾರಿಸುತ್ತದೆ. ಇವುಗಳನ್ನು ಸಂಸ್ಕರಿತ ಆಹಾರ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳನ್ನು ಆಮದು ಮಾಡಿಕೊಂಡರೆ ಸ್ಥಳೀಯ ಹಾಲಿನ ಪುಡಿ ಮತ್ತು ವೇ ಪ್ರೋಟೀನ್ಗಳಿಗೆ ಬೇಡಿಕೆ ಕಡಿಮೆ ಆಗಬಹುದು. ಅಂತಿಮವಾಗಿ ಭಾರತದ ಹೈನೋದ್ಯಮ ಹಾಗೂ ಅದನ್ನು ನಂಬಿಕೊಂಡಿರುವ ಕೋಟ್ಯಂತರ ರೈತ ಕುಟುಂಬಗಳಿಗೆ ಘಾಸಿಯಾಗಬಹುದು ಎನ್ನುವ ಆತಂಕ ಭಾರತದ್ದು.


Spread the love
Share:

administrator

Leave a Reply

Your email address will not be published. Required fields are marked *